ಕುಂದಾಪುರಬೈಂದೂರುಬ್ರಹ್ಮಾವರ

ಕುಂದಾಪುರ| ವಿವಾಹಿತ ಮಹಿಳೆ ನಾಪತ್ತೆ – ಸ್ಕೂಟರ್, ಚಪ್ಪಲಿ ಸೇತುವೆ ಮೇಲೆ ಪತ್ತೆ! ದೂರು ದಾಖಲು

ಕುಂದಾಪುರ| ವಿವಾಹಿತ ಮಹಿಳೆ ಯೋರ್ವರು ಜೂ. 9 ರಂದು ನಾಪತ್ತೆಯಾದ ಬಗ್ಗೆ ಕುಂದಾಪುರ ಠಾಣೆಯಲ್ಲಿ ದೂರು ದಾಖಲಾಗಿದೆ.

ನಾಪತ್ತೆಯಾದ ಮಹಿಳೆ ಕುಂದಾಪುರ ವಿಠಲವಾಡಿ ಮೂಲದ ಹೀನಾ ಕೌಷರ್ (33) ಎಂದು ತಿಳಿದು ಬಂದಿದೆ.
ಇವರ ಪತಿ ವಿದೇಶದಲ್ಲಿದ್ದು ಎರಡು ಮಕ್ಕಳು ಹಾಗೂ ತಾಯಿಯೊಂದಿಗೆ ಕುಂದಾಪುರ ವಿಠಲವಾಡಿಯಲ್ಲಿ ವಾಸಿಸುತ್ತಿದ್ದರು.

ಸೋಮವಾರ ಬೆಳಿಗ್ಗೆ 4 ಗಂಟೆ ಸುಮಾರಿಗೆ ಕುಂದಾಪುರ ಚರ್ಚ್ ರೋಡ್ ಯಿಂದ ಕೋಡಿಗೆ ಹೋಗುವ ಸೇತುವೆ ಬಳಿ ಸ್ಕೂಟರ್ ಮತ್ತು ಚಪ್ಪಲಿ ಪತ್ತೆಯಾಗಿದೆ.

ಪೊಲೀಸರು, ಅಗ್ನಿ ಶಾಮಕದಳ ಹಾಗೂ ಸ್ಥಳೀಯರು ಸೇರಿ ನದಿಯಲ್ಲಿ ಹುಡುಕಾಟ ನಡೆಸಿದ್ದು ಎಲ್ಲಿಯೂ ಪತ್ತೆ ಆಗಿರುವುದಿಲ್ಲ. ಮೊಬೈಲ್ ಸ್ವಿಚ್ ಆಫ್ ಆಗಿರುತ್ತದೆ.
ಇದರಿಂದಾಗಿ ಆತ್ಮಹತ್ಯೆಯೋ ಅಥವಾ ನಾಪತ್ತೆ ಯೋ ಎನ್ನುವ ಅನುಮಾನ ವ್ಯಕ್ತವಾಗಿದೆ..
ಕುಂದಾಪುರ ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿ ಕೊಂಡಿದ್ದಾರೆ.

Related posts

ಶಂಕರನಾರಾಯಣ: ಮಳೆಗೆ ಅಪಾರ ಹಾನಿ: ಮರ ಬಿದ್ದು ಕಾರಿಗೆ ಹಾನಿ

Udupilive News

ಮಾಹೆ 19 ನೇ  ಎಫ್ ಐ ಸಿ ಸಿ ಐ  ಉನ್ನತ ಶಿಕ್ಷಣ ಪ್ರಶಸ್ತಿ 2024 ರ “ವರ್ಷದ ಅತ್ಯುತ್ತಮ ವಿಶ್ವವಿದ್ಯಾಲಯ” (ಸ್ಥಾಪಿತ ವರ್ಗ)   ಪ್ರಶಸ್ತಿಪಡೆದಿದೆ

Udupilive News

ಬೈಂದೂರಿಗೆ ಬಂದ ಬಾಹುಬಲಿ ವಿಗ್ರಹ

Udupilive News

Leave a Comment