ಉಡುಪಿ: ಜಿಲ್ಲೆಯಲ್ಲಿ ದಲಿತ ಸಮುದಾಯ ಎದುರಿಸುತ್ತಿರು ಸಮಸ್ಯೆಗಳು ಮತ್ತು ಅವುಗಳನ್ನು ಪರಿಹರಿಸುವಂತೆ ಕೋರಿ ಡಿ ಎಸ್ ಎಸ್ ಕಾರ್ಯಕರ್ತರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ರಾಜ್ಯದ ಇತರೆ ಜಿಲ್ಲೆಗಳಿಗೆ ಹೋಲಿಸಿದಲ್ಲಿ ಉದ್ಯೋಗ, ಭೂ ಮಂಜೂರಾತಿ, ಉದ್ಯಮ ಮತ್ತು ಶೈಕ್ಷಣಿಕ ಸಂಸ್ಥೆಗಳ ಒಡೆತನ ವಿಷಯಗಳಲ್ಲಿ ಉಡುಪಿ ಜಿಲ್ಲೆಯ ದಲಿತ ಸಮುದಾಯ ಅತೀ ಹಿಂದುಳಿದಿರುತ್ತದೆ. ಇದಕ್ಕೆ ಜನಪ್ರತಿನಿಧಿಗಳು, ಆಡಳಿತ ಶಾಹಿ ವ್ಯವಸ್ಥೆ ಮತ್ತು ಸರಕಾರದ ಯೋಜನೆಗಳಲ್ಲಿ ಜಿಲ್ಲೆಗೆ ನೀಡುತ್ತಿರುವ ಕನಿಷ್ಟ ಗುರಿಗಳೇ ಕಾರಣವಾಗಿರುತ್ತದೆ.
ಇತ್ತೀಚಿನ ದಿನಗಳಲ್ಲಿ ಸಮುದಾಯವು ತೀವ್ರ ನಿರ್ಲಕ್ಷ್ಯಕ್ಕೆ ಒಳಗಾಗಿದ್ದು, ಈ ಕೆಳಗಿನ ಸಮಸ್ಯೆಗಳನ್ನು ಎದುರಿಸುತ್ತಿದೆ.
1. ಉಡುಪಿ ಜಿಲ್ಲೆಯಲ್ಲಿ ಇರುವ ಲಭ್ಯ ಡಿ.ಸಿ ಮನ್ನಾ ಭೂಮಿಗಳನ್ನು ಗುರುತಿಸಿ, ಅರ್ಹ ಭೂ ರಹಿತ ಪರಿಶಿಷ್ಟರಿಗೆ ಮರು ಹಂಚಿಕೆ ಮಾಡುವ ಕಾರ್ಯಕ್ರಮವನ್ನು ಈ ಕೂಡಲೇ ಜಾರಿಗೊಳಿಸಬೇಕು.
ನಿಗಮ 2. ಉಡುಪಿ ಜಿಲ್ಲೆಯ ಅಂಬೇಡ್ಕರ್ ಅಭಿವೃದ್ಧಿ ನಿಷ್ಟ್ರಯೋಜಕವಾಗಿದ್ದು, ಇಲ್ಲಿ ಸರಕಾರದ ಯಾವುದೇ ಅನುದಾನ ಮಂಜೂರಾಗುತ್ತಿಲ್ಲ. ನಿರುದ್ಯೋಗಿ ಪರಿಶಿಷ್ಟ ಯುವಕರಿಗೆ ಉದ್ಯೋಗ ಕಲ್ಪಿಸಲು ಈ ನಿಗಮಕ್ಕೆ ವಾರ್ಷಿಕ ಕನಿಷ್ಟ ರೂ. 2 ಕೋಟಿ ಅನುದಾನ ಒದಗಿಸಬೇಕು.
3. ಉಡುಪಿ ಜಿಲ್ಲೆಯಲ್ಲಿ ಪರಿವಾರ ನಾಯ್ಕ, ಮೊಗೇರ ಮತ್ತು ಭೋವಿ ಸಮುದಾಯಗಳು ಪರಿಶಿಷ್ಟರ ಹೆಸರಿನಲ್ಲಿ ಜಾತಿ ಪ್ರಮಾಣಪತ್ರವನ್ನು ‘ಪಡೆಯುತ್ತಿವೆ. ಜಿಲ್ಲೆಯಲ್ಲಿ ಈ ಸಮುದಾಯಗಳು ಪ್ರವರ್ಗ-1 ರಲ್ಲಿ ಗುರುತಿಸಿಕೊಂಡ ಜಾತಿಗಳಾಗಿದ್ದು, ಇವುಗಳಿಗೆ ನಕಲಿ ಜಾತಿ ಪ್ರಮಾಣಪತ್ರ ನೀಡುತ್ತಿರುವುದನ್ನು ಕೂಡಲೇ ನಿಲ್ಲಿಸಬೇಕು ಮತ್ತು ಇವರಿಗೆ ಜಾತಿ ಪ್ರಮಾಣಪತ್ರ ವಿತರಿಸಿದ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು.
4. ಉಡುಪಿ ಜಿಲ್ಲೆಯಲ್ಲಿ ಪರಿಶಿಷ್ಟೇತರರು ಅಮಾಯಕ ದಲಿತರ ಹೆಸರಿನಲ್ಲಿ ಗುತ್ತಿಗೆ ಪರವಾನಿಗೆಯನ್ನು ಮಾಡಿಕೊಂಡು ಕನಿಷ್ಟ ಮೊತ್ತಕ್ಕೆ ಟೆಂಡರ್ ಸಲ್ಲಿಸಿ, ಪರಿಶಿಷ್ಟರಿಗೆ ದಕ್ಕ ಬೇಕಾಗಿರುವ ಟೆಂಡರ್ ಕಾಮಗಾರಿಗಳನ್ನು ಪಡೆದುಕೊಳ್ಳುತ್ತಿದ್ದಾರೆ ಇಂತಹ ಪ್ರಕರಣಗಳ ಬಗ್ಗೆ ವಿಶೇಷ ತನಿಖೆ/ಲೋಕಾಯುಕ್ತ ತನಿಖೆ ನಡೆಸಿ, ಅಂತಹ ಪರಿಶಿಷ್ಟೇತರ ಗುತ್ತಿಗೆದಾರರ ಗುತ್ತಿಗೆ ಲೈಸನ್ಸ್ ರದ್ದುಗೊಳಿಸಬೇಕು.
5. ಉಡುಪಿ ಜಿಲ್ಲೆಯಲ್ಲಿ ಪಿ.ಟಿ.ಸಿ.ಎಲ್ ಕಾಯ್ದೆ ನೆಪಮಾಡಿಕೊಂಡು, ಪರಿಶಿಷ್ಟ ಜಾತಿ/ಪಂಗಡದವರ ಮಂಜೂರು ಭೂಮಿಗಳನ್ನು ವಾಣಿಜ್ಯ ಉದ್ದೇಶಕ್ಕೆ ಭೂ ಪರಿವರ್ತನೆ ಮಾಡುವುದನ್ನು ನಿಲ್ಲಿಸಲಾಗಿದೆ. ಇದರಿಂದ ಜಿಲ್ಲೆಯ ದಲಿತ ಸಮುದಾಯಕ್ಕೆ ಉದ್ಯಮ ನಡೆಸಲು ದೊಡ್ಡ ಹಿನ್ನಡೆಯಾಗಿರುತ್ತದೆ.
6. ಜಿಲ್ಲೆಯಲ್ಲಿ ಪೋಲೀಸ್ ವರಿಷ್ಠಾಧಿಕಾರಿಗಳ ಕಛೇರಿಯಲ್ಲಿ ದಲಿತ ದೌರ್ಜನ್ಯ ತಡೆ ಕಾಯ್ದೆ/ನಿಮಯದಂತೆ ನಿಗದಿತ ಅವಧಿಯೊಳಗೆ ಕುಂದು ಕೊರತೆ ಸಭೆಯನ್ನು ಕರೆಯಲಾಗುತ್ತಿಲ್ಲ.
7. ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಅಕ್ರಮ-ಸಕ್ರಮ ಸಮಿತಿಗಳು ಕಾರ್ಯನಿರ್ವಹಿಸುತ್ತಿದ್ದು, ಈ ಸಮಿತಿಗಳು ಪರಿಶಿಷ್ಟರ ಅರ್ಜಿಗಳನ್ನು ಆಧ್ಯತೆಯ ಮೇರೆಗೆ ಪರಿಗಣಿಸುತ್ತಿಲ್ಲ.
8. ಪರಿಶಿಷ್ಟರಿಗೆ ಮಂಜೂರು ಆಗಿರುವ ದರ್ಖಾಸ್ತು ಭೂಮಿಗಳು ಬಲಾಡ್ಯ ಸಮುದಾಯಗಳ ಸ್ವಾಧೀನತೆಯಲ್ಲಿ ಇವೆ. ಇನ್ನೂ ಕೆಲವು ಕರ್ನಾಟಕ ಗೇರು ಅಭಿವೃದ್ಧಿ ನಿಗಮವು ಅಕ್ರಮವಾಗಿ ಸ್ವಾಧೀನತೆ ಹೊಂದಿರುತ್ತದೆ. ಇನ್ನೂ ಕೆಲವು ಸಾಮಾಜಿಕ ಅರಣ್ಯದ ಹೆಸರಿನಲ್ಲಿ ಅರಣ್ಯ ಇಲಾಖೆಯವರು ಸ್ವಾಧೀನತೆ ಹೊಂದಿರುತ್ತಾರೆ. ಇಂತಹ ಭೂಮಿಗಳನ್ನು ಮಂಜೂರಾತಿದಾರರಿಗೆ ಒದಗಿಸಿಕೊಡಬೇಕು.
-3-
9. ಜಿಲ್ಲೆಯಲ್ಲಿ ಪರಿಬಾವಿತ ಅರಣ್ಯ ಪ್ರದೇಶವೆಂದು ದೋಷಪೂರಿತ ನಿರ್ಣಯಗಳಿಂದ ಸಮುದಾಯಕ್ಕೆ ಮಂಜೂರು ಆಗಿರುವ ಭೂಮಿಗಳು ಮತ್ತು ಮಂಜೂರಾತಿಗಾಗಿ ನಿಗದಿ ಅರ್ಜಿ ನಮೂನೆಯಲ್ಲಿ ಸಲ್ಲಿಸಿರುವ ಪರಿಶಿಷ್ಟರ ಅರ್ಜಿಗಳನ್ನು ಪರಿಗಣಿಸುತ್ತಿಲ್ಲ. ಈ ಬಗ್ಗೆ ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆಯು ಜಂಟಿ ಸರ್ವೆ ನಡೆಸಬೇಕು.
10. ಪರಿಶಿಷ್ಟ ಜಾತಿ ಮತ್ತು ಪಂಗಡದವರ ಭೂಮಿ ಮತ್ತು ವಸತಿ ಸಮಸ್ಯೆಗಳ ನಿವಾರಣೆಗಾಗಿ ಪ್ರತೀ ತಾಲೂಕು ತಹಶೀಲ್ದಾರರ ವ್ಯಾಪ್ತಿಯಲ್ಲಿ ವಿಶೇಷ ಕಂದಾಯ ಅದಾಲತ್ ನಡೆಸಬೇಕು.
ಆದ್ದರಿಂದ ತಾವು ಈ ಕೂಡಲೇ ಕ್ರಮವಹಿಸಿ, ಈ ಮೇಲೆ ಪರಿಶಿಷ್ಟರ ಸಮಸ್ಯೆಗಳನ್ನು ಪರಿಹಾರ ಅಧಿಕಾರಿಗಳಿಗೆ ಸೂಕ್ತ ಆದೇಶ ನೀಡಬೇಕಾಗಿ ಕೋರಿಕೊಳ್ಳುತ್ತೇವೆ.
ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) ಅಂಬೇಡ್ಕರ್‌ವಾದ ಜಿಲ್ಲಾ ಸಮಿತಿ, ಉಡುಪಿ
ಸುಂದರ ಮಾಸ್ತರ್ ,ಮಂಜುನಾಥ್ ಗಿಳಿಯಾರ್ , ಶಾಮರಾಜ ಬಿಡ್ತಿ, ಶ್ಯಾಮಸುಂದರ್ ತೆಕ್ಕಟ್ಟೆ ,ಸುರೇಶ್ ಹಕ್ಲಾಡಿ ,ಅಣ್ಣಪ್ಪ ನಕ್ರೆ ,ಭಾಸ್ಕರ ಮಾಸ್ತರ್ ,ಮಂಜುನಾಥ್ ನಾಗೂರು ,ರಾಜೇಂದ್ರ ಕಾಪು ,ರಾಘವ ಕುಕ್ಕುಜೆ ,ಶಿವರಾಜ್ ಬೈಂದೂರು, ರಾಜು ಕೆ.ಸಿ ,ಹರೀಶ್ಚಂದ್ರ ಕೆ.ಡಿ ,ದೇವು ಹೆಬ್ರಿ,ಗೀತಾ ಸುರೇಶ್ ,ವಿನಯಾ ಮಾಸ್ತಿಕಟ್ಟೆ ,ಕುಮಾರ್ ದಾಸ್ ಹಾಲಾಡಿ ಉಪಸ್ಥಿತರಿದ್ದರು.