ಉಡುಪಿ

ಬನ್ನಂಜೆಯಲ್ಲಿ ಹೆದ್ದಾರಿ ಡಿವೈಡರ್ ಒಡೆದು ಹಾಕಿದ ಪ್ರಕರಣ ,ಬಿಜೆಪಿ ಭ್ರಷ್ಚಚಾರಕ್ಕೆ ಹಿಡಿದ ಕೈ ಕನ್ನಡಿ : ಬನ್ನಂಜೆ ಸುರೇಶ್ ಶೆಟ್ಟಿ ಆಕ್ರೋಶ

ಉಡುಪಿ: ಬನ್ನಂಜೆಯ ಬಟ್ಟೆಯಂಗಡಿ ಮಾಲೀಕನಿಗಾಗಿ ಉಡುಪಿ ನಗರಸಭೆ ರಾಷ್ಟ್ರೀಯ ಹೆದ್ದಾರಿಯ ಡಿವೈಡರನ್ನೇ ಒಡೆದು ಹಾಕಿರುವುದು ಬಿಜೆಪಿಯ ಭ್ರಷ್ಟಾಚಾರ ಹಿಡಿದ ಕೈ ಕನ್ನಡಿಯಾಗಿದೆ ಎಂದು ನಗರ ಸಭೆ ನಾಮನಿರ್ದೇಶಿತ ಸದಸ್ಯ ಬನ್ನಂಜೆ ಸುರೇಶ್ ಶೆಟ್ಟಿ ಅರೋಪಿಸಿದ್ದಾರೆ.

ಕಳೆದ ಎರಡು ವರ್ಷ ಗಳಿಂದ ಬನ್ನಂಜೆ ಬಟ್ಟೆ ಮಳಿಗೆಯಿಂದ ಸ್ಥಳೀಯರಿಗೆ ಭಾರೀ ತೊಂದರೆ ಎದುರಾಗಿದೆ.ಹೆದ್ದಾರಿಗೆ ಬಿಡಬೇಕಾದ ಜಾಗದಲ್ಲಿ ಗಿಡಗಳನ್ನು ನೆಟ್ಟು ಅಕ್ರಮಿಸಿಕೊಂಡಿದ್ದಾರೆ.ಇದನ್ನು‌ ನಗರಸಭೆ ಮತ್ತು ಹೆದ್ದಾರಿ ಪ್ರಾಧಿಕಾರ ವಶ ಪಡಿಸಿಕೊಂಡು ರಸ್ತೆ ಅಗಲೀಕರಣ ಗೊಳಿಸುವ ಬದಲು ,ಬಟ್ಟೆ ಅಂಗಡಿಗೆ ಬರುವ ವಾಹನಗಳಿಗೆ ಸುಲಭವಾಗಲು ಹೆದ್ದಾರಿಯ ಡಿವೈಡರ್ ಒಡೆದಿರುವುದು ನಾಚೀಕೆಗೆಡಿತನ ಎಂದು ಆಕ್ರೋಶ ವ್ಯಕ್ತಡಿಸಿದ್ದಾರೆ.

ನಗರಸಭೆ ಬಿಜೆಪಿ ಆಡಳಿತ ಭ್ರಷ್ಟಚಾರದಲ್ಲಿ ಮುಳುಗಿ ಹೋಗಿದೆ‌.ಸಾರ್ವಜನಿಕರ ಪ್ರತಿಯೊಂದು ಕೆಲಸ ಕಾರ್ಯಕ್ಕೂ ಜನ ಅಲೆದಾಡುವಂತಹ ಪರಿಸ್ಥಿತಿ ಎದುರಾಗಿದೆ.ಈ ಪ್ರಕರಣದಲ್ಲಿ ನಗರಸಭೆ ಆಡಳಿತ ಸಂಪೂರ್ಣ ವಾಗಿ ಶಾಮೀಲಾಗಿದೆ.

ಬನ್ನಂಜೆಯಿಂದ ನಿಟ್ಟೂರಿಗೆ ಹೊಗುವ ಜನರಿಗೆ ಈ ಬಟ್ಟೆ ಅಂಗಡಿ ಬಂದ ಬಳಿಕ ಭಾರೀ ಸಮಸ್ಯೆ ಉಂಟಾಗಿದೆ.ಹೀಗಾಗಿ ಜನರಿಗೆ ಸುಲಭ ಸಂಚಾರಕ್ಕೆ ಅನುವು ಮಾಡಿಕೊಡಲು ಬಟ್ಟೆ ಅಂಗಡಿ ಮುಂಭಾಗದ ಸೆಟ್ ಬ್ಯಾಕ್ ಜಾಗವನ್ನು ಅಗಲೀಕರಣ ಮಾಡಿಕೊಡಬೇಕು ಎಂದು ಸುರೇಶ್ ಶೆಟ್ಟಿ ಬನ್ನಂಜೆ ಅಗ್ರಹಿಸಿದ್ದಾರೆ.ಅಷ್ಟೇ ಅಲ್ಲದೇ ಕಾನೂನುಬಬಾಹಿರವಾಗಿ ಸೆಟ್ ಬ್ಯಾಕ್ ಜಾಗದಲ್ಲಿ ಕೆಫೆಗಳನ್ನು ನಿರ್ಮಿಸಿದ್ದು ಇದನ್ನು ಕೂಡ ನಗರ ಸಭೆ ತೆರವುಗೊಳಿಸುವಂತೆ ಅಗ್ರಹಿಸಿದ್ದಾರೆ.

ನಗರಸಭೆ ಆಡಳಿತಕ್ಕೆ ಬಟ್ಟೆ ಮಾಲೀಕ ನ ಮೇಲೆ ಇರುವ ಪ್ರೀತಿ ಬಡ ಅಂಗಡಿಗಳ ಮೇಲು ಇರಲಿ,ಅದಿ ಉಡುಪಿಯಿಂದ ಮಣಿಪಾಲದವರೆಗೂ ಇರುವ ಬಡ ಕಿರಾಣಿ ಅಂಗಡಿಗಳ ಮುಂದಿರುವ ಡಿವೈಡರ್ ಗಳನ್ನು ತೆರವುಗೊಳಿಸಿ ಬಡವರಿಗೂ ಸಹಾಯ ಮಾಡಿ ಎಂದು ಆಗ್ರಹಿಸಿದರು.

Related posts

ಉಡುಪಿ‌ ಶ್ರೀ ಕೃಷ್ಣ ಮಠದಲ್ಲಿ ದೀಪಾವಳಿ ಸಂಭ್ರಮ

Udupilive News

ಉಡುಪಿ ಜಾಮಿಯ ಮಸೀದಿಗೆ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಸೌಹಾರ್ದ ಭೇಟಿ

Udupilive News

ಛತ್ತೀಸ್ಗಢದಲ್ಲಿ ಕ್ರೈಸ್ತ ಧರ್ಮ ಭಗಿನಿಯರ ಮೇಲೆ ಸುಳ್ಳು ಪ್ರಕರಣ” ದಾಖಲಿಸಿ ಬಂಧನ ಖಂಡಿಸಿ ಪ್ರತಿಭಟನೆ

Udupilive News

Leave a Comment