ಉಡುಪಿ

ಮಣಿಪಾಲದ ಎರಡು ಬಾರ್ ಗಳ‌ ಲೈಸೆನ್ಸ್ ರದ್ದು ಪಡಿಸುವಂತೆ ಡಿಸಿ ಸೂಚನೆ

: ಮಣಿಪಾಲ ದಲ್ಲಿ ಅಕ್ರಮವಾಗಿ ನಿಯಮ ಮೀರಿ ನಡೆಸುತ್ತಿದ್ದ ಎರಡು ಬಾರ್ ಅ್ಯಂಡ್ ರೆಸ್ಟೋರೆಂಟ್ ಗಳ ಲೈಸನ್ಸ್ ರದ್ದು ಗೊಳಿಸುವಂತೆ ಉಡುಪಿ ಜಿಲ್ಲಾಧಿಕಾರಿ ನಗರ ಸಭೆ ಅಯುಕ್ತರಿಗೆ ಸೂಚನೆ ನೀಡಿದ್ದಾರೆ.

ಮಣಿಪಾಲದ ಅಂಬಾಗಿಲು ರಸ್ತೆಯಲ್ಲಿರುವ ಸೆವೆಂತ್ ಹೆವೆನ್ ಎಕ್ಸ್ಟೆಸ್ಸಿ ಹಾಗೂ ಎಂ ಪರ್ಕಳ ರಸ್ತೆಯಲ್ಲಿರುವ ಡಿ ಟಿ ( dee tee) ಬಾರ್ ಗಳ ( ಪಬ್) ಗಳ ಪರವಾನಿಗೆ ರದ್ದು ಪಡಿಸಲು ಸೂಚನೆ ನೀಡಿದ್ದಾರೆ.

ಹೆವೆನ್ ಬಾರಿನಲ್ಲಿ ನಿಯಮ ಮೀರಿ ತಡ ರಾತ್ರಿ ವರೆಗೂ ಪಬ್ ಗಳನ್ನು ತೆರೆದಿಡುತ್ತಿರುವುದಲ್ಲದೇ ,ಪಬ್ ನಲ್ಲಿ ಪಾರ್ಟಿ,ಪ್ಯಾಶನ್ ಶೋ ,ಡ್ಯಾನ್ಸ್ ಪಾರ್ಟಿ ಮನೋರಂಜನಾ ಕಾರ್ಯಕ್ರಮ ಅಯೋಜಿಸಲಾಗುತ್ತಿದ್ದು,ಈ ಬಗ್ಗೆ ಪೊಲೀಸರು ದಾಳಿ ನಡೆಸಿ ಪ್ರಕರಣ ದಾಖಲಿಸಿದ್ದರು.ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಸೇರುತ್ತಿದ್ದರು.ಈ ಬಾರಿನ ಮಾಲೀಕರ ಮೇಲೆ ಇತರ ಪ್ರಕರಣಗಳ ಬಗ್ಗೆ ಅರೋಪಗಳಿರುವ ಕಾರಣ ಪೊಲೀಸ್ ವರಿಷ್ಟಾಧಿಕಾರಿಗಳ ವರದಿಯಂತೆ ಬಾರಿನ ವಾಣಿಜ್ಯ ಪರವಾನಿಗೆ ರದ್ದಿಗೆ ಸೂಚಿಸಿದೆ.

ಮಣಿಪಾಲದಿಂದ ಪರ್ಕಳಕ್ಕೆ ಹೋಗುವ ರಸ್ತೆಯಲ್ಲಿರುವ ಡಿಟಿ ಬಾರಿನಲ್ಲಿ ಕೂಡ ಅಬಕಾರಿ ಇಲಾಖೆಯ ನಿಯಮ ಮೀರಿ,ಪಾರ್ಟಿ ಅಯೋಜನೆ ಮಾಡಲಾಗುತ್ತಿತ್ತು,ಈ ಎರಡು ಬಾರ್(ಪಬ್) ಗಳಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಗಿರುವ ಹಿನ್ನಲೆಯಲ್ಲಿ ಲೈಸನ್ಸ್ ರದ್ದುಗೊಳಿಸಲು ಸೂಚಿಸಲಾಗಿದೆ.

ಅಬಕಾರಿ ಇಲಾಖೆ ಮೌನ

ಮಣಿಪಾಲದಲ್ಲಿ ಅಕ್ರಮವಾಗಿ‌ ನಿಯಮ ಮೀರಿ ಬಾರ್ ಅ್ಯಂಡ್ ರೆಸ್ಟೋರೆಂಟ್ ಗಳು , ಪಬ್ ಗಳ ರೀತಿ ಮಾರ್ಪಾಡುಗೊಳಿಸಿ ,ಡಿಜೆ ಸೌಂಡ್ ,ಲೈಟಿಂಗ್ ಗಳನ್ನು ಹಾಕಿ ,ಡ್ಯಾನ್ಸ್ ಪಾರ್ಟಿ,ಇತರ ನಿಷೇದೀತ ಕಾರ್ಯಕ್ರಮಗಳನ್ನು ಮಾಡುತ್ತಿದ್ದರೂ ಅಬಕಾರಿ ಇಲಾಖೆ ಮೌನವಾಗಿದೆ‌.

ನಿಷೇಧಿತ ಮಾದಕ ವಸ್ತುಗಳ ವಿರುದ್ದ ಕ್ರಮ ಕೈಗೊಳ್ಳಲು ಅಬಕಾರಿ ಇಲಾಖೆಗೂ ಕಾನೂನಿನಲ್ಲಿ ಅವಕಾಶ ಇದ್ದು,ಅಧಿಕಾರಿಗಳು ಮಾತ್ರ ಯಾವುದೇ ಕ್ರಮ ಕೈಗೊಳ್ಳುತ್ತುಲ್ಲ ಎನ್ನುವ ಅರೋಪಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.ಕಳೆದ ಹಲವು ವರ್ಷಗಳಿಂದ ವರ್ಗಾವಣೆ ಆಗದೇ ಉಡುಪಿಯಲ್ಲೇ ಬೇರೂರಿರುವ ಅಧಿಕಾರಿಗಳು ಪಬ್ ಬಾರ್ ಗಳ ಪರವಾಗಿ ನಿಂತಿದ್ದಾರೆ ಎನ್ನಲಾಗಿದೆ.ಮಣಿಪಾಲದ ಕಾಯಿನ್ ಸರ್ಕಲ್ ಬಳಿ ರಸ್ತೆಯ ಅಕ್ಕಪಕ್ಕದಲ್ಲೇ ಮದ್ಯ ಸೇವನೆ ಮಾಡುವ ಬಗ್ಗೆ ಸ್ಥಳೀಯರು ದೂರು ನೀಡಿದರೂ ಯಾವುದೇ.. ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಅರೋಪಿಸಿದ್ದಾರೆ.

ಅಬಕಾರಿ ಇಲಾಖೆ ಮಣಿಪಾಲದಲ್ಲಿ ಎಲ್ಲೆಂದರಲ್ಲಿ ಪರವಾನಿಗೆ ನೀಡುತ್ತಿದ್ದು,ಅಸ್ಪತ್ರೆಯ ಎದುರಲ್ಲೇ ಪಬ್ ಮಾದರಿಯ ಬಾರ್ ಒಂದಕ್ಕೆ ಲೈಸನ್ಸ್ ನೀಡಿದ್ದು,ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ಕೂಡ ನಡೆದಿತ್ತು.

ಉಡುಪಿ ಎಸ್ ಪಿ ಮಾರ್ಗದರ್ಶನದಲ್ಲಿ ಮಣಿಪಾಲದಲ್ಲಿ ಹಲವಾರು ಬಾರಿ ಕಾರ್ಯಚರಣೆಗಳು ನಡೆದಿದೆ.ಅದರೆ ಅಬಕಾರಿ ಇಲಾಖೆ ಮಾತ್ರ ಅಕ್ರಮಗಳ ವಿರುದ್ದ ಕ್ರಮ ಕೈಗೊಳ್ಳದೇ ಮೌನವಾಗಿರುವುದು ಜಿಲ್ಲೆಯ ಜನರ ಆಕ್ರೋಶಕ್ಕೆ ಕಾರಣವಾಗಿದೆ.

Related posts

ಉಡುಪಿ: ಕಳವಾಗಿದ್ದ 30ಕ್ಕೂ ಅಧಿಕ ಮೊಬೈಲ್ ಫೋನ್‌ ವಾರಸುದಾರರಿಗೆ ಹಸ್ತಾಂತರ

Udupilive News

ಸೌಹಾರ್ದತೆಗೆ ಧಕ್ಕೆ ತರುವವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಿ- ರಮೇಶ್ ಕಾಂಚನ್

Udupilive News

ನಟ ಪ್ರೇಮ್ ಹಾಗೂ ನಟಿ ಶರಣ್ಯ ಶೆಟ್ಟಿ ಶ್ರೀ ಕೃಷ್ಣ ಮಠಕ್ಕೆ ಭೇಟಿ

Udupilive News

Leave a Comment