ಉಡುಪಿಕಾಪುಕಾರ್ಕಳಕುಂದಾಪುರದಕ್ಷಿಣ ಕನ್ನಡಪುತ್ತೂರು-ಸುಳ್ಯಬೆಳ್ತಂಗಡಿ-ಬಂಟ್ವಾಳಬೈಂದೂರುಬ್ರಹ್ಮಾವರಮಂಗಳೂರುಮೂಲ್ಕಿ-ಮೂಡುಬಿದ್ರಿರಾಜ್ಯಹೆಬ್ರಿ

ಅ.9ರಂದು ಉಡುಪಿಯ ಗೀತಾಂಜಲಿ ಸಿಲ್ಕ್ಸ್’ನಲ್ಲಿ ನವೀಕೃತ ಪುರುಷರ ವಿಭಾಗದ ಉದ್ಘಾಟನೆ ಸ್ವದೇಶಿ-ವಿದೇಶಿಯ ಎಲ್ಲ ಪ್ರಮುಖ ಬ್ರಾಂಡ್ ಗಳು ಲಭ್ಯ

ಉಡುಪಿ: ಕರಾವಳಿ ಕರ್ನಾಟಕ ಅತೀ ವಿಶಾಲವಾದ ಮಳಿಗೆ ಉಡುಪಿಯ ಗೀತಾಂಜಲಿ ಸಿಲ್ಕ್ಸ್’ನಲ್ಲಿ ಸ್ವದೇಶಿ ಹಾಗೂ ವಿದೇಶಿಯ ಎಲ್ಲ ಪ್ರಮುಖ ಬ್ರಾಂಡ್ ಗಳನ್ನೊಳಗೊಂಡ ನವೀಕೃತ ಪುರುಷರ ವಿಭಾಗವು ಇದೇ ಬರುವ ಅ.9ರಂದು ಶುಭಾರಂಭಗೊಳ್ಳಲಿದೆ.ಉಡುಪಿಯ ಗೀತಾಂಜಲಿ ಸಿಲ್ಕ್ಸ್ ಮಳಿಗೆಯಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಗೀತಾಂಜಲಿ ಸಿಲ್ಕ್ಸ್ ಪಾಲುದಾರ ಸಂತೋಷ್ ವಾಗ್ಳೆ ಮಾಹಿತಿ ನೀಡಿದರು. ಅಂದು ಬೆಳಗ್ಗೆ 9.45ಕ್ಕೆ ನವೀಕೃತ ಪುರುಷರ ವಿಭಾಗದ ಉದ್ಘಾಟನೆ ನಡೆಯಲಿದೆ. ಗ್ರಾಹಕರೇ ನಮ್ಮ ದೇವರು ಎಂಬ ಪರಿಕಲ್ಪನೆಯೊಂದಿಗೆ ಈ ವಿಭಾಗವನ್ನು ಗ್ರಾಹಕರಿಂದಲೇ ಉದ್ಘಾಟಿಸಲಾಗುವುದು ಎಂದರು.ಒಂದನೇ ಮಹಡಿಯಲ್ಲಿ ಸ್ವದೇಶಿ ಹಾಗೂ ವಿದೇಶಿಯ ಪುರುಷರ ಎಲ್ಲ ಪ್ರಮುಖ ಬ್ರಾಂಡ್ ಗಳು, ಮದುವೆ ಹಾಗೂ ಶುಭ ಸಮಾರಂಭಗಳಿಗೆ ಬೇಕಾದ ಅತ್ಯಾಧುನಿಕ-ಪಾರಂಪರಿಕ ಶೈಲಿಯ ವಸ್ತ್ರಗಳು, ಆಫೀಸ್ವೇರ್, ಕ್ಯಾಶುವಲ್ ವೇರ್, ಗ್ರಾಹಕರ ಅಭಿರುಚಿಗಳಿಗೆ ಅನುಸಾರವಾಗಿ ಸೂಟಿಂಗ್- ಶರ್ಟಿಂಗ್ ಹಾಗೂ ಒಳ ಉಡುಪಗಳನ್ನು ಒಳಗೊಂಡ ಅತೀ ವಿಶಾಲವಾದ ವಿಭಾಗವನ್ನು ಆರಂಭಿಸಲಾಗಿದೆ ಎಂದು ತಿಳಿಸಿದರು.ಈ ಪುರುಷರ ವಿಭಾಗದಲ್ಲಿ ಸುಮಾರು 22 ಬ್ರಾಂಡ್ಗಳಿದ್ದು, ಗ್ರಾಹಕರಿಗೆ ಅನುಕೂಲವಾಗುವಂತೆ ಪ್ರತಿ ಬ್ರಾಂಡ್ಗಳ ಪ್ರತ್ಯೇಕ ಪ್ರತ್ಯೇಕ ವಿಭಾಗವನ್ನು ಇಲ್ಲಿ ತೆರೆಯಲಾಗಿದೆ.ಗೀತಾಂಜಲಿ ಸಿಲ್ಕ್ಸ್ ಮಳಿಗೆಯು ಮೂರು ಮಹಡಿಗಳಲ್ಲಿ ಪುರುಷರ, ಮಹಿಳೆಯರ ಮತ್ತು ಮಕ್ಕಳ ಪ್ರತ್ಯೇಕ ವಿಶಾಲ ವಿಭಾಗಳನ್ನು ಹೊಂದಿದೆ ಎಂದು ಅವರು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಪಾಲುದಾರ ಸಹೋದರರಾದ ರಾಮಕೃಷ್ಣ ನಾಯಕ್, ಲಕ್ಷ್ಮಣ ನಾಯಕ್, ರಮೇಶ್ ನಾಯಕ್, ಹರೀಶ ನಾಯಕ್ ಉಪಸ್ಥಿತರಿದ್ದರು.

Related posts

ಯೋಗ ಎನ್ನುವುದು ಮಾಹಿತಿ‌ ಅಲ್ಲ,ಅದನ್ನು ಜಗತ್ತಿನ ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎನ್ನುವ ಆಕಾಂಕ್ಷೆ ಇದೆ.ಬಾಬಾ ರಾಮ್ ದೇವ್

Udupilive News

ಹೆತ್ತ ತಾಯಿಯನ್ನೇ ಕತ್ತು ಹಿಸುಕಿ ಕೊಂದ ಪಾಪಿ ಮಗ.ಅರೋಪಿ ಸಿಕ್ಕಿ ಬಿದ್ದಿದ್ದು ಹೇಗೆ ಗೊತ್ತಾ..?

Udupilive News

ಮುರುಡೇಶ್ವರ | ಸಮುದ್ರದಲ್ಲಿ ಆಟವಾಡುತ್ತಿದ್ದ 7 ವಿದ್ಯಾರ್ಥಿನಿಯರು ನೀರುಪಾಲು; ಮೂವರ ರಕ್ಷಣೆ

Udupilive News

Leave a Comment