ಉಡುಪಿ

ಪೇಜಾವರ ಶ್ರೀಗಳ ಬಗ್ಗೆ ಲಘುವಾಗಿ ಮಾತನಾಡಿದ್ದು ಹಿಂದೂ ಸಮಾಜಕ್ಕೆ ನೋವು ತಂದಿದೆ; ಸಂಸದ ಕೋಟ ಶ್ರೀನಿವಾಸ ಪೂಜಾರಿ

ಉಡುಪಿ: ಪೇಜಾವರ ಶ್ರೀಗಳ ಬಗ್ಗೆ ಬಿಕೆ ಹರಿಪ್ರಸಾದ್ ಲಘುವಾಗಿ ಮಾತನಾಡಿದ್ದು, ಹಿಂದೂ ಸಮಾಜಕ್ಕೆ ನೋವು ತಂದಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಪೇಜಾವರ ಶ್ರೀಗಳ ಕುರಿತು ಅವಹೇಳಕಾರಿ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ಉಡುಪಿಯಲ್ಲಿ ಇಂದು ಪ್ರತಿಕ್ರಿಯಿಸಿದ ಅವರು, ಹರಿಪ್ರಸಾದ್ ಸರ್ವ ಶ್ರೇಷ್ಠ ಸಂತನ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ. ಇದರಿಂದ ಯಾವುದೇ ಒಂದು ಜಾತಿ ವರ್ಗಕ್ಕೆ ಅಲ್ಲ, ಇಡೀ ಹಿಂದೂ ಸಮುದಾಯಕ್ಕೆ ನೋವಾಗಿದೆ. ಹರಿಪ್ರಸಾದ್ ಸ್ವಲ್ಪ ಗಡಿಬಿಡಿ ಮನುಷ್ಯ. ಗಡಿಬಿಡಿಯಲ್ಲಿ ಮಾತನಾಡಿದರೆ ತಕ್ಷಣ ಪೇಜಾವರ ಶ್ರೀಗಳ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.

ಪೇಜಾವರ ಹಿರಿಯ ವಿಶ್ವೇಶತೀರ್ಥರು ಪ್ರಥಮ ಬಾರಿಗೆ ಪರಿಶಿಷ್ಟರ ಕೇರಿಗಳಿಗೆ ಭೇಟಿ ಕೊಟ್ಟವರು. ಅಸ್ಪೃಶ್ಯತೆ ನಿವಾರಣೆಗೆ ಶ್ರಮಿಸಿದವರು, ಜನಾಂದೋಲನ ಮಾಡಿದವರು. ವಿಶ್ವಪ್ರಸನ್ನರಿಗೆ ರಾಷ್ಟ್ರಮಟ್ಟದಲ್ಲಿ ಗೌರವ ಇದೆ. ರಾಮಮಂದಿರ ಉದ್ಘಾಟನೆ ವೇಳೆ ಕೇಂದ್ರ ಸರ್ಕಾರ ಬಹಳ ಗೌರವದಿಂದ ನಡೆಸಿಕೊಂಡಿದೆ. ಅವರ ಬಗ್ಗೆ ಲಘವಾಗಿ ಮಾತನಾಡಿದ್ದು ಸರಿಯಲ್ಲ. ಇಡೀ ರಾಷ್ಟ್ರ ಹರಿಪ್ರಸಾದ್ ಮಾತಿನಿಂದ ನೋವುಪಟ್ಟಿದೆ. ಹೀಗಾಗಿ ತಕ್ಷಣವೇ ಹರಿಪ್ರಸಾದ್ ಶ್ರೀಗಳ ಕ್ಷಮೆಯಾಚಿಸಬೇಕು ಎಂದು ಹೇಳಿದರು.

Related posts

ಶಕ್ತಿ ಯೋಜನೆ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ ಇಡೀ ದೇಶಕ್ಕೆ ಪಂಚ ಗ್ಯಾರಂಟಿ ಯೋಜನೆಗಳು ಮಾದರಿ ಉಡುಪಿಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸ್ಪಷ್ಟನೆ

Udupilive News

ದುಬೈನ ಫಾರ್ಚ್ಯೂನ್ ಸಂಸ್ಥೆಗೆ 2.5 ಕೋಟಿ ವಂಚಿಸಿ‌ ಬಂಧನಕ್ಕೊಳಗಾಗಿದ್ದ ಆರೋಪಿಯ ಜಾಮೀನು ಅರ್ಜಿ ತಿರಸ್ಕೃತ

Udupilive News

ಜನಸಾಮಾನ್ಯರ ಕೆಲಸಕಾರ್ಯಗಳನ್ನು ಆದ್ಯತೆಯ ಮೇಲೆ ಕೈಗೊಳ್ಳಿ : ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಮೀ ಆರ್ ಹೆಬ್ಬಾಳಕರ್

Udupilive News

Leave a Comment