ಉಡುಪಿಕಾಪು

ನ.27ರಂದು ಬೃಹತ್ ಸಂಪ್ರದಾಯಿಕ ಗೂಡುದೀಪ ಸ್ಪರ್ಧೆ ಮತ್ತು ಪ್ರದರ್ಶನ, ಮಾರಾಟ

ಉಡುಪಿ: ಶಬರಿಮಲೈ ಅಯ್ಯಪ್ಪ ಸೇವಾ ಸಮಾಜಂ ಉಡುಪಿ ಜಿಲ್ಲಾ ಘಟಕದ ವತಿಯಿಂದ ಸಾಸ್ ಉಡುಪಿ ಜಿಲ್ಲಾ ಮಹಿಳಾ ಘಟಕ, ಶಿರಡಿ ಸಾಯಿಬಾಬಾ ಮಂದಿರ ಕೊಡವೂರು ಹಾಗೂ ಎಪಿಎಂಸಿ ರಕ್ಷಣಾ ಸಮಿತಿಯ ಸಹಭಾಗಿತ್ವದಲ್ಲಿ ಬೃಹತ್ ಸಂಪ್ರದಾಯಿಕ ಗೂಡುದೀಪ ಸ್ಪರ್ಧೆ ಮತ್ತು ಪ್ರದರ್ಶನ ಮಾರಾಟವನ್ನು ಇದೇ ನ. 27ರಂದು ಬೆಳಿಗ್ಗೆ 8.30ರಿಂದ 12.30ರ ವರೆಗೆ ಕೊಡವೂರು ತೋಟದಮನೆಯ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ಶಬರಿಮಲೈ ಅಯ್ಯಪ್ಪ ಸೇವಾ ಸಮಾಜಂ ಉಡುಪಿ ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷ ರಾಧಾಕೃಷ್ಣ ಮೆಂಡನ್ ತಿಳಿಸಿದರು.

ಉಡುಪಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಪ್ರದಾಯಿಕ ಗೂಡು ದೀಪ ಸ್ಪರ್ಧೆಯ ಮೂಲಕ ನಶಿಸುತ್ತಿರುವ ಗೂಡುದೀಪಗಳಿಗೆ ಮತ್ತೆ ಜೀವ ತುಂಬುವ ಸಲುವಾಗಿ ಹಾಗೂ ಪ್ಲಾಸ್ಟಿಕ್ ಥರ್ಮಕೋಲ್ ಪರಿಸರ ಹಾನಿಯಾಗುತ್ತಿರುವುದಿಂದ ಇದರ ಬಳಕೆ ಮಾಡದಂತೆ ಜನಜಾಗೃತಿ ಮೂಡಿಸುವ ಉದ್ದೇಶದಿಂದ ಈ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಉಪಾಧ್ಯಕ್ಷ ವಿಜಯ ಕೊಡವೂರು ಮಾತನಾಡಿ, ಸ್ಪರ್ಧೆಯು 16ವರ್ಷಕ್ಕಿಂತ ಮೇಲ್ಪಟ್ಟ ಸೀನಿಯರ್ ವಿಭಾಗ ಹಾಗೂ 10ನೇ ತರಗತಿಯೊಳಗಿನ ಜೂನಿಯರ್ ವಿಭಾಗದಲ್ಲಿ ನಡೆಯಲಿದ್ದು, ಜೂನಿಯರ್ ವಿಭಾಗದಲ್ಲಿ 16 ವರ್ಷ ಕೆಳಗಿನ ಎಲ್ಲಾ ಸಾರ್ವಜನಿಕರು ಭಾಗವಹಿಸಬಹುದು. ಸೀನಿಯರ್ ವಿಭಾಗದಲ್ಲಿ ಪ್ರಥಮ 5,555, ದ್ವಿತೀಯ 4,444 ಹಾಗೂ ತೃತೀಯ 3,333 ಮತ್ತು 5 ಜನರಿಗೆ ತಲಾ 1000 ರೂಪಾಯಿಗಳ ಸಮಾಧಾನಕರ ಬಹುಮಾನ ನೀಡಲಾಗುವುದು. ಜೂನಿಯರ್ ವಿಭಾಗದಲ್ಲಿ ಪ್ರಥಮ 4,444, ದ್ವಿತೀಯ 3,333, ತೃತೀಯ 2,222 ಮತ್ತು 5 ಜನರಿಗೆ ತಲಾ 1000 ರೂಪಾಯಿಗಳ ಸಮಾಧಾನಕರ ಬಹುಮಾನ ನೀಡಲಾಗುವುದು ಎಂದು ತಿಳಿಸಿದರು.

Related posts

ಉಡುಪಿ‌ ಶ್ರೀ ಕೃಷ್ಣ ಮಠದಲ್ಲಿ ದೀಪಾವಳಿ ಸಂಭ್ರಮ

Udupilive News

ಅ.29ರಂದು ಇಂದ್ರಾಳಿ ರೈಲ್ವೆ ಸೇತುವೆ ಕಾಮಗಾರಿ ವಿಳಂಬ ವಿರೋಧಿಸಿ ಬೃಹತ್ ಪ್ರತಿಭಟನೆ

Udupilive News

ಉಡುಪಿಯಲ್ಲಿ ಮೇಘಸ್ಪೋಟ – ನಾಪತ್ತೆಯಾದ ವೃದ್ಧೆ ಶವವಾಗಿ ಪತ್ತೆ

Udupilive News

Leave a Comment