ಉಡುಪಿ

ಉಡುಪಿ: ಕಳವಾಗಿದ್ದ 30ಕ್ಕೂ ಅಧಿಕ ಮೊಬೈಲ್ ಫೋನ್‌ ವಾರಸುದಾರರಿಗೆ ಹಸ್ತಾಂತರ

ಉಡುಪಿ ನಗರ ಠಾಣಾ ವ್ಯಾಪ್ತಿಯಲ್ಲಿ ಕಳವಾದ ಸುಮಾರು 30ಕ್ಕೂ ಅಧಿಕ ಮೊಬೈಲ್ ಫೋನ್‌ಗಳನ್ನು ವಾರಸುದಾರರಿಗೆ ಹಸ್ತಾಂತರಿಸುವ ಕಾರ್ಯಕ್ರಮ ಠಾಣೆಯ ಮುಂಭಾಗದಲ್ಲಿ ಗುರುವಾರ ನಡೆಯಿತು.
ಮೊಬೈಲ್ ಹಸ್ತಾಂತರಿಸಿ ಮಾತನಾಡಿದ ಉಡುಪಿ ಡಿವೈಎಸ್‌ಪಿ ಪ್ರಭು ಡಿ.ಟಿ.‌ ಅವರು, ಮೊಬೈಲ್ ಕಳವಾದರೆ ಅದನ್ನು ಪತ್ತೆೆಹಚ್ಚುವ ಅತ್ಯಾಧುನಿಕ ತಂತ್ರಜ್ಞಾನವನ್ನು ಇಲಾಖೆ ಅಭಿವೃದ್ಧಿ ಪಡಿಸಿದೆ. ಮೊಬೈಲ್ ಕಳೆದುಕೊಂಡವರು ಕೆ.ಎಸ್.ಪಿ. ಆ್ಯಪ್‌ನಲ್ಲಿ ಇ-ಲಾಸ್ ಅಪ್ಲಿಕೇಶನ್ ಒಳಗೆ ಕಳವಾದ ಮೊಬೈಲ್‌ನ ಐಎಂಇಐ ನಂಬರ್ ಹಾಕಬೇಕು. ಬಳಿಕ ಸಿಇಐಆರ್ ಪೋರ್ಟಲ್‌ನಲ್ಲಿ ನಂಬರ್ ಅಪ್‌ಲೋಡ್ ಮಾಡಲಾಗುತ್ತದೆ. ಬಳಿಕ ಆ ನಂಬರ್ ಬ್ಲಾಕ್ ಮಾಡಲಾಗುವುದು. ಕಳವಾದ ಮೊಬೈಲ್‌ಗೆ ಬೇರೆ ಸಿಮ್ ಹಾಕಿದರೆ ಕೂಡಲೇ ಸಿಇಐಆರ್ ಪೋರ್ಟ್‌ಲ್‌ಗೆ ಸಂದೇಶ ಹಾಗೂ ಅದರ ವಿವರ ಲಭಿಸಲಿದೆ ಎಂದರು.

ತಂತ್ರಜ್ಞಾನವನ್ನು ಬಳಸುವ ಬಗ್ಗೆೆ ಮಾಹಿತಿ ಇಲ್ಲದವರು, ಸ್ಥಳೀಯ ಠಾಣೆಗೆ ಭೇಟಿ ನೀಡಿ, ಅಲ್ಲಿಯೂ ದೂರು ದಾಖಲಿಸಬಹುದು ಎಂದು ತಿಳಿಸಿದರು.
ನಗರ ಠಾಣೆಯ ಪೊಲೀಸ್ ನಿರೀಕ್ಷಕ ಶ್ರೀಧರ್ ಸತಾರೆ, ಪಿಎಸ್‌ಐಗಳಾದ ಈರಣ್ಣ ಶಿರಗುಂಪಿ, ಭರತೇಶ್, ಪುನೀತ್, ಸಿಬಂದಿ ಚೇತನ್, ಬಶೀರ್, ವಿನಯ್ ಉಪಸ್ಥಿತರಿದ್ದರು.

2023ರಲ್ಲಿ ಉಡುಪಿ ಪುರಭವನದಲ್ಲಿ ಮದುವೆ ಕಾರ್ಯಕ್ರಮಕ್ಕೆೆ ಹೋಗುವ ವೇಳೆ ವಾಹನದಲ್ಲಿಟ್ಟಿದ್ದ ಮೊಬೈಲ್ ಫೋನ್ ಕಳವಾಗಿತ್ತು. ಬಳಿಕ ಠಾಣೆಗೆ ತೆರಳಿ ದೂರು ನೀಡಿದ್ದೇವೆ. ಈಗ ಮೊಬೈಲ್ ಸಿಕ್ಕಿರುವುದು ಖುಷಿ ತಂದಿದೆ ಎಂದು ಮಠದಬೆಟ್ಟು ನಿವಾಸಿ ಜಯಲಕ್ಷ್ಮೀ ತಿಳಿಸಿದರು.

Related posts

ಛತ್ತೀಸ್ ಗಢದಲ್ಲಿ ಕ್ರೈಸ್ತ ಧರ್ಮ ಭಗಿನಿಯರ ಮೇಲಿನ ದೌರ್ಜನ್ಯ ಖಂಡಿಸಿ ಉಡುಪಿಯಲ್ಲಿ ಬೃಹತ್ ಪ್ರತಿಭಟನೆ

Udupilive News

ಛತ್ತೀಸ್ಗಢದಲ್ಲಿ ಕ್ರೈಸ್ತ ಧರ್ಮ ಭಗಿನಿಯರ ಮೇಲೆ ಸುಳ್ಳು ಪ್ರಕರಣ” ದಾಖಲಿಸಿ ಬಂಧನ ಖಂಡಿಸಿ ಪ್ರತಿಭಟನೆ

Udupilive News

ಪೇಜಾವರ ಶ್ರೀಗಳ ಬಗ್ಗೆ ಅವಹೇಳಕಾರಿ ಹೇಳಿಕೆ; ಬಿ.ಕೆ. ಹರಿಪ್ರಸಾದ್ ವಿರುದ್ಧ ಉಡುಪಿ ಜಿಲ್ಲಾ ಬ್ರಾಹ್ಮಣ ಮಹಾಸಭಾ ಖಂಡನೆ

Udupilive News

Leave a Comment