ಉಡುಪಿ

ಅಗಸ್ಟ್ 10 ರಂದು ಸೂಪರ್ ಹಿಟ್ ನಾಟಕ “ಶಾಂಭವಿ ” ಇದರ 222 ಪ್ರದರ್ಶನ ಮತ್ತು ಸಂಭ್ರಮಾಚರಣೆ

ತುಳು ಹಾಗೂ ಕನ್ನಡ ರಂಗಭೂಮಿಗೆ ಕಳೆದ 12 ವರ್ಷಗಳಿಂದ ದಿ.ಅಲೆವೂರು ಶೇಖರ್ ಪೂಜಾರಿಯವರ ಸಾರಥ್ಯದಲ್ಲಿ ಅದ್ಭುತ ಕಲಾಕಾಣಿಕೆಗಳನ್ನು ನೀಡುತ್ತಾ ಬಂದಿರುವ ಕಲಾತಂಡ ಅಭಿನಯ ಕಲಾವಿದರು, ಉಡುಪಿ. ಪ್ರಸ್ತುತ ಬಾಲಕೃಷ್ಣ ಶೆಟ್ಟಿ ನಿಟ್ಟೂರು ಇವರ ಸಾರಥ್ಯದಲ್ಲಿ, ಯತೀಶ್ ಕುಮಾರ್ ಅಲೆವೂರು ಇವರ ಗೌರವ ಸಲಹೆಯೊಂದಿಗೆ, ಉಮೇಶ್ ಅಲೆವೂರು ಇವರ ಅಧ್ಯಕ್ಷತೆಯಲ್ಲಿ, ತುಳುನಾಡ ರತ್ನ ದಿನೇಶ್ ಅತ್ತಾವರ್ ಇವರ ದಕ್ಷ ನಿರ್ದೇಶನದಲ್ಲಿ ಮೂಡಿಬಂದ ಈ ತಂಡದ ಈ ಬಾರಿಯ ಸೂಪರ್ ಹಿಟ್ ನಾಟಕ “ಶಾಂಭವಿ” ಇದರ 222 ನೇ ಪ್ರದರ್ಶನವು ರಂಗಪಯಣ ಹಾಗೂ ಅಭಿನಯ ಕಲಾವಿದರು ಉಡುಪಿ ಇದರ ಸಹಭಾಗಿತ್ವದಲ್ಲಿ, ಎಚ್.ಎಸ್ ಪ್ರಾಪರ್ಟೀಸ್ ಇವರ ಪ್ರಾಯೋಜಕತ್ವದಲ್ಲಿ ಹಾಗೂ “ಸುಪ್ರೀಂ ಸೂರ್ಯ 100% ತೆಂಗಿನ ಎಣ್ಣೆ, ಲಕ್ಷ್ಮೀಶ್ಯಾಂ ಡೆವೆಲಪರ್ಸ್, ರಿಯೂನಿಯನ್, ಎಸ್.ವಿ ಸರ್ವಿಸಸ್ ಇವರ ಸಹಪ್ರಾಯೋಜಕತ್ವದಲ್ಲಿ “ಶಾಂಭವಿ 222 ಸಂಭ್ರಮ” ವಿಜೃಂಭಣೆಯಿಂದ ಆಗಸ್ಟ್ 10 ಸಂಜೆ 4 ರಿಂದ ರಾತ್ರಿ 10 ರ ವರೆಗೆ ಎಂ.ಜಿ.ಎಂ ಕಾಲೇಜ್ ನ ಮುದ್ದಣ ಮಂಟಪದಲ್ಲಿ ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ ನೃತ್ಯ ತಂಡ “ಸ್ಮಾರ್ಟ್ ಗೈಸ್ ಡಾನ್ಸ್ ಅಕಾಡೆಮಿ” ಇವರಿಂದ ನೃತ್ಯ ಕಾರ್ಯಕ್ರಮ, ಹಲವಾರು ಪ್ರಶಸ್ತಿ ವಿಜೇತ ತಂಡ “ಪ್ರಶಂಸಾ, ಕಾಪು” ಇವರಿಂದ ಹಾಸ್ಯ ಕಾರ್ಯಕ್ರಮ, ಹಲವು ವಿಶ್ವದಾಖಲೆಗಳ ಮೂಲಕ ಮಿಂಚಿರುವ ಯೋಗಪಟು “ತನುಶ್ರೀ ಪಿತ್ರೋಡಿ” ಯವರಿಂದ ವಿಶೇಷ ಯೋಗ ನೃತ್ಯ, ತುಳು ಹಾಗೂ ಕನ್ನಡ ರಂಗಭೂಮಿಯ ಸಾಮಾಜಿಕ ನಾಟಕದ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಅದ್ದೂರಿ ರಂಗವಿನ್ಯಾಸದ ಜೊತೆಗೆ ಕಲಾಭಿಮಾನಿಗಳ ಮೆಚ್ಚುಗೆಗೆ ಪಾತ್ರವಾದ ಶಾಂಭವಿ ನಾಟಕದ 222 ನೇ ಪ್ರದರ್ಶನ ಅದ್ಧೂರಿಯಾಗಿ ನಡೆಯಲಿದೆ.

ರಂಗದಾಖಲೆಯ ಈ ಅದ್ಧೂರಿ ಸಂಗಮಕ್ಕೆ ಕಲಾಭಿಮಾನಿಗಳಾದ ತಮಗೆಲ್ಲರಿಗೂ ಪ್ರೀತಿಯ ಸ್ವಾಗತ ಬಯಸುವ “ರಂಗ ಪಯಣ” ಹಾಗೂ “ಅಭಿನಯ ಕಲಾವಿದರು” ಉಡುಪಿ

Related posts

ಉಡುಪಿ ತಾಲೂಕು ತುಳುವ ಮಹಾಸಭೆ ಸಂಚಾಲಕರ ಸಭೆ ತುಳುವ ಮಹಾಸಭೆ ಮೂಲಕ ತುಳುನಾಡು ಕಟ್ಟುವ ಸಂಕಲ್ಪ – ತಾರಾ ಯು. ಆಚಾರ್ಯ

Udupilive News

ದುಬೈನ ಫಾರ್ಚ್ಯೂನ್ ಸಂಸ್ಥೆಗೆ 2.5 ಕೋಟಿ ವಂಚಿಸಿ‌ ಬಂಧನಕ್ಕೊಳಗಾಗಿದ್ದ ಆರೋಪಿಯ ಜಾಮೀನು ಅರ್ಜಿ ತಿರಸ್ಕೃತ

Udupilive News

ಗ್ಯಾರೇಜಿನಲ್ಲಿಟ್ಟಿದ್ದ ಕಾರು ಕಳವು!

Udupilive News

Leave a Comment