ಉಡುಪಿ: ತಲವಾರು ಹಿಡಿದು ಮನೆಗೆ ನುಗ್ಗಿದ ಕಿಡಿಗೇಡಿಗಳು ಹೆಂಡತಿ ಮಗುವಿನ ಜೊತೆಗೆ ಮಲಗಿದ್ದ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಉಡುಪಿಯ ಪುತ್ತೂರು ಬಳಿ ನಡೆದಿದೆ.ಮೃತನಾದ ವ್ಯಕ್ತಿಯನ್ನು ವಿನಯ್ ದೇವಾಡಿಗ (35) ಎಂದು ಗುರುತಿಸಲಾಗಿದೆ.
ಉಡುಪಿ ಪುತ್ತೂರಿನ ಮನೆಯಲ್ಲಿ ಹೆಂಡತಿ ಮಗುವಿನೊಂದಿಗೆ ರಾತ್ರಿ ಸುಮಾರು ಹನ್ನೊಂದು ಘಂಟೆ ಸುಮಾರಿಗೆ ಮಲಗಿದ್ದ ಸಂಧರ್ಭ ಮನೆಗೆ ಬಂದ ದುಷ್ಕರ್ಮಿಗಳು ಮನೆ ಬಾಗಿಲು ಬಡಿದು ವಿನಯ್ ಇದ್ದಾನ ಎಂದು ಕೇಳಿದ್ದಾರೆ,ಸ್ನೇಹಿತರಿರಬಹುದು ಎಂದು ಮನೆಯವರು ಬಾಗಿಲು ತೆರದಾಗ,ಮೂವರು ದುಷ್ಕರ್ಮಿಗಳು ನೇರವಾಗಿ ವಿನಯ್ ಮಲಗಿದ್ದ ಕೋಣೆಗ ತೆರಳಿ ತಾವು ತಂದಿದ್ದ ತಲವಾರನ್ನು ಬೀಸಿ ಹತ್ಯೆ ಮಾಡಿದ್ದಾರೆ.
ಮೂವರು ದುಷ್ಕರ್ಮಿಗಳು ಏಕಾಏಕಿ ದಾಳಿ ಮಾಡಿದ್ದರಿಂದ ಮನೆಯವು ಹೌಹಾರಿದ್ದಾರೆ.ತಡೆಯಲು ಹೋದ ಪತ್ನಿಗೂ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಉಡುಪಿ ಠಾಣಾ ಪೊಲಿಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ,ಪ್ರಕರಣ ದಾಖಲಿಸಿದ್ದಾರೆ.ಬೆಳಿಗ್ಗಿನಿಂದ ವಿನಯ್ ಯಾರದ್ದೋ ಜೊತೆಗೆ ಫೋನ್ ನಲ್ಲಿ ಗಲಾಟೆ ಮಾಡುತ್ತಿದ್ದ ಎನ್ನುವ ಮಾಹಿತಿಯನ್ನು ಮನೆಯವರು ಪೊಲೀಸರಿಗೆ ನೀಡಿದ್ದು,ಅರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ