ಉಡುಪಿಕಾಪುಕಾರ್ಕಳಕುಂದಾಪುರಬೈಂದೂರುಬ್ರಹ್ಮಾವರಹೆಬ್ರಿ

ಬಿಜೆಪಿ ಪ್ರತಿಭಟನೆ ವೇಳೆ ಸಿಎಂ ಪ್ರತಿಕೃತಿಗೆ ಚಪ್ಪಲಿಯೇಟು- ಪ್ರಕರಣ ದಾಖಲು

ಉಡುಪಿ: ಬಿಜೆಪಿ ಪ್ರತಿಭಟನೆ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಪ್ರತಿಕೃತಿಗೆ ಚಪ್ಪಲಿಯಿಂದ ಹೊಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸೆಪ್ಟೆಂಬರ್ 6ರಂದು ಬಿಜೆಪಿ ಕಾರ್ಯಕರ್ತರು ರಾಜ್ಯ ಸರಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಸಿಂಡಿಕೇಟ್‌ ಸರ್ಕಲ್‌ ಮಧ್ಯಭಾಗದಲ್ಲಿ ಮುಖ್ಯಮಂತ್ರಿಗಳ ಪ್ರತಿಕೃತಿಯನ್ನು ತಂದು ನಿಲ್ಲಿಸಿದ್ದು, ಆರೋಪಿಗಳಾದ ಗಿರೀಶ್‌ ಅಂಚನ್‌ ಹಾಗೂ ಪೃಥ್ವಿರಾಜ್‌ ಶೆಟ್ಟಿ ಬಿಲ್ಲಾಡಿ ಅವರು ಮುಖ್ಯಮಂತ್ರಿಯವರ ಪ್ರತಿಕೃತಿಗೆ ಚಪ್ಪಲಿಯಿಂದ ಹೊಡೆದಿದ್ದಾರೆ.
ಅನಂತರ ಆರೋಪಿ ಅಭಿರಾಜ್‌ ಶೆಟ್ಟಿಯು ಕೈಯಲ್ಲಿ ಪೆಟ್ರೋಲ್‌ ಬಾಟಲಿ ಹಿಡಿದುಕೊಂಡು ಪ್ರತಿಕೃತಿಗೆ ಬೆಂಕಿ ಹಚ್ಚಿದ್ದರು ಎಂದು ಕಾಂಗ್ರೆಸ್‌ ಮುಖಂಡ ಸೌರಭ್‌ ಬಲ್ಲಾಳ್‌ ದೂರು ನೀಡಿದ್ದರು.ಅದರಂತೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Related posts

ಬನ್ನಂಜೆಯಲ್ಲಿ ಹೆದ್ದಾರಿ ಡಿವೈಡರ್‌ ದ್ವಂಸ.ಲಂಚ ಪಡೆದು ಅಧಿಕಾರಿಗಳ ಕೃತ್ಯ ಸಾರ್ವಜನಿಕರ ಆಕ್ರೋಶ

Udupilive News

ಚಿಲ್ಲರೆ ನೀಡಿದ್ದಕ್ಕೆ ದಲಿತ ಯುವತಿಯ ಮೇಲೆ ಹಲ್ಲೆ: ಜಾತಿ ನಿಂದನೆ,ಎಸ್ ಪಿ ಭೇಟಿ

Udupilive News

ಸಮಗ್ರ ತನಿಖೆ ಆಗುವುದು ಅಗತ್ಯ – ತಿಂಗಳೆ

Udupilive News

Leave a Comment