ಉಡುಪಿಕಾಪುಕಾರ್ಕಳಕುಂದಾಪುರಬೈಂದೂರುಬ್ರಹ್ಮಾವರರಾಜ್ಯಹೆಬ್ರಿ

ದುಬೈನ ಫಾರ್ಚ್ಯೂನ್ ಗ್ರೂಪ್ ಆಫ್ ಹೋಟೆಲ್ಸ್ ಸಂಸ್ಥೆಗೆ 2.5 ಕೋಟಿ ವಂಚನೆ | ಜೆ.ಎಂ.ಎಫ್.ಸಿ‌ ನ್ಯಾಯಾಲಯ ಆರೋಪಿಗೆ ನೀಡಿದ್ದ ಜಾಮೀನು ಆದೇಶ ರದ್ದುಗೊಳಿಸಿದ ಹೈಕೋರ್ಟ್

ಉಡುಪಿ: ಅನಿವಾಸಿ ಭಾರತೀಯ, ತಾಲೂಕಿನ ವಕ್ವಾಡಿ ಮೂಲದ ಉದ್ಯಮಿ ಪ್ರವೀಣ್ ಕುಮಾರ್ ಶೆಟ್ಟಿಯವರು ಆಡಳಿತ ನಿರ್ದೇಶಕರಾಗಿರುವ ದುಬೈನ ಹೋಟೆಲೊಂದಕ್ಕೆ ಅಕೌಂಟೆಂಟ್ ಆಗಿ ಸೇರಿ ಹಂತಹಂತವಾಗಿ 2.5 ಕೋಟಿಗೂ ಅಧಿಕ ಹಣ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಬಾರ್ಕೂರು‌ ಮೂಲದ ನಾಗೇಶ್ ಪೂಜಾರಿ (31) ಎಂಬಾತ ಜೆ.ಎಂ.ಎಫ್.ಸಿ ನ್ಯಾಯಾಲಯದ ಮುಂದೆ ಶರಣಾಗಿದ್ದರಿಂದ 24-8-2023ರಲ್ಲಿ ಜಾಮೀನನ್ನು ನ್ಯಾಯಾಲಯ ಮಂಜೂರು ಮಾಡಿತ್ತು. ಈ ಜಾಮೀನು ಆದೇಶವನ್ನು ಸರಕಾರವು 2ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಉಡುಪಿಯಲ್ಲಿ ಪ್ರಶ್ನಿಸಿದ್ದು ಅಲ್ಲಿ ಜೆ.ಎಂ.ಎಫ್.ಸಿ ನ್ಯಾಯಾಲಯ ಮಂಜೂರು ಮಾಡಿದ್ದ ಜಾಮೀನು ಆದೇಶವನ್ನು ಜಿಲ್ಲಾ ನ್ಯಾಯಾಲಯ ರದ್ದುಗೊಳಿಸಿತ್ತು.

ಈ ಆದೇಶವನ್ನು ಆರೋಪಿ ತನ್ನ ವಕೀಲರ ಮೂಲಕ ಕರ್ನಾಟಕ ಉಚ್ಚನ್ಯಾಯಾಲಯದಲ್ಲಿ ಪ್ರಶ್ನಿಸಿದ್ದ. ವಾದ-ಪ್ರತಿವಾದ ಆಲಿಸಿದ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ನಾಗಪ್ರಸನ್ನ ಅವರು ಎರಡೂ ನ್ಯಾಯಾಲಯಗಳ ಆದೇಶವನ್ನು ರದ್ದುಗೊಳಿಸಿ‌ ಬ್ರಹ್ಮಾವರ ಜೆ.ಎಂ.ಎಫ್.ಸಿ ನ್ಯಾಯಾಲಯಕ್ಕೆ ಈ ಜಾಮೀನು ಅರ್ಜಿಯನ್ನು ಪುನರ್ ವಿಚಾರಣೆಯನ್ನು ನ್ಯಾಯೋಚಿತವಾಗಿ ನಡೆಸಿ ಸೂಕ್ತ ಆದೇಶ ಮಾಡಲು ನಿರ್ದೇಶಿಸಿದ್ದಾರೆ.

ಫಾರ್ಚೂನ್ ಗ್ರೂಫ್ ಪರ ಹೈಕೋರ್ಟ್ ನ್ಯಾಯವಾದಿ ಪ್ರಸನ್ನ ಶೆಟ್ಟಿ ಕೆರೆಬೆಟ್ಟು ವಾದಿಸಿದ್ದರು.

Related posts

ಪ್ರಸಾದ್ ರಾಜ್ ಕಾಂಚನ್ ಹಟ್ಟು ಹಬ್ಬ ಪ್ರಯುಕ್ತ ನೇತ್ರದಾನ ಮತ್ತು ನೇತ್ರದಾನ ಮಾಹಿತಿ ಶಿಬಿರ

Udupilive News

ಉಡುಪಿ ಜಾಮೀಯ ಮಸೀದಿಯಲ್ಲಿ ರಕ್ತದಾನ ಶಿಬಿರ ಉದ್ಘಾಟನೆ

Udupilive News

ಕೊರಗ ಬುಡಕಟ್ಟು ಸಮುದಾಯದವರಿಗೆ ಮೂಲಭೂತ ದಾಖಲಾತಿಗಳಿಗೆ ಸಂಬಂಧಿಸಿದ ತರಬೇತಿ

Udupilive News

Leave a Comment