ಬೈಂದೂರು: ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ O ಮಾನ್ಸೂನ್ ಅಬ್ಬರಿಸುತ್ತಿದ್ದು, ಕಳೆದೊಂದು ವಾರದಿರದ ಜೋರು ಮಳೆಯಾಗುತ್ತಿದೆ. ಪರಿಣಾಮ ಹಳ್ಳ ಕೊಳ್ಳಗಳು, ಝರಿ, ನದಿಗಳು ಮೈದುಂಬಿ ಹರಿಯುತ್ತಿವೆ.ಮಳೆಯಾರ್ಭಟಕ್ಕೆ ಹಳ್ಳಗಳನ್ನು ತಮ್ಮ ವ್ಯಾಪ್ತಿ ಮೀರಿ ಹರಿಯುತ್ತಿದ್ದು, ಹಲವೆಡೆ ರಸ್ತೆ ಮೇಲೆ ನೀರು ಹರಿಯುತ್ತಿದೆ.ಹಲವೆಡೆ ನೀರಿನ ರಭಸ ಜೋರಾಗಿದ್ದು, ಸಂಚಾರ ಬಲು ಕಠಿಣವಾಗಿದೆ.ಬೈಂದೂರು ತಾಲೂಕಿನ ನಾವುಂದದ ಬಡಾಕೆರೆಯಲ್ಲೂ ಸಹ ಇಂತಹದ್ದೇ ಪರಿಸ್ಥಿತಿ ನಿರ್ಮಾಣವಾಗಿದ್ದು, ರಸ್ತೆ ಮೇಲೆ ಅಪಾಯದ ಮಟ್ಟ ಮೀರ ನೀರು ಹರಿಯುತ್ತಿದೆ. ಹೀಗಿದ್ದರೂ ಯುವಕರಿಬ್ಬರು ಉದ್ಧಟತನ ಮೆರೆದಿದ್ದು, ರಭಸವಾಗಿ ಹರಿಯುತ್ತಿದ್ದ ನೀರಿನ ಮೇಲೆ ಬೈಕ್ ಚಲಾಯಿಸಿ ರಸ್ತೆ ದಾಟುವ ದುಸ್ಸಾಹಸಕ್ಕೆ ಕೈಹಾಕಿದ್ದಾರೆ.ಆದರೆ ನೀರಿನ ರಭಸ ಜೋರಾಗಿದ್ದು, ನೋಡ ನೋಡುತ್ತಿದ್ದಂತೆ ಯುವಕರನ್ನು ನೀರು ಸೆಳೆದು ಹಳ್ಳಕ್ಕೆ ಬೀಳಿಸಿದೆ. ಬೈಕ್ ಸಮೇತ ಯುವಕರು ನೀರಿಗೆ ಬಿದ್ದಿದ್ದು, ಕೊಚ್ಚಿ ಹೋಗಿದ್ದಾರೆ. ಇನ್ನು ಸ್ಥಳೀಯರೊಬ್ಬರು ಈ ಘಟನೆಯನ್ನು ಸಂಪೂರ್ಣವಾಗಿ ಚಿತ್ರಿಸಿದ್ದು, ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.https://www.instagram.com/reel/DK9p0h-z-uN/?igsh=Y3ptZ2hsNWM0anU=