ಉಡುಪಿಕಾಪು

ಕಾಪು ಕಾಲೇಜು ವಿದ್ಯಾರ್ಥಿನಿ ನಾಪತ್ತೆ

ಕಾಪು: ಉಡುಪಿ ಜಿಲ್ಲೆಯ ಕಾಪು ಸಮೀಪದ ಮನೆಯಲ್ಲಿ ರಾತ್ರಿ ಊಟ ಮಾಡುತ್ತಿದ್ದ ಯುವತಿ ದಿಢೀರ್‌ ನಾಪತ್ತೆಯಾದ ಘಟನೆ ಕಟಪಾಡಿ ಮೂಡಬೆಟ್ಟು ಗ್ರಾಮದ ಅಚ್ಚಡದಲ್ಲಿ ಅ. 24ರಂದು ರಾತ್ರಿ ಸಂಭವಿಸಿದೆ.
ಉಡುಪಿ ಕಾಲೇಜೊಂದರ ಬಿಕಾಂ ಪದವಿ ವ್ಯಾಸಂಗ ನಡೆಸುತ್ತಿರುವ ಅಚ್ಚಡ ನಿವಾಸಿ ಶಶಿಕಲಾ (19) ನಾಪತ್ತೆಯಾಗಿರುವ ಯುವತಿ ಎಂದು ತಿಳಿಯಲಾಗಿದೆ.

ಗುರುವಾರ ರಾತ್ರಿ ತಾಯಿಯೊಂದಿಗೆ ಊಟ ಮಾಡುತ್ತಿದ್ದ ಆಕೆ ಊಟ ಮಾಡುತ್ತಿದ್ದಾಗಲೇ ಹೊರಗೆ ಬಂದಿದ್ದು, ಅಲ್ಲಿಂದಲೇ ದಿಢೀರ್‌ ನಾಪತ್ತೆಯಾಗಿದ್ದಾಳೆ ಎನ್ನಲಾಗಿದೆ.

ತಾಯಿ ಮನೆ ಪಕ್ಕದಲ್ಲಿ ಸಂಬಂಧಿಕರ ಮನೆಗಳಲ್ಲಿ ಹುಡುಕಾಟ ನಡೆಸಿದ್ದು, ಬಳಿಕ ಕಾಪು ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಕಾಪು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Related posts

ಶಾಸಕರೇ ಪುಂಡಾಟಿಕೆ ನಿಲ್ಲಿಸಿ ಜನರ ಸಮಸ್ಯೆಗಳ ಬಗ್ಗೆ ಗಮನ ಹರಿಸಿ -ರಮೇಶ್ ಕಾಂಚನ್

Udupilive News

ಮಣಿಪಾಲ: ಲಾಡ್ಜ್ ನಲ್ಲಿ ವೇಶ್ಯಾವಾಟಿಕೆ, ಪೊಲೀಸರಿಂದ ದಾಳಿ – ಬಿಹಾರ ಮೂಲದ ಆರೋಪಿ ಬಂಧನ.

Udupilive News

ಉಡುಪಿ: ಪ್ರಾಚ್ಯ ವಿದ್ಯಾ ಸಮ್ಮೇಳನ ಉದ್ಘಾಟನೆಗೆ ಉಡುಪಿಗೆ ಆಗಮಿಸಿದ ಬಾಬಾ ರಾಮದೇವ್

Udupilive News

Leave a Comment