ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನಲ್ಲಿ ಅಕ್ರಮ ಗೋಸಾಗಾಟ ನಡೆಸುತ್ತಿದ್ದವರನ್ನು ಬಂಧಿಸಲಾಗಿದೆ.ಇಲ್ಲಿನ ಹೊಸಂಗಡಿ ಗ್ರಾಮದ ಮುತ್ತಿನಕಟ್ಟೆಯ ಬಳಿಯ ಚೆಕ್ ಪೋಸ್ಟ್ ನಲ್ಲಿ ಪೊಲೀಸರು ಕರ್ತವ್ಯಗಳಿದ್ದಾಗ ಸಂಶಯಾಸ್ಪದ ವಾಹನ ಪತ್ತೆಯಾಗಿದೆ.

ಬೆಳಿಗ್ಗೆ ಸುಮಾರು ಆರು ಗಂಟೆಗೆ ಹುಲಿಕಲ್ ಘಾಟಿ ಕಡೆಯಿಂದ ಚೆಕ್ ಪೊಸ್ಟ್ ಕಡೆಗೆ ಬರುತ್ತಿದ್ದ ವಾಹನವನ್ನು ನೋಡಿ ನಿಲ್ಲುವಂತೆ ಚಾಲಕನಿಗೆ ಸೂಚನೆ ನೀಡಿದ್ದಾರೆ. ವಾಹನವನ್ನು ತಪಾಸಣೆ ಮಾಡಿದಾಗ ಹಿಂದುಗಡೆ ಎರಡು ಕೋಣಗಳಿಗೆ ಯಾವುದೇ ಮೇವು ಆಹಾರ ನೀಡದೆ ಸಾಗಿಸುತ್ತಿರುವುದು ಗೊತ್ತಾಗಿದೆ. ಇವುಗಳನ್ನು ಹಿಂಸ್ಮಾಕವಾಗಿ ಕಟ್ಟಿ ಹಾಕಿ ತುಂಬಿರುವುದು ಕಂಡು ಬಂದಿದೆ.

ಚಾಲಕನಲ್ಲಿ ಈ ಬಗ್ಗೆ ವಿಚಾರಿಸಿದಾಗ ಜಾನುವಾರುಗಳನ್ನ ಮಾಂಸ ಮಾಡುವ ಉದ್ದೇಶ ದಿಂದ ವಧೆಗಾಗಿ ಕೊಂಡು ಹೋಗುತ್ತೀರುವುದಾಗಿ ತಿಳಿಸಿರುತ್ತಾರೆ. ಎರಡು ಕೋಣಗಳ ಅಂದಾಜು ಮೌಲ್ಯ 30,000/- ಮತ್ತು ವಾಹನದ ಮೌಲ್ಯ 04 ಲಕ್ಷರೂಪಾಯಿಗಳಾಗಬಹುದೆಂದು ಅಂದಾಜಿಸಲಾಗಿದೆ .
ಆರೋಪಿ ಬಸವರಾಜ, ಲೋಹಿತ್ ಇಮ್ರಾನ್ ರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ.
.
