ಉಡುಪಿಕಾಪುಕಾರ್ಕಳಕುಂದಾಪುರಬೈಂದೂರುಬ್ರಹ್ಮಾವರಹೆಬ್ರಿ

ಉಡುಪಿ: ಬೈಕ್ ಗೆ ಕಾರು ಡಿಕ್ಕಿ; ಕಾಲೇಜು ವಿದ್ಯಾರ್ಥಿ ಮೃತ್ಯು

ಉಡುಪಿ: ಕಾರೊಂದು ಬೈಕ್ ಢಿಕ್ಕಿ ಹೊಡೆದ ಪರಿಣಾಮ ಕಾಲೇಜು ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ಅ.7 ರ ಸೋಮವಾರ ರಾತ್ರಿ 10.30ರ ಸುಮಾರಿಗೆ ಉಡುಪಿ ಎಂಜಿಎಂ ಕಾಲೇಜು ಎದುರಿನ ಡೈವರ್ಶನ್ ಪಾಯಿಂಟ್‌ನಲ್ಲಿ ನಡೆದಿದೆ.

ಮೃತರನ್ನು ಹಿರಿಯಡ್ಕ ನಿವಾಸಿ, ತೆಂಕನಿಡಿಯೂರು ಕಾಲೇಜಿನ ಪದವಿ ವಿದ್ಯಾರ್ಥಿ ವೀರಜ್(18) ಎಂದು ಗುರುತಿಸಲಾಗಿದೆ.

ವೀರಜ್ ತನ್ನ ಬೈಕ್ ನಲ್ಲಿ‌ ಉಡುಪಿ ಕಡೆಯಿಂದ ಎಂಜಿಎಂ ಕಾಲೇಜಿನ‌ ಮುಂಭಾಗದ ಡೈವರ್ಶನ್ ನಲ್ಲಿ ತಿರುವು ಪಡೆದು ಮಣಿಪಾಲ ಕಡೆಗೆ ಹೋಗುತ್ತಿದ್ದರು. ಈ ವೇಳೆ ಮಣಿಪಾಲ ಕಡೆಯಿಂದ ಉಡುಪಿ ಕಡೆಗೆ ಬರುತ್ತಿದ್ದ ಕಾರು ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಇದರಿಂದ ವೀರಜ್ ಬೈಕ್ ಸಮೇತ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದು, ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರೆಂದು ತಿಳಿದುಬಂದಿದೆ.

Related posts

ಕೊನೆಗೂ ಅಲೂರಿನ ಪಿಸ್ತೂಲ್ ಗ್ಯಾಂಗ್ ಅರೆಸ್ಟ್.ಗಂಗೊಳ್ಳಿ ಪೊಲೀಸರ ಕಾರ್ಯಚರಣೆ.

Udupilive News

ಕುಂದಾಪುರ: ನಕಲಿ ಚಿನ್ನ ಕೊಟ್ಟು ಅಸಲಿ ಚಿನ್ನ ಪಡೆದು ಅಂಗಡಿ ಮಾಲೀಕನಿಗೆ ವಂಚನೆ

Udupilive News

ಪ್ರಸಾದ್ ರಾಜ್ ಕಾಂಚನ್ ಹಟ್ಟು ಹಬ್ಬ ಪ್ರಯುಕ್ತ ನೇತ್ರದಾನ ಮತ್ತು ನೇತ್ರದಾನ ಮಾಹಿತಿ ಶಿಬಿರ

Udupilive News

Leave a Comment