ಉಡುಪಿ: ಧಾರ್ಮಿಕ ಭಾವನೆಗಳಿಗೆ ಧಕ್ಕೆ ,ಪವಿತ್ರ ಕ್ಷೇತ್ರಗಳಾದ ಉಡುಪಿ ಕೊಲ್ಲೂರು ಧರ್ಮಸ್ಥಳ ಕ್ಷೇತ್ರಗಳ ಬಗ್ಗೆ ಅವಹೇಳನಕರವಾಗಿ ವಿಡಿಯೋ ಮಾಡಿ ಹರಿಯಬಿಟ್ಟ ಕೇರಳದ ಎರಡು ವ್ಯಕ್ತಿಗಳ ಮೇಲೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಉಡುಪಿ ಹಿರಿಯಡ್ಕ ಬೆಳ್ಳರ ಪಾಡಿ ನಿವಾಸಿ ಶ್ರೀಕುಮಾರ್ ಎನ್ನುವವರು ಉಡುಪಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮಲ್ಲು ಮಾರ್ಟ್ ಟ್ರಾವೆಲರ್ ಮತ್ತು ಮಾನಫ್ ಎನ್ನುವ ವ್ಯಕ್ತಿ ಫೆಸ್ ಬುಕ್ ಹಾಗೂ ಯ್ಯೂಟ್ಯೂಬ್ ಗಳಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ,ಉಡುಪಿ ಕೊಲ್ಲೂರು ಕ್ಷೇತ್ರ ಗಳ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆಗಳನ್ನು ನೀಡಿ ವಿಡಿಯೋ ಅಪ್ ಲೋಡ್ ಮಾಡಿರುತ್ತಾನೆ.
ಕುಟುಂಬ ಸಮೇತರಾಗಿ ಉಡುಪಿ ಮಂಗಳೂರು ಧಾರ್ಮಿಕ ಕ್ಷೇತ್ರಗಳಿಗೆ ಹೆಣ್ಣು ಮಕ್ಕಳೊಂದಿಗೆ ಹೋಗಬೇಡಿ. ಹೆಣ್ಣು ಮಕ್ಕಳು ಸುರಕ್ಷಿತವಲ್ಲ,ಎಲ್ಲಾ ಕ್ಷೇತ್ರಗಳಲ್ಲೂ ಕೊಡಚಾದ್ರಿಯಲ್ಲೂ ಇಂತಹ ಪ್ರಕರಣ ಅಗಿರಬಹುದು ಎಂದೆಲ್ಲಾ ಹೇಳಿಕೆ ನೀಡಿದ್ದು,ಇದು ನಮ್ಮ ಧಾರ್ಮಿಕ ಭಾವನೆಗಳಿಗೆ ದಕ್ಕೆ ತರುವ ಹೇಳಿಕೆಗಳಾಗಿದ್ದು,ಪೊಲೀಸ್ ಇಲಾಖೆ ತಕ್ಷಣ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದು ,ನಗರ ಠಾಣೆಯಲ್ಲಿ ಎಫ್ ಐ ಅರ್ ದಾಖಲಾಗಿದೆ.