ಉಡುಪಿರಾಜ್ಯ

ಅಕ್ಟೋಬರ್ 24 ರಂದು ಬಾಬಾ ರಾಮ್ ದೇವ್ ಉಡುಪಿಗೆ ,ಮೂರು ದಿನಗಳ ಕಾಲ ಯೋಗ ತರಗತಿ.

ಅಖಿಲ ಭಾರತ ಪ್ರಾಚ್ಯ ವಿದ್ಯಾವಿ ಸಮ್ಮೇಳನ ಉದ್ಘಾಟಿಸಲಿರುವ ಬಾಬಾರಾಮ್ ದೇವ್

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಮೂರು ದಿನಗಳ ಕಾಲ ಭಾರತೀಯ ಜ್ಞಾನಪರಂಪರೆ ಕುರಿತು ಚಿಂತನ ಮಂಥನ ನಡೆಯಲಿದೆ. ಅಖಿಲ ಭಾರತ ಪ್ರಾಚ್ಯ ವಿದ್ಯಾ ಸಮ್ಮೇಳನದಲ್ಲಿ ಸುಮಾರು 2000 ವಿದ್ವಾಂಸರು ಭಾಗಿಯಾಗಲಿದ್ದಾರೆ. ಜ್ಞಾನದ ಹಬ್ಬ ಎಂದು ಕರೆಯಲಾಗುವ ಈ ಸಮ್ಮೇಳನವನ್ನು ಯೋಗ ಗುರು ಬಾಬಾ ರಾಮದೇವ್ ಉದ್ಘಾಟಿಸಲಿದ್ದಾರೆ.

ವಿಶೇಷ ಶೋಭಾಯಾತ್ರೆಯೊಂದಿಗೆ ಸಮಾವೇಶ ಆರಂಭವಾಗಲಿದ್ದು ಪೇಜಾವರ ಭಂಡಾರ ಕೇರಿ ಸುಬ್ರಮಣ್ಯ ಮಠಾಧೀಶರು ಭಾಗವಹಿಸುತ್ತಾರೆ. ಪ್ರತಿದಿನ ಬೆಳಿಗ್ಗೆ 6:00 ಯಿಂದ 7:00 ವರೆಗೆ ಬಾಬಾ ರಾಮ್ದೇವ್ ಅವರಿಂದ ಯೋಗ ತರಗತಿಗಳು ನಡೆಯಲಿವೆ.

ಭಾರತದಲ್ಲಿ ನಡೆಯುತ್ತಿರುವ ಮೊದಲ ಸಮ್ಮೇಳನ ಇದಾಗಿದ್ದು 35 ವರ್ಷಗಳ ಹಿಂದೆ ಮೈಸೂರಿನಲ್ಲಿ ಸಮ್ಮೇಳನ ನಡೆದಿತ್ತು. ಭಾರತೀಯ ಸಾಹಿತ್ಯ, ಸಂಸ್ಕೃತಿ, ಪರಂಪರೆ ಮತ್ತು ಭಾಷೆಗಳ ಬೆಳವಣಿಗೆ ಮತ್ತು ಸಂರಕ್ಷಣೆ ಕುರಿತು ಈ ಸಮ್ಮೇಳನದಲ್ಲಿ ಚರ್ಚೆಯಾಗಲಿದೆ ಇಪ್ಪತ್ತಕ್ಕೂ ಹೆಚ್ಚು ವಿಷಯಗಳ ಬಗ್ಗೆ ಚರ್ಚೆಯಾಗಲಿದ್ದು 16 ಸಂಸ್ಕೃತ ವಿವಿಯ ಕುಲಪತಿಗಳು ಹಾಗೂ 300ಕ್ಕೂ ಅಧಿಕ ಹಿರಿಯ ವಿದ್ವಾಂಸರು ಸಮ್ಮೇಳನದಲ್ಲಿ ಇರಲಿದ್ದಾರೆ ಸಮ್ಮೇಳನ ಆಯೋಜಿಸಿರುವ ಎ ಐ ಓ ಸಿ ಸಂಸ್ಥೆಗೆ ಇದು 104ನೇ ವರ್ಷ ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ 51ನೇ ಸಮ್ಮೇಳನ ಆಯೋಜನೆಯಾಗಿದೆ.

Related posts

ಹೊಸಂಗಡಿ: ಅಕ್ರಮ‌ ಗೋಸಾಗಾಟಗರರನ್ನು ಬಂಧಿಸಿದ ಪೊಲೀಸರು.

Udupilive News

ಎಡನೀರು ಮಠಾಧೀಶರಿಂದ ಶ್ರೀಕೃಷ್ಣ ದರ್ಶನ

Udupilive News

ಪ್ರತಿಷ್ಟಿತ ಭಾರತ್ ಬ್ಯಾಂಕಿಗೆ ಬೆಸ್ಟ್ ಹೆಚ್ ಅರ್ ಮ್ಯಾನೇಜ್ಮೆಂಟ್ ಅವಾರ್ಡ್

Udupilive News

Leave a Comment