ಉಡುಪಿಕಾಪುಕಾರ್ಕಳಬೈಂದೂರು

ಇಂದ್ರಾಳಿ ಬ್ರಿಡ್ಜ್ ಅವ್ಯವಸ್ಥೆ ವಿರುದ್ದ ಪ್ರತಿಭಟನೆಗೆ ಸಿದ್ದತೆ.ಬ್ರಿಡ್ಜ್ ಬಳಿ ದೌಡಾಯಿಸಿದ ಸಂಸದ,ಶಾಸಕರು.ಜನವರಿ ಹದಿನೈದರೊಳಗೆ ಪೂರ್ಣಗೊಳಿಸುವುದಾಗಿ ಮತ್ತೊಂದು ಭರವಸೆ ನೀಡಿದ ಕೋಟ

ಉಡುಪಿ: ಭಾರೀ ವಿವಾದಕ್ಕೀಡಾಗಿರುವ ಇಂದ್ರಾಳಿ ಬ್ರಿಡ್ಜ್ ಕಾಮಾಗಾರಿ ಅವ್ಯವಸ್ಥೆಯ ವಿರುದ್ದ ಹೋರಾಟ ಸಮಿತಿ ಪ್ರತಿಭಟನೆಗೆ ಸಿದ್ದಾವಗುತ್ತಿದ್ದಂತೆ ಉಡುಪಿ ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಹಾಗೂ ಶಾಸಕ ಯಶ್ ಪಾಲ್ ಸುವರ್ಣ ಕಾಮಾಗಾರಿ ಪ್ರದೇಶಕ್ಕೆ ದೌಡಾಯಿಸಿದ್ದಾರೆ.

ಕಳೆದ ಹಲವು ವರ್ಷಗಳಿಂದ ಉಡುಪಿಯಿಂದ ಮಣಿಪಾಲ ಸಂಪರ್ಕಿಸುವ ಪ್ರಮುಖ ರಸ್ತೆಯ ರೈಲ್ವೇ ಬ್ರಿಡ್ಜ್ ಕಾಮಾಗಾರಿ ಜನಪ್ರತಿನಿಧಿಗಳ ಅಸಡ್ಡೆ ಹಾಗೂ ರೈಲ್ವೇ ಅಧಿಕಾರಿಗಳ ನಿರ್ಲಕ್ಷ್ಯ ದಿಂದ ನೆನೆಗುದಿಗೆ ಬಿದ್ದಿತ್ತು. ಇದರಿಂದ ಪ್ರತಿನಿತ್ಯ ಅಫಘಾತಗಳು ನಡೆಯುತ್ತಿದ್ದು ನಿತ್ಯ ಪ್ರಯಾಣಿಕರು ಸಂಕಷ್ಟ ಅನುಭವಿಸುತ್ತಿದ್ದರು.

ಹಲವು ಭಾರೀ ಉಡುಪಿಯ ಜನಪ್ರತಿನಿಧಿಗಳು ಕಾಮಾಗಾರಿ ಪ್ರದೇಶಕ್ಕೆ ಭೇಟಿ ನೀಡಿ, ಸೆಪ್ಟಂಬರ್ ತಿಂಗಳೊಳಗೆ ಕಾಮಾಗಾರಿ ಪೂರ್ಣಗೊಳಿಸುವುದಾಗಿ ಪೊಳ್ಳು ಭರವಸೆಗಳನ್ನು ನೀಡಿ ಯಾಮಾರಿಸುತ್ತಿದ್ದರು.ಕಾಮಾಗಾರಿ ಇನ್ನೂ ಪೂರ್ಣಗೊಳ್ಳದ ಕಾರಣ ಬೇಸತ್ತ ಜನ ಹೋರಾಟ ಸಮಿತಿ ರಚಿಸಿ ಅಕ್ಟೋಬರ್ 29 ರಂದು ಬೃಹತ್ ಪ್ರತಿಭಟನೆಗೆ ಸಿದ್ದರಾಗಿದ್ದರು.

ಶಾಸಕ ಸಂಸದರು ಇಂದು ಧೀಢೀರ್ ಇಂದ್ರಾಳಿ ಬ್ರಿಡ್ಜ್ ಬಳಿ ದೌಡಾಯಿಸಿ ಕಾಮಗಾರಿ ವೀಕ್ಷಣೆ ಮಾಡಿ ,ಅಧಿಕಾರಿಗಳ‌ ಜೊತೆ ಚರ್ಚೆ ನಡೆಸಿದ್ದಾರೆ.

ಈ ಸಂಧರ್ಭದಲ್ಲಿ ಮಾತನಾಡಿಸ ಸಂಸದ ಕೋಟಾ ಶ್ರೀನಿವಾಸ ಪೂಜಾರಿ, 2018 ರಲ್ಲಿ ಈ ಕಾಮಗಾರಿ ಆರಂಭವಾಗಿದೆ,ರೈಲ್ವೆ ಇಲಾಖೆ ವಿಳಂಬ ದಿಂದ ಕಾಮಾಗಾರಿ ತಡವಾಗುತ್ತಿದೆ.

138 ಟನ್ ತೂಕದ ಗರ್ಡರ್ ಅಳವಡಿಸುವ ಯೋಜನೆ ಇದಾಗಿತ್ತು,ರಸ್ತೆ ಉದ್ದ 38 ಮೀಟರ್ ನಿಂದ 58 ಮೀಟರ್ ಗೆ ವಿಸ್ತರಣೆಯಾಗಿದೆ,ಗರ್ಡರ್ ಗಳಿಗೆ ಅಳವಡಿಸುವ ಸ್ಟೀಲ್ 420 ಟನ್ ಗೆ ಏರಿಕೆಯಾಗಿದೆ ಹೀಗಾಗಿ ವಿಳಂಬವಾಗಿದೆ.ಕಾಮಗರಿಗೆ ಬೇಕಾದ ಎಲ್ಲ ಸಮಾಗ್ರಿಗಳು ಬಂದಿವೆ.ಜನವರಿ ಹದಿನೈದರೊಳಗೆ ಕಾಮಾಗಾರಿ ಪೂರ್ಣಗೊಳಿಸುವುದಾಗಿ ಅಧಿಕಾರಿಗಳು ಹಾಗೂ ಗುತ್ತಿಗೆದಾರರು.ಪೊಲೀಸ್ ಠಾಣೆಯಲ್ಲಿ ಮುಚ್ಚಳಿಕೆ ಬರೆದುಕೊಟ್ಟಿದ್ದಾರೆ ಎಂದರು.

Related posts

ಉಡುಪಿ : ಗೀತಾಂಜಲಿ ಪುರುಷರ ವಸ್ತ್ರ ಮಳಿಗೆ ಉದ್ಘಾಟನೆ

Udupilive News

ಶ್ರೀ ಕೃಷ್ಣ ಮಠಕ್ಕೆ ಅಗಮಿಸಿದ ಯೋಗಗುರು ಬಾಬಾರಾಮ್ ದೇವ್ ಜೀಗೆ ಪೂರ್ಣಕುಂಭ ಸ್ವಾಗತ

Udupilive News

ಕುಂದಾಪುರ: ರೈಲು ಡಿಕ್ಕಿಯಾಗಿ ಚಿರತೆ ಸಾವು

Udupilive News

Leave a Comment