ಉಡುಪಿಬೈಂದೂರು

ಮನೆಯಂಗಳದಲ್ಲಿ ಮಲಗಿದ್ದ ನಾಯಿಯನ್ನು ಹೊತ್ತೊಯ್ದ ಚಿರತೆ.

ಉಡುಪಿ: ಚಿರತೆಯೊಂದು ಮನೆಯಂಗಳದಲ್ಲಿ ಮಲಗಿದ್ದ ನಾಯಿಯ ಮೇಲೆ ದಾಳಿ ನಡೆಸಿ ಬಳಿಕ ಹೊತ್ತೊಯ್ದ ಘಟನೆ ಬೈಂದೂರು ತಾಲೂಕಿನ ಕಟ್ ಬೆಲ್ತೂರು ಗ್ರಾಪಂ ವ್ಯಾಪ್ತಿಯ ದೇವಳಕುಂದ ಎಂಬಲ್ಲಿ ನಡೆದಿದೆ.

ಚಿರತೆ ನಾಯಿಯನ್ನು ಹೊತ್ತೊಯ್ಯುವ ಭಯಾನಕ ದೃಶ್ಯ ಮನೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ದೇವಳಕುಂದ ಗ್ರಾಮದ ಜಾಡಿಕಾಸ್ರ್ ನ ಸುಧೀರ್ ಶೆಟ್ಟಿ ಎಂಬವರ ಮನೆಯಲ್ಲಿ ಈ ಘಟನೆ ನಡೆದಿದೆ. ಹೊಂಚು ಹಾಕಿಕೊಂಡು ಬರುವ ಚಿರತೆ ಅಂಗಳದಲ್ಲಿ ಮಲಗಿದ್ದ ನಾಯಿಯ ಮೇಲೆ ಏಕಾಏಕಿಯಾಗಿ ದಾಳಿ ನಡೆಸಿದೆ ಗಾಢ ನಿದ್ದೆಯಲ್ಲಿದ್ದ ನಾಯಿಗೆ ಚಿರತೆಯ ಬಾಯಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ. ಕ್ಷಣಾರ್ಧದಲ್ಲಿ ಚಿರತೆ ನಾಯಿಯನ್ನು ಹೊತ್ತುಕೊಂಡು ಕಾಡಿನೊಳಗೆ ಓಡಿ ಹೋಗಿದೆ.

ಚಿರತೆ ಕಾಣಿಸಿಕೊಂಡಿದ್ದರಿಂದ ಗ್ರಾಮಸ್ಥರಿಗೆ ಆತಂಕ ಶುರುವಾಗಿದೆ. ಬೋನಿಟ್ಟು ಚಿರತೆ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಮನವಿ ಮಾಡಿದ್ದಾರೆ.

Related posts

ಅ.9ಕ್ಕೆ ಉಡುಪಿಯಲ್ಲಿ ‘ದಿ ಓಷಿಯನ್ ಪರ್ಲ್ ಟೈಮ್ಸ್ ಸ್ಕ್ವೇರ್’ ಉದ್ಘಾಟನೆ

Udupilive News

79 ನೇ ಸ್ವಾಂತಂತ್ಯ್ರ ದಿನಾಚರಣೆ.ಜಿಲ್ಲಾ ಕ್ರೀಡಾಂಗಣದಲ್ಲಿ ಧ್ವಜಾರೋಹಣ ನೆರವೇರಿಸಿದ ಉಸ್ತುವರಿ ಸಚಿವರು.

Udupilive News

ಭಯೋತ್ಪಾದಕರ ವಿರುದ್ಧದ ಕ್ರಮಗಳಿಗೆ ಬೆಂಬಲ: ಆಪರೇಷನ್ ಸಿಂಧೂರ್ ಬಗ್ಗೆ ಸಿಪಿಐ(ಎಂ)

Udupilive News

Leave a Comment