ಉಡುಪಿ

ಬನ್ನಂಜೆ ಡಿವೈಡರ್ ಧ್ವಂಸ ಪ್ರಕರಣ,ಮಾಹಿತಿ ಹಕ್ಕು ಸಾಮಾಜಿಕ ಹೋರಾಟ ಸಮಿತಿಯಿಂದ ಜಿಲ್ಲಾಧಿಕಾರಿಗಳಿಗೆ ದೂರು

ಉಡುಪಿ: ಬನ್ನಂಜೆಯಲ್ಲಿ ರಾತೋ ರಾತ್ರಿ ಅನಧಿಕೃತ ವಾಗಿ ಖಾಸಗಿ ಮಳಿಗೆಯ ಲಾಭಕ್ಕೋಸ್ಕರ ಧ್ವಂಸ ಮಾಡಿದ ಪ್ರಕರಣಕ್ಕೆ ಸಂಭಂಧಿಸಿ ಉಡುಪಿ ಮಾಹಿತಿ ಹಕ್ಕು ಮತ್ತು ಸಮಾಜಿಕ ಹೋರಾ ಸಮಿತಿ ಜಿಲ್ಲಾಧಿಕಾರಿಗಳು ಹಾಗೂ ರಾಷ್ಟ್ರೀಯ ಹೆದ್ದಾರಿ ಹಿರಿಯ ಅಧಿಕಾರಿಗಳಿಗೆ ದೂರು ಸಲ್ಲಿಸಿದೆ.

ಕಳೆದ ಶನಿವಾರ ಸರಕಾರಿ ರಜೆ ದಿನದಂದು ಅನಧಿಕೃತವಾಗಿ ಸಾರ್ವಜನಿಕ ಸೊತ್ತನ್ನು ಹಾನಿ ಪಡಿಸಿದ ವಿಷಯಕ್ಕೆ ಸಂಭಂಧಿಸಿ ಸಾಮಾಜಿಕ ಜಾಲ ತಾಣಗಳಲ್ಲಿ ಭಾರೀ…ಆಕ್ರೋಶ ವ್ಯಕ್ತ ವಾಗಿತ್ತು.

ಹೆದ್ದಾರಿ ಸುರಕ್ಷಾ ಸಮಿತಿ ಗಮನಕ್ಕೆ ತಾರದೆ ರಾತೊರಾತ್ರಿ ನಗರಸಭೆ ಗಮನಕ್ಕೂ ತಾರದೆ ಖಾಸಗಿ ಮಳಿಗೆಗಾಗಿ ಡಿವೈಡರ್ ಒಡೆದ ವಿಚಾರ ವಾಗಿ ನಗರಸಭೆ ಮೇಲೂ ಭ್ರಷ್ಟಾಚಾರದ ಅರೋಪ ಹೋರಿಸಲಾಗಿತ್ತು.
ಈ ಹಿನ್ನಲೆಯಲ್ಲಿ ನಗರಸಭೆಯಲ್ಲಿ ಗೋಣಿ ಚೀಲದ ವಿಚಾರವಾಗಿ ಭಾರೀ ಗದ್ದಲ ಎದ್ದಿತ್ತು..ಅದರೆ ಡಿವೈಡರ್ ಧ್ವಂಸ ವಿಚಾರದಲ್ಲಿ ನಗರಸಭೆ ಸಮಾನ್ಯ ಸಭೆ ಯಲ್ಲಿ ಗೊಂದಲ ಸೃಷ್ಟಿ ಮಾಡಿದ್ದು ಹೊರತು ಪಡಿಸಿದರೆ,ನಮಗೂ ಇದಕ್ಕೂ ಸಂಭಂಧ ಇಲ್ಲ ಅಂದಿದ್ದು ಬಿಟ್ಟರೆ ,ಯಾವುದೇ ಕ್ರಮಕ್ಕೆ ಸದಸ್ಯರು ಗಳು ಆಗ್ರಹಿಸದಿರುವುದು ಸಾರ್ವಜನಿಕರ ಸಂಶಯಕ್ಕೆ ಕಾರಣವಾಗಿತ್ತು.

ಇದನ್ನೆಲ್ಲ ಮನಗಂಡ ಉಡುಪಿ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಹೋರಾಗಾರರ ಸಮಿತಿ ,ಅಕ್ರಮ ಎಸಗಿರುವ ಸಂಸ್ಥೆ ಮತ್ತು ಹೆದ್ದಾರಿ ಇಲಾಖೆಯ ಇಂಜಿನಿಯರ್ ವಿರುದ್ದ ಕ್ರಮ ತೆಗೆದುಕೊಳ್ಳುವಂತೆ ಜಿಲ್ಲಾಧಿಕಾರಿಗಳು ಹಾಗೂ ರಾಷ್ಟ್ರೀಯ ಹೆದ್ದಾರಿ ಎಕ್ಸಿಕ್ಯುಟಿವ್ ಇಂಜಿನಿಯರ್ ಶಿವಮೊಗ್ಗ ಹಾಗೂ ಕೇಂದ್ರ ಹೆದ್ದಾರಿ ಇಲಾಖೆಗೆ ದೂರು ನೀಡಿದೆ.

Related posts

ಮಣಿಪಾಲದ ಎರಡು ಬಾರ್ ಗಳ‌ ಲೈಸೆನ್ಸ್ ರದ್ದು ಪಡಿಸುವಂತೆ ಡಿಸಿ ಸೂಚನೆ

Udupilive News

ಮಣಿಪಾಲ ಆರೋಗ್ಯ ಕಾರ್ಡ್‌ನ ರಜತ ಮಹೋತ್ಸವ ವರ್ಷ ,ಮಣಿಪಾಲ ಆರೋಗ್ಯ ಕಾರ್ಡ್ 2025 ರ  ನೋಂದಣಿ ಪ್ರಾರಂಭ

Udupilive News

ಅ. 26-27 ರಂದು ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕೃಷಿ ಮೇಳ

Udupilive News

Leave a Comment