ಕಾಪು:ವಿಶ್ವಕರ್ಮ ಸಭಾಭವನ ಬಂಟಕಲ್ಲು ಇದರ ಅಡುಗೆಕೋಣೆ ನಿರ್ಮಾಣಕ್ಕೆ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ 5 ಲಕ್ಷ ರೂಪಾಯಿ ಅನುದಾನದ ಮಂಜೂರಾಗಿದ್ದು ಕಾಮಗಾರಿ ಪೂರ್ಣಗೊಂಡಿದ್ದು ಇದರ ಉದ್ಘಾಟನೆಯನ್ನು ಇಂದು ದಿನಾಂಕ 15-06-2025 ರಂದು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ನೆರವೇರಿಸಿದರು.
ಈ ಸಂದರ್ಭದಲ್ಲಿ ಬಂಟಕಲ್ಲು ವಿಶ್ವಕರ್ಮ ಸಭಾಭವನದ ಅಧ್ಯಕ್ಷರಾದ ಮುರಳಿಧರ ಆಚಾರ್ಯ, ಪ್ರಧಾನ ಕಾರ್ಯದರ್ಶಿಗಳಾದ ಜಗದೀಶ ಆಚಾರ್ಯ, ಜೊತೆ ಕೋಶಾಧಿಕಾರಿಗಳಾದ ಬಿಳಿಯಾರು ಸುರೇಶ್ ಆಚಾರ್ಯ, ಯುವಕ ಸೇವಾದಳ ಅಧ್ಯಕ್ಷರಾದ ವಿಜಯೇಂದ್ರ ಆಚಾರ್ಯ ಅರಸಿಕಟ್ಟೆ, ಗಾಯತ್ರಿ ವೃಂದದ ಅಧ್ಯಕ್ಷರಾದ ವಿದ್ಯಾ ಹರೀಶ್ ಆಚಾರ್ಯ ಬಂಟಕಲ್ಲು, ಮಜೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಮಂಜುಳಾ ಆಚಾರ್ಯ, ಗುತ್ತಿಗೆದಾರರಾದ ರಾಮಕೃಷ್ಣ ಆಚಾರ್ಯ ಕೊಡಿಬೆಟ್ಟು ಉಪಸ್ಥಿತರಿದ್ದರು.