ಉಡುಪಿ

ಪೇಜಾವರ ಶ್ರೀಗಳ ಬಗ್ಗೆ ಅವಹೇಳಕಾರಿ ಹೇಳಿಕೆ; ಬಿ.ಕೆ. ಹರಿಪ್ರಸಾದ್ ವಿರುದ್ಧ ಉಡುಪಿ ಜಿಲ್ಲಾ ಬ್ರಾಹ್ಮಣ ಮಹಾಸಭಾ ಖಂಡನೆ

ಬಿ.ಕೆ. ಹರಿಪ್ರಸಾದ್ ಕೂಡಲೇ ಪೇಜಾವರ ಶ್ರೀಗಳ ಕ್ಷಮೆಯಾಚಿಸಬೇಕು, ಇಲ್ಲದಿದ್ದರೆ ಉಗ್ರ ಹೋರಾಟ ಕೈಗೊಳ್ಳುತ್ತೇವೆ; ಬ್ರಾಹ್ಮಣ ಮಹಾಸಭಾ ಎಚ್ಚರಿಕೆ

ಉಡುಪಿ: ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಕುರಿತು ಅವಹೇಳಕಾರಿ ಹೇಳಿಕೆ ನೀಡಿರುವ ಕಾಂಗ್ರೆಸ್ ಮುಖಂಡ ಬಿ.ಕೆ ಹರಿಪ್ರಸಾದ್ ವಿರುದ್ಧ ಉಡುಪಿ ಜಿಲ್ಲಾ ಸಮಸ್ತ ವಿಪ್ರ ಭಾಂದವರು ಖಂಡನೆ ವ್ಯಕ್ತಪಡಿಸಿದ್ದಾರೆ.

ಉಡುಪಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಉಡುಪಿ ಜಿಲ್ಲಾ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಸಂದೀಪ್ ಕುಮಾರ್ ಮಂಜ ಮಾತನಾಡಿ, ಪೇಜಾವರ ಶ್ರೀಗಳ ಬಗ್ಗೆ ಮಾತನಾಡಲು ಹರಿಪ್ರಸಾದ್ ಗೆ ಎಳ್ಳಷ್ಟು ಯೋಗ್ಯತೆ ಇಲ್ಲ. ಪೇಜಾವರ ಶ್ರೀಗಳು ವಿದ್ವತ್ತು, ಧರ್ಮ ನಿಷ್ಠೆ, ಸಮಾಜದ ಬಗ್ಗೆ ಇರುವ ಕಳಕಳಿ ಹೊಂದಿದ ಸ್ವಾಮೀಜಿ. ಅವರು ಯಾವತ್ತೂ ಒಂದು ಜಾತಿಯ ಬಗ್ಗೆ ಮಾತನಾಡಿದವರಲ್ಲ. ಸಮಸ್ತ ಹಿಂದೂ ಸಮಾಜದ ಒಳಿತಿಗಾಗಿ ಶ್ರಮಿಸುತ್ತಿರುವ ಸ್ವಾಮೀಜಿ. ನೂರಾರು ಬಡ ಕುಟುಂಬಗಳಿಗೆ ಭಕ್ತರ ಸಹಕಾರದೊಂದಿಗೆ ಮನೆ ಕಟ್ಟಿಸಿಕೊಟ್ಟಿದ್ದಾರೆ. ಇದೆಲ್ಲವೂ ಜಾತಿ ಲಾಬಿ ನಡೆಸುವ ವ್ಯಕ್ತಿಗಳಿಗೆ ಕಾಣುವುದಿಲ್ಲ ಎಂದು ವಾಗ್ದಾಳಿ ನಡೆಸಿದರು‌.
ಇಡೀ ಸನಾತನ ಹಿಂದೂ ಧರ್ಮದ ಒಬ್ಬ ಮಹಾನ್ ಶಕ್ತಿಯುತ ಸ್ವಾಮೀಜಿಯ ಬಗ್ಗೆ ಹರಿಪ್ರಸಾದ್ ಆಡಿರುವ ಅವಹೇಳನ ಮಾತು ಅಕ್ಷಮ್ಯವಾದದು. ಹೀಗಾಗಿ ಅವರು ಕರ್ನಾಟಕ ರಾಜ್ಯದ ಸಮಸ್ತ ಜನತೆಯ ಮುಂದೆ ಪೇಜಾವರ ಶ್ರೀಗಳ ಬೇಷರತ್ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಡುಪಿ ಜಿಲ್ಲಾ ಬ್ರಾಹ್ಮಣ ಮಹಾಸಭಾದ ನೇತೃತ್ವದಲ್ಲಿ ವಿಪ್ರ ಬಾಂಧವರು ಉಗ್ರ ಹೋರಾಟ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಬ್ರಾಹ್ಮಣ ಮಹಾಸಭಾದ ಜಿಲ್ಲಾ ಸಂಚಾಲಕ ಶ್ರೀಕಾಂತ್ ಉಪಾಧ್ಯಾಯ, ಉಪಾಧ್ಯಕ್ಷ ಶ್ರೀನಿವಾಸ್ ಬಲ್ಲಾಳ್, ಜೊತೆ ಕಾರ್ಯದರ್ಶಿ ನಾಗರಾಜ ಉಪಾಧ್ಯಾಯ, ಉಡುಪಿ ತಾಲೂಕು ಅಧ್ಯಕ್ಷ ಮಂಜುನಾಥ್ ಉಪಾಧ್ಯಾಯ, ರಾಮದಾಸ್ ಉಡುಪ ಇದ್ದರು.

Related posts

ಬೈಕ್ ಕಾರು ನಡುವೆ ಅಪಘಾತ ; ಬೈಕ್ ಸವಾರರಿಬ್ಬರು ಗಂಭಿರ

Udupilive News

ಅಂಬಲಪಾಡಿ ಬಾಲ ಗಣೇಶೋತ್ಸವ ಸಮಿತಿ ಅಧ್ಯಕ್ಷರಾಗಿ ಸುಮಂತ್ ಶೆಟ್ಟಿಗಾರ್

Udupilive News

ಉಡುಪಿ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಸ್ವರೂಪ ಟಿ ಕೆ ಅಧಿಕಾರ ಸ್ವೀಕಾರ

Udupilive News

Leave a Comment