ಉಡುಪಿ

ರಾತೋರಾತ್ರಿ ಲಾಠಿ ಹಿಡಿದು ಬೀದಿಗಿಳಿದ ಉಡುಪಿ ಪೊಲೀಸರು.ನಗರದ ಸಿಟಿ ಬಸ್ಸು ನಿಲ್ದಾಣದ ಬಳಿ ಮಂಗಳಮುಖಿಯರ ವಿರುದ್ದ ಕಾರ್ಯಚರಣೆಗಿಳಿದ ಖಾಕಿ ಪಡೆ.

ನಗರದಲ್ಲಿ ನೂರಾರು ಪೊಲೀಸರ ಪಡೆ ಲಾಠಿ ಹಿಡಿದು ಧೀಢಿರಾಗಿ ಮಂಗಳಮುಖಿಯರ ವಿರುದ್ದ ಕಾರ್ಯಚರಣೆಗಿಳಿದಿದ್ದರು

https://www.instagram.com/reel/DBhHLTYOvxf/?igsh=b3piYzg1dTY5d215

ನೂರಾರು ಪೊಲೀಸರು ನಗರದ ಸಿಟಿಬಸ್ ನಿಲ್ದಾಣ,ನರ್ಮ್ ಬಸ್ ನಿಲ್ದಾಣ,ಕೆ ಎಸ್ ಅರ್ ಟಿ ಸಿ ಹಳೇ ಬಸ್ಸು ನಿಲ್ದಾಣ ,ಬನ್ನಂಜೆಯ ಕೆ ಎಸ್ ಅರ್ ಟಿ ಸಿ ಬಸ್ ನಿಲ್ದಾಣ ,ಕರಾವಳಿ ಬೈಪಾಸ್ ಬಳಿಯ ಮಣಿಪಾಲ್ ಇನ್ ಹೊಟೇಲ್ ಎದುರು‌ ಭಾಗದಲ್ಲಿರುವ ನಿರ್ಜನ ಪ್ರದೇಶದಲ್ಲಿರುವ ಮಂಗಳಮುಖಿಯರ ಅಡ್ಡೆ ಬಳಿ ಕಾರ್ಯಚರಣೆಗಿಳಿದಿದ್ದರು.ಪೊಲೀಸರ ದಂಡು ಕಂಡ ಮಂಗಳಮುಖಿಯರು ನಗರದಿಂದ ಕಾಲ್ಕಿತ್ತರು.ಅದರೆ ಬೆನ್ನು ಹಿಡಿದ ಪೊಲೀಸರು ಸಿಟಿ ಬಸ್ ನಿಲ್ದಾಣದ ಬಳಿಯ ಕತ್ತಲೆ ಪ್ರದೇಶಗಳಲ್ಲಿ ಅವಿತು ಕುಳಿತ್ತಿದ್ದ ಮಂಗಳ ಮುಖಿಯರನ್ನ ಹಿಡಿದು ಹೊರ ಕರೆದು ಎಚ್ಚರಿಕೆ ನೀಡಿ ಕಳುಹಿಸಿದರು.

ಉಡುಪಿ ನಗರ ಬಸ್ಸು ನಿಲ್ದಾಣದಲ್ಲಿ ಕುಡಿದು ಮಲಗಿದ್ದವರಿಗೂ ಪೊಲೀಸರು ಲಾಠಿ ರುಚಿ ತೋರಿಸಿದರು. ಅಲ್ಲಲ್ಲಿ ಬೀದಿ ಬದಿ ತೂರಾಡುತ್ತಿದ್ದವರಿಗೂ ಬಿಸಿ ಮುಟ್ಟಿಸಿದರು.ಅನಗತ್ಯವಾಗಿ ತಿರುಗಾಡುತ್ತಿದ್ದವರನ್ನು ಹಿಡಿದು ತಪಾಸಣೆ ನಡೆಸಿ ಎಚ್ಚರಿಕೆಯನ್ನು ನೀಡಿದರು‌.

ನಗರದ ಸಿಟಿ ಬಸ್ ನಿಲ್ದಾಣದ ಬಳಿ ಮಂಗಳಮುಖಿಯರ ಕಾಟ ಹೆಚ್ಚಾಗಿತ್ತು. ಇದರ ಜೊತೆಗೆ ಕುಡುಕರ ಕಾಟ ಕೂಡ ಮಿತಿಮೀರಿತ್ತು .ಸಭ್ಯರು ನಡೆದುಕೊಂಡು ಹೋಗದಂತೆ ಪರಿಸ್ಥಿತಿ ನಿರ್ಮಾಣವಾಗಿತ್ತು.ಈ ಬಗ್ಗೆ ಪೊಲೀಸ್ ವರಿಷ್ಟಾಧಿಕಾರಿಗಳಿಗೆ ಸಾರ್ವಜನಿಕರಿಂದ ದೂರು ಬಂದ ಹಿನ್ನಲೆಯಲ್ಲಿ ,ಪೊಲೀಸ್ ಬಂದೂಬಸ್ತ್ ಹಾಕಲಾಗಿತ್ತು.ಅದ್ರೆ ಪೊಲೀಸರನ್ನ ಕ್ಯಾರೇ ಅನ್ನದೇ ಮಂಗಳ ಮುಖಿಯರು ತಮ್ಮ ಚಾಳಿ ಮುಂದುವರೆಸಿದ ಕಾರಣ ,ನಗರ ಠಾಣೆ ಪೊಲೀಸರು ಕಾರ್ಯಚರಣೆಗಿಳಿದಿದ್ದರು.

Related posts

ಬೆಂಗಳೂರು ಜನತೆಯಿಂದ ತಿರಸ್ಕೃತ ಸೌಮ್ಯ ರೆಡ್ಡಿ ಬಿಟ್ಟಿ ಉಪದೇಶ ಉಡುಪಿ ಜನತೆಗೆ ಅನಗತ್ಯ : ಸಂಧ್ಯಾ ರಮೇಶ್

Udupilive News

ಯುವ ಜನರು ಸ್ವಯಂ ಸೇವಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು: ವಾರ್ತಾಧಿಕಾರಿ ಮಂಜುನಾಥ್ ಬಿ

Udupilive News

ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ಕನ್ನಡ ಭಾಷೆ ಗೊತ್ತಿರುವ ಅಧಿಕಾರಿಗಳನ್ನು ನೇಮಿಸಿ: ಬ್ಯಾಂಕ್ಗಳಿಗೆ ಕೋಟ ಸಲಹೆ

Udupilive News

Leave a Comment