ಉಡುಪಿ

ಸ್ವಾತಂತ್ರ್ಯೋತ್ಸವ – ಸ್ವಚ್ಛ ಹಾಗೂ ವ್ಯಸನ ಮುಕ್ತ ಗ್ರಾಮ ನಿರ್ಮಾಣಕ್ಕೆ ಗಂಟಿಹೊಳೆ ಕರೆ

ಉಡುಪಿ: ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿಯ ಸ್ವಾತಂತ್ರ್ಯೋತ್ಸವವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲು ಬೈಂದೂರು ಶಾಸಕ ಗುರುರಾಜ್‌ ಗಂಟಿಹೊಳೆ ಅವರು ಕರೆ ನೀಡಿದ್ದಾರೆ.

ಈ ಸ್ವಾತಂತ್ರ್ಯ ದಿನಾಚರಣೆಯನ್ನು ಬೈಂದೂರು ಕ್ಷೇತ್ರದಾದ್ಯಂತ ಸ್ವಚ್ಛತೆ ಹಾಗೂ ವ್ಯಸನ ಮುಕ್ತ ಪರಿಕಲ್ಪನೆಯಡಿ ಆಚರಿಸಲು ಸಂಕಲ್ಪಿಸಲಾಗಿದ್ದು, ಅದರಂತೆ ಬೈಂದೂರು ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಈ ಬಗ್ಗೆ ಈಗಾಗಲೇ 01-08-2025 ರಿಂದ 15-08-2025 ರವರೆಗೆ ಕಾರ್ಯಕ್ರಮಗಳು ಆಯೋಜನೆಗೊಂಡಿವೆ.

ಕ್ಷೇತ್ರದ ವಿವಿಧ ಕಡೆಗಳಲ್ಲಿ ಸ್ವಚ್ಛತೆ ಹಾಗೂ ವ್ಯಸನ ಮುಕ್ತ ಗ್ರಾಮ ನಿರ್ಮಾಣದ ಕುರಿತು ಜನ ಜಾಗೃತಿ ಮೂಡಿಸಲಾಗುತ್ತಿದೆ. ವಿಶೇಷವಾಗಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಶಾಲೆಗಳಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ತಜ್ಞ ಸಂಪನ್ಮೂಲ ವ್ಯಕ್ತಿ ಗಳಿಂದ ವಿದ್ಯಾರ್ಥಿಗಳಿಗೆ ಅನೈರ್ಮಲ್ಯ ಹಾಗೂ ಕೆಟ್ಟ ವ್ಯಸನಗಳ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸಲಾಗುತ್ತಿದೆ. ಈ ಎರಡೂ ಸಮಸ್ಯೆಗಳು ಆರೋಗ್ಯಯುತ ಸಮಾಜಕ್ಕೆ ಕಂಟಕವಾದ ಪಿಡುಗುಗಳಾಗಿರುವುದರಿಂದ ಇದನ್ನು ಹೋಗಲಾಡಿಸಿ ಸ್ವಚ್ಛ ಹಾಗೂ ವ್ಯಸನ ಮುಕ್ತ ಗ್ರಾಮ ನಿರ್ಮಾಣ ಮಾಡುವುದರ ಜೊತೆಗೆ ಸ್ವಚ್ಛ ಹಾಗೂ ವ್ಯಸನ ಮುಕ್ತ ಬೈಂದೂರು ನಿರ್ಮಾಣಕ್ಕೆ ಎಲ್ಲಾ ನಾಗರೀಕರು ಹಾಗೂ ಸಂಘ ಸಂಸ್ಥೆಯವರು ಪಟ್ಟಣ ಪಂಚಾಯತ್ ಹಾಗೂ ಗ್ರಾಮ ಪಂಚಾಯತ್ ಜೊತೆ ಕೈಜೋಡಿಸಬೇಕೆಂದು ಶಾಸಕ ಗುರುರಾಜ್ ಗಂಟಿಹೊಳೆಯವರು ಕರೆ ನೀಡಿದ್ದಾರೆ.

Related posts

ಗ್ಯಾರೇಜಿನಲ್ಲಿಟ್ಟಿದ್ದ ಕಾರು ಕಳವು!

Udupilive News

ಬೆಂಗಳೂರು ಜನತೆಯಿಂದ ತಿರಸ್ಕೃತ ಸೌಮ್ಯ ರೆಡ್ಡಿ ಬಿಟ್ಟಿ ಉಪದೇಶ ಉಡುಪಿ ಜನತೆಗೆ ಅನಗತ್ಯ : ಸಂಧ್ಯಾ ರಮೇಶ್

Udupilive News

ಗಣೇಶ ಹಬ್ಬಕ್ಕೆ ಪ್ರಯಾಣಿಕರಿಗೆ ಕೆಎಸ್​ಆರ್​ಟಿಸಿ ಗುಡ್ ನ್ಯೂಸ್: ರಾಜ್ಯ, ಹೊರ ರಾಜ್ಯಗಳಿಗೆ 1500 ಹೆಚ್ಚುವರಿ ಬಸ್

Udupilive News

Leave a Comment