ಉಡುಪಿ

ಶ್ರೀ ಕೃಷ್ಣ ಮಠದಲ್ಲಿ ಪಶ್ಚಿಮ ಜಾಗರ ಪೂಜೆಯಲ್ಲಿ ಭಾಗವಹಿಸಿದ ಬಾಬಾ ರಾಮದೇವ್ ಜೀ.

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಒಂದು ತಿಂಗಳ ಕಾಲ ಯೋಗ ನಿದ್ರೆಯಿಂದ ಭಗವಂತನನ್ನು ಎಬ್ಬಿಸುವ ಪಶ್ಚಿಮ ಜಾಗರ ಪೂಜೆಯಲ್ಲಿ ಬಾಬಾ ರಾಮದೇವ್ ರವರು ಪಾಲ್ಗೊಂಡಿದ್ದರು. ಶ್ರೀ ಕೃಷ್ಣ ಮಠದ ಗರ್ಭ ಗುಡಿಯ ಸುತ್ತಲೂ ದೀಪಗಳನ್ನು ಬೆಳಗಲಾಯಿತು. ಬಾಬಾ ರಾಮದೇವ್ ದೀಪವನ್ನು ಬೆಳಗಿಸಿ ದೀಪೋತ್ಸವ ಚಾಲನೆಯನ್ನು ನೀಡಿದರು.ಪುತ್ತಿಗೆ ಮಠದ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಶ್ರೀ ಕೃಷ್ಣನಿಗೆ ಪೂಜೆಯನ್ನು ಮಾಡಿದರು. ಗರ್ಭಗುಡಿಯ ಸುತ್ತಲೂ ದೀಪದ ಬೆಳಕಿನಲ್ಲಿ ವಾದ್ಯ ಸೇವೆಗಳೊಂದಿಗೆ ಪಶ್ಚಿಮ ಜಾಗರ ಪೂಜೆಯು ವೈಭವದಿಂದ ನಡೆಯಿತು. ನಂತರ ರಾಜಾಂಗಣದಲ್ಲಿ ನಡೆದ ವಿಶೇಷ ಯೋಗ ಜ್ಞಾನ ಪ್ರಾಣ ಶಿಬಿರದಲ್ಲಿ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಹಾಗೂ ಬಾಬಾ ರಾಮದೇವ್ ರವರು ಪಾಲ್ಗೊಂಡು ಅಸಂಖ್ಯಾತ ಭಕ್ತರ ಉಪಸ್ಥಿತಿಯಲ್ಲಿ ಯೋಗಶಿಬಿರವನ್ನು ಮಾಡಿದರು .

Related posts

ಚಿಲ್ಲರೆ ನೀಡಿದ್ದಕ್ಕೆ ದಲಿತ ಯುವತಿಯ ಮೇಲೆ ಹಲ್ಲೆ: ಜಾತಿ ನಿಂದನೆ,ಎಸ್ ಪಿ ಭೇಟಿ

Udupilive News

ಅಜ್ಜರಕಾಡು ಬ್ಯಾಡ್ಮಿಂಟನ್ ಕ್ಲಬ್ ಟೂರ್ನಮೆಂಟ್- ಬ್ಲೇಸರ್ ತಂಡಕ್ಕೆ ಪ್ರಶಸ್ತಿ

Udupilive News

ಉಡುಪಿಯಲ್ಲಿ ಮೇಘಸ್ಪೋಟ – ನಾಪತ್ತೆಯಾದ ವೃದ್ಧೆ ಶವವಾಗಿ ಪತ್ತೆ

Udupilive News

Leave a Comment