ಉಡುಪಿದಕ್ಷಿಣ ಕನ್ನಡಪುತ್ತೂರು-ಸುಳ್ಯಬೆಳ್ತಂಗಡಿ-ಬಂಟ್ವಾಳಮಂಗಳೂರುಮೂಲ್ಕಿ-ಮೂಡುಬಿದ್ರಿ

ರೈಲು ಮಾರ್ಗ ಕುಸಿತ ಹಿನ್ನಲೆ ರೈಲು ಸಂಚಾರದಲ್ಲಿ ಬದಲಾವಣೆ.

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಿಂದ ಸುಬ್ರಹ್ಮಣ್ಯ ರೋಡ್ ಹಾಗೂ ಸಕಲೇಶಪುರ ರೈಲು ನಿಲ್ದಾಣದ ನಡುವಿನ ಘಾಟ್ ಪ್ರದೇಶದ ರೈಲು ಮಾರ್ಗದ ಮೂರು ಕಡೆ ಶನಿವಾರ ಭೂ ಕುಸಿತ ಉಂಟಾದ ಪರಿಣಾಮ ಕೆಲವು ರೈಲುಗಳ ಮಾರ್ಗವನ್ನು ಬದಲಾಯಿಸಲಾಗಿದೆ.

ಸಂಜೆ 4.40ರ ವೇಳೆಗೆ ಸಿರಿಬಾಗಿಲು-ಯಡಕುಮಾರಿ, ಯಡಕುಮಾರಿ-ಕಡಗರವಳ್ಳಿ ಮತ್ತು ಕಡಗರವಳ್ಳಿ-ಡೋಣಿಗಲ್ ನಡುವಿನ ಕೆಲವೆಡೆ ಮಣ್ಣು ಮತ್ತು ಬಂಡೆಗಳು ಹಳಿಗಳ ಮೇಲೆ ಬಿದ್ದಿದೆ.

ಮಂಗಳೂರು ಸೆಂಟ್ರಲ್-ವಿಜಯಪುರ ವಿಶೇಷ ಎಕ್ಸ್‌ಪ್ರೆಸ್‌ ರೈಲು (ರೈಲು ಸಂಖ್ಯೆ 07378) ಶನಿವಾರ ಪ್ರಯಾಣವನ್ನು ತೋಕೂರು, ಕಾರವಾರ, ಮಡಗಾಂವ್, ಲೋಂಡಾ ಮತ್ತು ಎಸ್‌ಎಸ್‌ಎಸ್‌ ಹುಬ್ಬಳ್ಳಿ ಮೂಲಕ ಆರಂಭಿಸಿದೆ. ಮುರ್ಡೇಶ್ವರ-ಎಸ್‌ಎಂವಿಟಿ ಬೆಂಗಳೂರು ಎಕ್ಸ್‌ಪ್ರೆಸ್‌ ರೈಲು (16586) ಹಾಗೂ ಕಣ್ಣೂರು-ಕೆಎಸ್‌ಆ‌ರ್ ಬೆಂಗಳೂರು ಎಕ್ಸ್‌ಪ್ರೆಸ್(16512), ಕಾರವಾರ-ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್ ರೈಲು(16596) ಶನಿವಾರ ಕಾಸರಗೋಡು, ಶೋರ್ನೂರ್, ಪಾಲಕ್ಕಾಡ್, ಸೇಲಂ ಮತ್ತು ಜೋಲಾರ್‌ಪೇಟೆ ಮೂಲಕ ಸಂಚರಿಸಲಿದೆ ಎಂದು ರೈಲ್ವೆ ಇಲಾಖೆ ಮೂಲಗಳು ತಿಳಿಸಿವೆ.

Related posts

ಕಿಶೋರ್ ಕುಮಾರ್ ಪುತ್ತೂರು ಗೆಲುವು ನಿಶ್ಚಿತ : ಕಿಶೋರ್ ಕುಮಾರ್ ಕುಂದಾಪುರ

Udupilive News

ಅ.15 ರಿಂದ ಮುಜರಾಯಿ ಇಲಾಖೆ ವ್ಯಾಪ್ತಿಯ ಎಲ್ಲಾ ದೇವಾಲಯಗಳು ಪ್ಲಾಸ್ಟಿಕ್ ಮುಕ್ತ..!

Udupilive News

ಇಂದು ಉಡುಪಿ ಸೇರಿದಂತೆ ರಾಜ್ಯದ ವಿವಿಧೆಡೆ ಭಾರಿ ಮಳೆ ಸಾಧ್ಯತೆ

Udupilive News

Leave a Comment