ಉಡುಪಿಕುಂದಾಪುರಬೈಂದೂರು

ಶಂಕರನಾರಾಯಣ: ಮಳೆಗೆ ಅಪಾರ ಹಾನಿ: ಮರ ಬಿದ್ದು ಕಾರಿಗೆ ಹಾನಿ

ಕುಂದಾಪುರ: ಸೋಮವಾರ ರಾತ್ರಿಯ ಭಾರೀ ಗಾಳಿ – ಮಳೆಗೆ ಶಂಕರನಾರಾಯಣ ಗ್ರಾಮದ ಹಲವೆಡೆ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಮಾವಿನಕೊಡ್ಲುವಿನ ಯುವಕನೊಬ್ಬನಿಗೆ ಸಿಡಿಲು ಬಡಿದು ಗಾಯಗೊಂಡ ಘಟನೆ ನಡೆದಿದೆ.

ಶಂಕನರಾಯಣ ಗ್ರಾಮದ ಅರಣ್ಯ ಇಲಾಖೆಯ ಅಧಿಕಾರಿಗಳ ಕಚೇರಿ ಬಳಿ ನಿಲ್ಲಿಸಿದ್ದ ಸ್ಥಳೀಯ ಹೊಟೇಲ್‌ ಮಾಲಕ ಮನೀಶ್‌ ಶೆಟ್ಟಿಯವರ ಕಾರಿನ ಮೇಲೆ ಬೃಹತ್‌ ಗಾತ್ರದ ಮರ ಬಿದ್ದು, ಕಾರು ಸಂಪೂರ್ಣ ಜಖಂಗೊಂಡಿದೆ.

ಅದೃಷ್ಟವಶಾತ್‌ ಕಾರಿನಲ್ಲಿ ಯಾರೂ ಇರದಿದ್ದ ಕಾರಣ, ಯಾವುದೇ ಅಪಾಯ ಸಂಭವಿಸಿಲ್ಲ. ಹೊಟೇಲ್‌ನ ನಾಮಫಲಕಕ್ಕೆ ಹಾನಿಯಾಗಿದೆ. ಮರ ರಸ್ತೆ ಬದಿಯ ವಿದ್ಯುತ್‌ ತಂತಿಗಳ ಮೇಲೂ ಬಿದ್ದ ಪರಿಣಾಮ ಕಂಬಗಳು ಧರೆಗುರುಳಿವೆ

Related posts

ಕಾರು ಮತ್ತು ಟಿಪ್ಪರ್ ಮದ್ಯೆ ಭೀಕರ ಅಫಘಾತ.ಟಿಪ್ಪರ್ ಅಡಿಗೆ ಬಿದ್ದು ಚಾಲಕ ಸಾವು

Udupilive News

ಚಕ್ರವರ್ತಿ ಸೂಲಿಬೆಲೆಯವರು ಸುಳ್ಳನ ಚಕ್ರವರ್ತಿ.ಉಡುಪಿಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿಕೆ

Udupilive News

ಭಯದ ಜಗತ್ತಿಗೆ ಮೇರಿ ಮಾತೆ ಭರವಸೆಯ ದಾರಿದೀಪ – ಬಿಷಪ್ ಜೆರಾಲ್ಡ್ ಲೋಬೊ

Udupilive News

Leave a Comment