ಉಡುಪಿ

ಇಂದ್ರಾಳಿ ಸೇತುವೆ ಕಾಮಗಾರಿ ವೇಳೆ. ತಲೆಕೆಳಗಾಗಿ ಬಿದ್ದ ಕ್ರೇನ್.

ಉಡುಪಿ: ನಾಲ್ಕಾರು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಇಂದ್ರಾಳಿ ರೈಲ್ವೆ ಬ್ರಿಡ್ಜ್ ಕಾಮಗಾರಿ ಗೊಂದಲದ ಗೂಡಾಗಿದೆ. ಇಲ್ಲಿನ ಏಕಮುಖ ಸಂಚಾರದಿಂದ ಜನರು ರೋಸಿ ಹೋಗಿದ್ದಾರೆ. ಸಾಕಷ್ಟು ಹೋರಾಟಗಳ ಬಳಿಕ ಇದೀಗ ಸೇತುವೆ ಕಾಮಗಾರಿ ಆಮೆ ಗತಿಯಲ್ಲಿ ಶುರುವಾಗಿದೆ. ಕಾಮಗಾರಿ ನಡೆಯುತ್ತಿರುವ ವೇಳೆ ಕ್ರೈನ್ ವೊಂದು ತಲೆಕೆಳಗಾಗಿ ಬಿದ್ದ ಘಟನೆ ನಡೆದಿದೆ.

ಎಡಮಗ್ಗಲಿನ ಎತ್ತರದ ರಸ್ತೆಯಿಂದ ಬಲ ಮಗ್ಗುಲಿನಲ್ಲಿರುವ ತಗ್ಗು ರಸ್ತೆಗೆ, ಈ ಕ್ರೈನ್ ಬಿದ್ದಿದ್ದರೆ ಭಾರಿ ಅಪಾಯ ಸಂಭವಿಸುತ್ತಿತ್ತು. ಹತ್ತಾರು ವಾಹನಗಳು ಸಂಚರಿಸುವ ರಸ್ತೆಯ ಪಕ್ಕದಲ್ಲಿ ಕಂಡು ಬಂದ ಅಪಾಯಕಾರಿ ಸನ್ನಿವೇಶ ಜನರನ್ನು ಬೆಚ್ಚಿ ಬೀಳಿಸಿದೆ.

ತಲೆ ಕೆಳಗಾಗಿ ಬಿದ್ದ ಕ್ರೈನನ್ನು ಇದೀಗ ಬೃಹತ್ ಗಾತ್ರದ ಮತ್ತೊಂದು ಕ್ರೈನ್ ಮೂಲಕ ಎತ್ತಲಾಗಿದೆ. ಪ್ರತಿ ಬಾರಿ ಒಂದಿಲ್ಲೊಂದು ಅಪಾಯವನ್ನು ಆಹ್ವಾನಿಸುವ ಈ ಪ್ರದೇಶ ಕಾಮಗಾರಿ ಪೂರ್ಣಗೊಂಡು ಆದಷ್ಟು ಬೇಗ ಸಾರ್ವಜನಿಕರ ಬಳಕೆಗೆ ಲಭ್ಯವಾಗಲಿ ಎಂದು ಜನರು ಒತ್ತಾಯಿಸಿದ್ದಾರೆ.

Related posts

ಉಡುಪಿಯಲ್ಲಿ ಲವ್ ಜಿಹಾದ್? ಇಸ್ಲಾಂಗೆ ಕನ್ವರ್ಟ್ ಆಗುವಂತೆ ವಿದ್ಯಾರ್ಥಿನಿಗೆ ಕಿರುಕುಳ ಆರೋಪ : ವೈದ್ಯ ಅರೆಸ್ಟ್!

Udupilive News

ಶಕ್ತಿ ಯೋಜನೆ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ ಇಡೀ ದೇಶಕ್ಕೆ ಪಂಚ ಗ್ಯಾರಂಟಿ ಯೋಜನೆಗಳು ಮಾದರಿ ಉಡುಪಿಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸ್ಪಷ್ಟನೆ

Udupilive News

.ಎಂ.ಇ.ಜಿ.ಪಿ ಯೋಜನೆಯ ಕುರಿತು ಸುಳ್ಳು ಮಾಹಿತಿ ಬಗ್ಗೆ ಎಚ್ಚರ

Udupilive News

Leave a Comment