ಕುಂದಾಪುರ: ನಗರದ ಹೊರವಲಯದಲ್ಲಿರುವ ಹಂಗಳೂರು ಸಮೀಪದ ಬ್ರಹ್ಮಗುಡಿ ರಸ್ತೆಯಲ್ಲಿ ಹಾಡಹಗಲೇ ಜನವಸತಿ ಪ್ರದೇಶದ ಜಗದೀಶ್ ಚಂದ್ರ ನಾಯರ್ ಎ೦ಬವರ ಮನೆಯ ಬಾಗಿಲು ಒಡೆದು ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣ ಸಹಿತ ನಗದು ದೋಚಿ ಪರಾರಿಯಾದ ಘಟನೆ ಅ.24ರ ಅಪರಾಹ್ನ ನಡೆದಿದೆ.
ಜಗದೀಶ್ ಚಂದ್ರ ನಾಯರ್ ಅವರು ಪತ್ನಿ ಹಾಗೂ ಮಗಳೊಂದಿಗೆ ಇಲ್ಲಿ ವಾಸಿಸುತ್ತಿದ್ದಾರೆ. ಪತಿ ಪತ್ನಿ ಇಬ್ಬರೂ ಕುಂದಾಪುರದಲ್ಲಿ ಪ್ರಿಂಟಿಂಗ್ ಪ್ರೆಸ್ ಕೆಲಸ ಮಾಡಿಕೊಂಡಿದ್ದಾರೆ. ಅವರ ಮಗಳು ಶಾಲೆಗೆ ಹೋಗುತ್ತಿದ್ದಾಳೆ.
ಗುರುವಾರ ಮಧ್ಯಾಹ್ನ 2 ಗಂಟೆಗೆ ಜಗದೀಶ್ ಚಂದ್ರ ಹಾಗೂ ಪತ್ನಿ ಮನೆಯಲ್ಲಿ ಊಟ ಮಾಡಿ ಪ್ರೆಸ್ ಗೆ ಹೋಗಿದ್ದರು. ಸಂಜೆ 4 ಗಂಟೆಗೆ ಜಗದೀಶ್ ಅವರ ಪತ್ನಿ ಮಗಳನ್ನು ಶಾಲೆಯಿಂದ ಕರೆದುಕೊಂಡು ಮನೆಗೆ ಬಂದಾಗ ಅನುಮಾನ ಬಂದು ಹಿಂಬದಿ ಹೋಗಿ ನೋಡಿದಾಗ ಮನೆಯ ಹಿಂಬದಿಯ ಬಾಗಿಲು ಒಡೆದು ದರೋಡೆ ನಡೆಸಿರುವುದು ತಿಳಿದು ಬಂದಿದೆ.
ಕಳ್ಳತನವಾದ ಸೊತ್ತುಗಳ ಒಟ್ಟು ಮೌಲ್ಯಗಳ ಬಗ್ಗೆ ಇನ್ನಷ್ಟೇ ತಿಳಿಯಬೇಕಾಗಿದೆ. ಕುಂದಾಪುರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.