ಉಡುಪಿ

ಎಡನೀರು ಮಠಾಧೀಶರಿಂದ ಶ್ರೀಕೃಷ್ಣ ದರ್ಶನ

ಉಡುಪಿ:ಪರ್ಯಾಯ ಮಠಾಧೀಶರಾದ ಪೂಜ್ಯ ಪುತ್ತಿಗೆ ಶ್ರೀಪಾದರ ಆಮಂತ್ರಣದಂತೆ ಎಡನೀರು ಮಠಾಧೀಶರಾದ ಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿಯವರು ಇಂದು ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿ ಶ್ರೀ ಕೃಷ್ಣ ದರ್ಶನ ಪಡೆದರು.

ಶ್ರೀಪಾದರನ್ನು ಆತ್ಮೀಯವಾಗಿ ಬರಮಾಡಿಕೊಂಡ ಪರ್ಯಾಯ ಶ್ರೀಪಾದರು ಹಿಂದೂ ಸಮಾಜದ ರಕ್ಷ್ಮಣೆಯಲ್ಲಿ ಎಡನೀರು ಮಠದ ಕೊಡುಗೆಯನ್ನು ನೆನಪಿಸುತ್ತಾ ಹಿಂದಿನಿಂದಲೂ ಅಷ್ಟ ಮಠದ ಜೊತೆಗಿರುವ ಮಧುರ ಬಾಂಧವ್ಯವನ್ನು ಸ್ಮರಿಸಿಕೊಂಡು ಹೀಗೆಯೇ ಮುಂದುವರಿಯಲಿ ಎಂದು ಕಿರಿಯ ಶ್ರೀಪಾದರ ಜೊತೆಗೂಡಿ ಆಶಿಸಿದರು.

ಶ್ರೀ ಮಠದಿಂದ ಸಾಂಪ್ರದಾಯಿಕ ಗೌರವವನ್ನು ಅರ್ಪಿಸಲಾಯಿತು.

ಪರ್ಯಾಯ ಶ್ರೀಪಾದರೊಡನೆ ಗೀತಮಂದಿರ ದರ್ಶನವನ್ನು ಪಡೆದು ಶ್ರೀಗಳ ಕೋಟಿ ಗೀತಾ ಲೇಖನ ಯಜ್ಞದ ಬೃಹತ್ ಅಭಿಯಾನದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

Related posts

ಕಟಪಾಡಿ – ಶಿರ್ವ ರಸ್ತೆ ದುರಸ್ತಿಗೆ 13 ಕೋ. ಪ್ರಸ್ತಾವನೆ ಸಲ್ಲಿಕೆ : ಶಾಸಕ ಗುರ್ಮೆ ಸುರೇಶ್ ಶೆಟ್ಟಿ

Udupilive News

ನಗರದ ಚಿನ್ನದ ಅಂಗಡಿಯಲ್ಲಿ ಕಳ್ಳತನ.ಅಪಾರ ಮೌಲ್ಯದ ಸೊತ್ತುಗಳು ಕಳವು

Udupilive News

ನ.9ರಂದು ಉಡುಪಿಯಲ್ಲಿ “ನನ್ನ ನಾಡು ನನ್ನ ಹಾಡು” ಜಿಲ್ಲಾಮಟ್ಟದ ಕನ್ನಡ ಹಾಡುಗಳ ಸ್ಪರ್ಧೆ

Udupilive News

Leave a Comment