ಉಡುಪಿ

ಶ್ರಮಿಕ ತರುಣರ ತಂಡ ಸಂಘಟನೆಯಿಂದ ಸಮವಸ್ತ್ರ ವಿತರಣೆ.

ಪೆರ್ಡೂರು: ಶ್ರಮಿಕ ತರುಣರ ತಂಡ ಸಂಘಟನೆ ವತಿಯಿಂದ 41 ನೇ ಶಿರೂರು ನ್ಯೂ ಕಲ್ಲಾಳ ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಸಮವಸ್ತ್ರ ವಿತರಣೆ ಕಾರ್ಯಕ್ರಮ ನಡೆಯಿತು.

ಸಂತೋಷ್ ಕುಮಾರ್ ಬೈರಂಪಳ್ಳಿ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸಿದರು.ಕಳೆದ ಹಲವಾರು ವರ್ಷಗಳಿಂದ ಉಡುಪಿ ಜಿಲ್ಲಾ ಮಟ್ಟದಲ್ಲಿ ದುರ್ಬಲ ವರ್ಗದ ಜನರಿಗೆ ಸಹಾಯ ಹಸ್ತದೊಂದಿಗೆ ವಿವಿಧ ರೀತಿಯಲ್ಲಿ ಈ ಸಂಘಟನೆ ನೆರವನ್ನು ನೀಡುತ್ತಿದೆ.

ಹಲವಾರು ಯುವಕ ಯುವತಿಯರು ಸೇರಿಕೊಂಡು ಸಮಾಜದ ಬಡ ವರ್ಗದ ಜನರಿಗೆ ಡಾ ಸಂತೋಷ್ ಕುಮಾರ್ ಬೈರಂಪಳ್ಳಿಯವರ ನೇತೃತ್ವದಲ್ಲಿ ಸೂರು ನಿರ್ಮಾಣ ಕಾರ್ಯದಿಂದ ಪ್ರಾರಂಭಗೊಂಡು ಈಗ ಜನ ಮಾನಸದಲ್ಲಿ ನೂರಾರು ಸೇವಾಕಾರ್ಯದಿಂದ ಶ್ರಮಿಕರು ಪ್ರೀತಿಯ ವಿಶ್ವಾಸದ ಚಾಪನ್ನು ಮೂಡಿಸಿದ್ದಾರೆ.

ಕಾರ್ಯಕ್ರಮದಲ್ಲಿ ಊರಿನ ಹಿರಿಯರಾದ ಸದಾಶಿವ ಶೆಟ್ಟಿ, ಶಾಲಾ SDMC ಅಧ್ಯಕ್ಷರು ಮಂಜುಳಾ ತಂಡದ ಗೌರವಾಧ್ಯಕ್ಷರಾದ ರಘುನಾಥ ಪೂಜಾರಿ, ಉಪಾದ್ಯಕ್ಷರಾದ ಸಂದೀಪ್ ಪೂಜಾರಿ ಮಹಿಳಾ ಘಟಕದ ಅಧ್ಯಕ್ಷರು ಸಂಪ ಪೂಜಾರಿ,ಉಪಾದ್ಯಕ್ಷರಾದ ಶಶಿಕಲಾ ಪೂಜಾರಿ, ಪ್ರ ಕಾರ್ಯದರ್ಶಿ ಕವಿತಾ ಉದಯ್ ಸದಸ್ಯರು ಸುಗಂಧಿ ಪೂಜಾರಿ ,ವಿಜಯ್ ಕುಮಾರ್ ಪ್ರವೀಣ್ ಕುಮಾರ್, ಶಾಲಾ ಶಿಕ್ಷಕ ವೃಂದ, ಪುಟಾಣಿ ಮಕ್ಕಳು ಮತ್ತು ಗ್ರಾಮಸ್ಥರು ಉಪಸಿತರಿದ್ದರು

Related posts

ಶ್ರೀ ಕೃಷ್ಣ ಮಠಕ್ಕೆ ಅಗಮಿಸಿದ ಯೋಗಗುರು ಬಾಬಾರಾಮ್ ದೇವ್ ಜೀಗೆ ಪೂರ್ಣಕುಂಭ ಸ್ವಾಗತ

Udupilive News

ಬನ್ನಂಜೆಯಲ್ಲಿ ಹೆದ್ದಾರಿ ಡಿವೈಡರ್ ಒಡೆದು ಹಾಕಿದ ಪ್ರಕರಣ ,ಬಿಜೆಪಿ ಭ್ರಷ್ಚಚಾರಕ್ಕೆ ಹಿಡಿದ ಕೈ ಕನ್ನಡಿ : ಬನ್ನಂಜೆ ಸುರೇಶ್ ಶೆಟ್ಟಿ ಆಕ್ರೋಶ

Udupilive News

ಅಂಬಲಪಾಡಿ ಬಾಲ ಗಣೇಶೋತ್ಸವ ಸಮಿತಿ ಅಧ್ಯಕ್ಷರಾಗಿ ಸುಮಂತ್ ಶೆಟ್ಟಿಗಾರ್

Udupilive News

Leave a Comment