ಉಡುಪಿಕುಂದಾಪುರಬ್ರಹ್ಮಾವರ

ರಾಷ್ಟ ಮಟ್ಟದ ಈಜು ಸ್ಪರ್ಧೆಗೆ ಆಯ್ಕೆಯಾದ ಕೋಡಿ-ಕನ್ಯಾಣ ಗೋಪಾಲ್ ಖಾರ್ವಿ

ಕೋಟ: 25ನೇ ಸ್ಟೇಟ್ ಮಾಸ್ಟರ್ ಸ್ವಿಮ್ಮಿಂಗ್ ಚಾಂಪಿಯನ್ ಶಿಪ್ ಇವರು ಆಯೋಜಿಸಿದ ರಾಜ್ಯ ಮಟ್ಟದ ಈಜು ಸ್ಪರ್ಧೆಯಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ ಗುಂಡ್ಮಿ ನಿವಾಸಿ ಗೋಪಾಲ್ ಖಾರ್ವಿ ಕೋಡಿ-ಕನ್ಯಾನ ಬೋಪಲ್ ನಲ್ಲಿ ನಡೆಯುವ ರಾಷ್ಟ್ರ ಮಟ್ಟದ ಈಜು ಸ್ಪರ್ಧೆಗೆ ಆಯ್ಕೆ ಆಗಿದ್ದಾರೆ.

ಇವರು 400ಮೀ ಫ್ರೀಸ್ಟೈಲ್ ಚಿನ್ನದ ಪದಕ, 50ಮೀ ಬಟರ್ ಫ್ಲೈ ಚಿನ್ನದ ಪದಕ, 200ಮೀ ಫ್ರೀಸ್ಟೈಲ್ ಬೆಳ್ಳಿ ಪದಕ, 100ಮೀ ಫ್ರೀಸ್ಟೈಲ್ ಬೆಳ್ಳಿ ಪದಕ, 4×50 ಫ್ರೀಸ್ಟೈಲ್ ರಿಲೇ ಬೆಳ್ಳಿ ಪದಕ, 4×100 ಮಿಡ್ಲೆ ರಿಲೇಯಲ್ಲಿ ಬೆಳ್ಳಿ ಪದಕ ಪಡೆದಿರುತ್ತಾರೆ. ಒಟ್ಟು 6 ಪದಕಗಳನ್ನು ಪಡೆದಿರುತ್ತಾರೆ.

ಇವರು ಉಡುಪಿಯ ಅಜ್ಜರಕಾಡು ಈಜು ಕೊಳದ ತರಬೇತುದಾರರಾಗಿರುತ್ತಾರೆ. 2013 ರಲ್ಲಿ ಕೈ ಕಾಲುಗಳನ್ನು ಕೋಳದಿಂದ ಬಂಧಿಸಿ ಅರಬ್ಬೀ ಸಮುದ್ರದಲ್ಲಿ 3.71 ಕಿ.ಮೀ. ಈಜಿ ಗಿನ್ನಿಸ್ ವಿಶ್ವ ದಾಖಲೆ ಮಾಡಿದ್ದಾರೆ.

ಶ್ರೀ ಗೋಪಾಲ್ ಖಾರ್ವಿ ಕೋಡಿ ಕನ್ಯಾನ ಇವರಿಗೆ ಭಾರತ ಮತ್ತು ಅಮೇರಿಕನ್ ವಿಶ್ವವಿದ್ಯಾಲಯವು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಶಸ್ತಿಗಳಾದ “BEST SPORTS ACHIVER AWARD”* ಮತ್ತು
“CERTIFICATE OF EXCELLENCE AWARD “ ನೀಡಿ ಗೌರವಿಸಿದ್ದು, ಈ ಹಿಂದೆ ಗೋಪಾಲ್ ಖಾರ್ವಿಯವರು ಕರ್ನಾಟಕದ ಅತ್ಯುತ್ತಮ ಪ್ರಶಸ್ತಿಗಳಾದ ಕರ್ನಾಟಕ ರಾಜ್ಯೋತ್ಸವ ಹಾಗೂ ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿಯನ್ನು, ರಾಜ್ಯ ಮಟ್ಟರ ಸಂದೇಶ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದು ಇವರ ಈ ಸಾಧನೆಯನ್ನು ಮನಗಂಡ ರಾಜ್ಯ ಸರಕಾರವು ಕರ್ನಾಟಕದ ಕೊಂಕಣಿ 9ನೇ ತರಗತಿಯ ಪಠ್ಯ ಪುಸ್ತಕದಲ್ಲಿ ಜೀವನ ಚರಿತ್ರ ಗೋಪಾಲ್ ಖಾರ್ವಿ ಎಂಬ ಪಾಠವನ್ನು ಪ್ರಕಟಿಸಿರುವುದು ಅವರ ಸಾಧನೆಗೆ ಸಂದ ಅತ್ಯಂತ ಗೌರವಯುತ ಪ್ರಶಸ್ತಿಗಳೊಂದು

Related posts

ಪ್ರತಿಷ್ಟಿತ ಭಾರತ್ ಬ್ಯಾಂಕಿಗೆ ಬೆಸ್ಟ್ ಹೆಚ್ ಅರ್ ಮ್ಯಾನೇಜ್ಮೆಂಟ್ ಅವಾರ್ಡ್

Udupilive News

ಬಿಪಿಎಲ್ ಕಾರ್ಡ್ ರದ್ದತಿ ತೀರ್ಮಾನ ರಾಜ್ಯ ಕಾಂಗ್ರೆಸ್ ಸರಕಾರದ ದಿವಾಳಿತನಕ್ಕೆ ಜ್ವಲಂತ ಸಾಕ್ಷಿ : ಕಿಶೋರ್ ಕುಮಾರ್ ಕುಂದಾಪುರ

Udupilive News

ಕೆಲಸವಿಲ್ಲದೇ ಕಂಗಲಾಗಬೇಡಿ ,ಕೈ ತುಂಬಾ ಸಂಬಳ ಕೊಡುವ ಕೆಲಸಗಳು ಇಲ್ಲಿದೆ.

Udupilive News

Leave a Comment