ಅಕ್ಟೋಬರ್ 27 ‘ಶತಾಭಿವಂದನಂ’ ಆಚರಣೆ ಸಮಾರೋಪ ಸಂಭ್ರಮ1923ರಲ್ಲಿ ಕೆಮ್ಮಣ್ಣಿನಲ್ಲಿ ದಿ. ಪಿ. ವೆಂಕಟಕೃಷ್ಣ ರಾವ್, ದಿ. ಜನಾಬ್ ಆಲಿ ಸಾಹೇಬರಿಂದ ಸ್ಥಾಪಿಸಲ್ಪಟ್ಟು, ಶತಮಾನೋತ್ಸವ ಸಂಭ್ರಮದಲ್ಲಿರುವ ಕೆಮ್ಮಣ್ಣು ಗಣಪತಿ ಸಹಕಾರಿ ವ್ಯವಸಾಯಕ ಸಂಘದ ಶತಾಭಿವಂದನಂ ಸಮಾರೋಪ ಸಂಭ್ರಮಾಚರಣೆಯು ಅಕ್ಟೋಬರ್ 27ರ ಅದಿತ್ಯವಾರ ಬೆಳಿಗ್ಗೆ 8 ರಿಂದ ಸಂಜೆ 6 ರವರೆಗೆ ಕೆಮ್ಮಣ್ಣು ಸರಕಾರಿ ಪದವಿಪೂರ್ವ ಕಾಲೇಜಿನ ಮೈದಾನದಲ್ಲಿ ಜರಗಲಿದೆ.ಸಭಾ ಕಾರ್ಯಕ್ರಮದಂದು ಎಸ್.ಸಿ.ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್.ರಾಜೇಂದ್ರ ಕುಮಾರ್ ಶತಮಾನೋತ್ಸವ ಸಮಾರಂಭವನ್ನು ಉದ್ಘಾಟಿಸಲಿದ್ದಾರೆ. ಮಾಜಿ ಲೋಕಾಯುಕ್ತ ಎನ್. ಸಂತೋಷ್ ಹೆಗ್ಡೆ ದೀಪ ಪ್ರಜ್ವಲಿಸಲಿದ್ದು ಮಣಿಪಾಲ ಡಾ. ಟಿ.ಎಂ.ಎ.ಪೈ. ಫೌಂಡೇಶನ್ ಅಧ್ಯಕ್ಷ ವಿವಿಧ ಫಲಾನುಭವಿಗಳಿಗೆ ಕೊಡುಗೆಗಳನ್ನು ಹಸ್ತಾಂತರಿಸಲಿದ್ದಾರೆ.ಅಧ್ಯಕ್ಷತೆಯನ್ನು ಅಧ್ಯಕ್ಷರಾದ ಟಿ. ಸತೀಶ್ ಶೆಟ್ಟಿ ಇವರು ವಹಿಸಲಿದ್ದು, ಕೆಮ್ಮಣ್ಣು ಸಂತ ಥೆರೆಸಾ ಚರ್ಚಿನ ಧರ್ಮಗುರು ರೇಂ ಫಾದರ್ ಫಿಲಿಪ್ ನೇರಿ ಅರೈನಾ ಶುಭಶಂಸನೆಗೈಯುವರು. ಸಂಸದ ಕೋಟ ಶ್ರೀನಿವಾಸ ಪೂಜಾರಿ, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ವರ್, ಶಾಸಕ ಯಶ್ ಪಾಲ್ ಎ. ಸುವರ್ಣ, ಮಾಜಿ ಶಾಸಕ ಕೆ. ರಘುಪತಿ ಭಟ್, ರಾಜ್ಯ ಸಹಕಾರ ಮಹಾ ಮಂಡಲ ಅಧ್ಯಕ್ಷ ಜಿ.ಟಿ. ದೇವೇಗೌಡ, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬಿ. ಜಯಕರ್ ಶೆಟ್ಟಿ ಇಂದ್ರಾಳಿ, ಮಾಜಿ ಸಚಿವರಾದ ಕೆ. ಜಯಪ್ರಕಾಶ್ ಹೆಗ್ಡೆ, ಪ್ರಮೋದ್ ಮಧ್ವರಾಜ್, ಕಾಂಚನ ಹೊಂಡೈನ ಎಂ.ಡಿ. ಪ್ರಸಾದ್ ರಾಜ್ ಕಾಂಚನ್, ಹೊಡೆ ಬೀಚ್ ಹೀಲಿಂಗ್ ಸೆಂಟರ್‌ನ ಡಾ. ಮಹಮ್ಮದ್ ರಫೀಕ್, ಉಡುಪಿ ಸಹಕಾರ ಸಂಘಗಳ ಉಪನಿಬಂಧಕಿ ಲಾವಣ್ಯ, ಕುಂದಾಪುರ ಸಹಕಾರ ಸಂಘಗಳ ಸಹಾಯಕ ಉಪನಿಬಂಧಕಿ ರೇಣುಕಾ ಜಿ.ಎಸ್., ಎಸ್.ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕರಾದ ಡಾ. ದೇವಿ ಪ್ರಸಾದ್ ಶೆಟ್ಟಿ ಬೆಳಪು, ಅಶೋಕ್ ಶೆಟ್ಟಿ ಬೆಳ್ಳಂಪಳ್ಳಿ, ರಾಜೇಶ್ ರಾವ್ ಪಾಂಗಳ, ಕೆಮ್ಮಣ್ಣು ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಲಕ್ಷ್ಮೀನಾರಾಯಣ ರಾವ್, ಉಡುಪಿ ನಗರಾಭಿವೃದ್ಧಿ ಪ್ರಾಧಿ ಕಾರದ ಮಾಜಿ ಅಧ್ಯಕ್ಷ ಜನಾರ್ಧನ ತೋನ್ಸೆ, ತೋನ್ಸೆ ಗ್ರಾಮ ಪಂಚಾಯತ್ ಅಧ್ಯಕ್ಷ ಕುಸುಮ ರವೀಂದ್ರ, ಕಲ್ಯಾಣಪುರ ಗ್ರಾಮ ಪಂಚಾಯತ್ ಅಧ್ಯಕ್ಷ ನಾಗರಾಜ ಕುಂದರ್, ತೆಂಕನಿಡಿಯೂರು ಗ್ರಾಮ ಪಂಚಾಯತ್ ಅಧ್ಯಕ್ಷ ಶೋಭಾ ಡಿ. ನಾಯಕ್, ಬಡಾನಿಡಿಯೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಯಶೋಧಾ ಆಚಾರ್ಯ ಉಪಸ್ಥಿತರಿರುವರು.ಸಹಕಾರ ಸಂಘಗಳ ನಿವೃತ ಉಪನಿಬಂಧಕ ಅರುಣ್ ಕುಮಾರ್ ಎಸ್.ವಿ.. ಹಿರಿಯ ಸಹಕಾರಿ ಸರಳಾ ಬಿ. ಕಾಂಚನ್, ಯೋಧ ಕಿಶನ್ ಹಾಗೂ ಸಂಘದ ಮಾಜಿ ಅಧ್ಯಕ್ಷರು, ನಿರ್ದೇಶಕರು, ನಿವೃತ್ತ ಸಿಬ್ಬಂದಿ ವರ್ಗದವರನ್ನು ಗೌರವಿಸಲಾಗುವುದು.ಶತಮಾನೋತ್ಸವದ ಸಂಭ್ರಮದಲ್ಲಿ ಶತಾಯುಷಿ ಸನ್ಮಾನ, ಆರೋಗ್ಯ-ರಕ್ತದಾನ ಶಿಬಿರ, ಸಹಕಾರಿ ಹಾಗೂ ನವೋದಯ ಕ್ರೀಡಾಕೂಟ, ಶಾಲೆ ಹಾಗೂ ವಿವಿಧ ಸಂಘ ಸಂಸ್ಥೆಗಳಿಗೆ ನೆರವು, ಕೊಡುಗೆಗಳನ್ನು ನೀಡಲಾಗಿದೆ.ಬೆಳಿಗ್ಗೆ ಗಂಟೆ 8.00ಕ್ಕೆ ಧ್ವಜಾರೋಹಣ, 9.00ಕ್ಕೆ ಸಮಾಜ ಸೇವಕಿ ವೆರೊನಿಕಾ ಕರ್ನೆಲಿಯೋರಿಂದ ಸಹಕಾರಿ ಜಾಥಾಕ್ಕೆ ಚಾಲನೆ, ಯಕ್ಷನಾಟ್ಯ ವೈಭವ, ತೋನ್ಸೆ ಪುಷ್ಕಳ ಕುಮಾರ್ ರವರಿಂದ ಸಂಗೀತ ರಸಮಂಜರಿ, ಕುದ್ರೋಳಿ- ಗಣೇಶ್‌ರವರಿಂದ ವಿಸ್ಮಯ ಜಾದೂ ಪ್ರದರ್ಶನ ನಡೆಯಲಿದೆ ಎಂದು ಗಣಪತಿ ಸಹಕಾರಿ ವ್ಯವಸಾಯಕ ಸಂಘದ ಅಧ್ಯಕ್ಷರಾದ ಟಿ. ಸತೀಶ್ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಉಪಾಧ್ಯಕ್ಷ ಬಿ. ಅಫೈಲ್ ಸಾಹೇಬ್ ನಿರ್ದೇಶಕರಾದ ರಾಘವೇಂದ್ರ ಪ್ರಸಾದ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹೇಶ್ ಸಾಲ್ಯಾನ್ ಹಾಗೂ ಶಾಖಾ ವ್ಯವಸ್ಥಾಪಕ ಕಿಶೋರ್ ಶೆಟ್ಟಿ ಉಪಸ್ಥಿತರಿದ್ದರು.