ಉಡುಪಿ: ಪುತ್ತೂರು ಸುಬ್ರಮಣ್ಯ ನಿವಾಸಿ ವಿನಯ್ ದೇವಾಡಿಗನ ಮನೆಗೆ ನುಗ್ಗಿ ತಲವಾರಿನಿಂದ ಕೊಚ್ಚಿ ಕೊಲೆ ಮಾಡಿದ ಮೂವರು ಅರೋಪಿಗಳು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದಾರೆ.
ಕೊಕ್ಕರ್ಣೆ ಗಾಂಧಿ ನಗರ ನಿವಾಸಿ ಅಜಿತ್ (28) ಅಕ್ಷೇಂದ್ರ(34) ಬೆನಗಲ್ ನಿವಾಸಿ ಪ್ರದೀಪ್ ಅಚಾರ್ಯ ವಿನಯ್ ದೇವಾಡಿಗನನ್ನು ಬರ್ಬರವಾಗಿ ಕೊಂದಿರುವ ಆರೋಪಿಗಳಾಗಿದ್ದಾರೆ.
ವಿನಯ್ ಪೈಂಟಿಗ್ ಕೆಲಸ ಮಾಡುತ್ತಿದ್ದು,ಈ ಮೂವರು ವಿನಯ್ ದೇವಾಡಿಗನ ಅತ್ಮೀಯ ಸ್ನೇಹಿತರಾಗಿದ್ದರು.ಅರೋಪಿಗಳು ಆಗಾಗ ವಿನಯ್ ಮನೆಗೆ ಬಂದು ಹೋಗುತ್ತಿರುವುದರಿಂದ ,ಮನೆಯವರಿಗೂ ಇವರ ಪರಿಚಯವಿತ್ತು ಈ ಕಾರಣದಿಂದಾಗಿ ,ರಾತ್ರಿ ಮನೆಗೆ ಬಂದು ಬಗಿಲು ಬಡಿದು ವಿನಯ್ ನನ್ನು ವಿಚಾರಿಸಿದಾಗ ಬಾಗಿಲು ತೆರೆದಿದ್ದಾರೆ.ಅದರೆ ಇವರ ಕೈಯಲ್ಲಿದ್ದ ಮಾರಾಕಾಯುಧಗಳನ್ನು ಮನೆಯವರು ಗಮನಿಸಿರಲಿಲ್ಲ.
ಘಟನೆಗೆ ಮೂಲ ಕಾರಣ ಒಂದು ವಾಟ್ಸ ಅಪ್ ಅಡಿಯೋ ಮೆಸೇಜ್ ಎನ್ನಲಾಗಿದೆ.ಅರೋಪಿ ಅಕ್ಷೇಂದ್ರನಿಗೆ ಜೀವನ್ ಎಂಬಾತ ಬೈದಿರುವ ಅಡಿಯೋ ಮೆಸೇಜನ್ನು ವಿನಯ್ ಫಾರ್ವರ್ಡ್ ಮಾಡಿದ್ದ ಎನ್ನುವ ಕಾರಣಕ್ಕೆ ಕೊಲೆ ಮಾಡಲಾಗಿದೆ .
ಸ್ನೇಹಿತರೇ ಗೆಳೆಯನನ್ನ ಚುಚ್ಚಿ ಚುಚ್ಚಿ ಕೊಂದರು.
ರಾತ್ರಿ ಸ್ಕೂಟರ್ ನಲ್ಲಿ ಬಂದ ದುಷ್ಕರ್ಮಿಗಳು ,ಮನೆಗೆ ನುಗ್ಗಿ ಮನೆಯೆಲ್ಲ ಹುಡುಕಾಡಿದ್ದಾರೆ.ಶಬ್ದದಿಂದ ಎಚ್ಚೆತ್ತ ವಿನಯ್ ನನ್ನು ಕಂಡ ಅರೋಪಿಗಳು ಮೊಬೈಲ್ ಗಾಗಿ ತಡಕಾಡಿದ್ದಾರೆ , ಬಳಿಕ ಅಜಿತ್ ವಿನಯ್ ನನ್ನು ತಪ್ಪಿಸಿಕೊಳ್ಳದಂತೆ ಹಿಡಿದಿಟ್ಟಿದ್ದು,ಇನ್ನಿಬ್ಬರು ತಲವಾರು ಮತ್ತು ಚಾಕುವಿನಿಂದ ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಇಂದು ಬೆಳಗ್ಗೆ ಈ ಮೂವರು ಬ್ರಹ್ಮಾವರ ಪೊಲೀಸ್ ಠಾಣೆಗೆ ಶರಣಾಗಿದ್ದಾರೆ.