ಉಡುಪಿ

ಬನ್ನಂಜೆಯಲ್ಲಿ ಹೆದ್ದಾರಿ ಡಿವೈಡರ್‌ ದ್ವಂಸ.ಲಂಚ ಪಡೆದು ಅಧಿಕಾರಿಗಳ ಕೃತ್ಯ ಸಾರ್ವಜನಿಕರ ಆಕ್ರೋಶ

.

ಉಡುಪಿ:ನಗರದ ಬನ್ನಂಜೆ ರಾಷ್ಟ್ರೀಯ ಹೆದ್ದಾರಿಯ ಡಿವೈಡರನ್ನು ಜೆಸಿಬಿಗಳ ಮೂಲಕ ಧ್ವಂಸಗೊಳಿಸಲಾಗಿದೆ.ಶನಿವಾರ ಮತ್ತು ಭಾನುವಾರ ರಜೆ ಇದ್ದ ಸಮಯವನ್ನು ಉಪಯೋಗಿಸಿಕೊಂಡು ಡಿವೈಡರ್ ಅಗೆದು ಹಾಕಲಾಗಿದೆ.ಬನ್ನಂಜೆಯಲ್ಲಿ ರುವ ಬಟ್ಟೆ ಅಂಗಡಿಯವನ ಅಂಗಡಿಗೆ ತೆರಳಲು ಅನುಕೂಲವಾಗುವಂತೆ ಡಿವೈಡರ್ ಒಡೆಯಲಾಗಿದೆ ಎಂದು ಅರೋಪಗಳು ಕೇಳಿ ಬಂದಿದ್ದು,ಸಾರ್ವಜನಿಕರಿಂದ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

ಈ ಕೃತ್ಯಕ್ಕಾಗಿ ನಗರಸಭೆ ಆಧ್ಯಕ್ಷರು ಇಂಜಿನಿಯರ್ ಹಾಗೂ ರಾಷ್ಟ್ರೀಯ ಹೆದ್ದಾರಿ ಇಂಜಿನಿಯರ್ ಲಂಚ ಪಡೆದುಕೊಂಡಿದ್ದಾರೆ ಎನ್ನುವ ಅರೋಪಗಳು ಕೇಳಿ ಬಂದಿದೆ.

ಈ ವಿಷಯಕ್ಕಾಗಿ ಸಾರ್ವಜನಿಕರು ದೂರು ನೀಡಲು ನಗರಸಭೆ ಇಂಜಿನಿಯರ್ ದುರ್ಗ ಪ್ರಸಾದ್ ,ಕಾರ್ತಿಕ್ ಹಾಗು ಪೌರಯುಕ್ತರಿಗೆ ಕರೆ ಮಾಡಿದರೆ,ಕರೆ ಸ್ವೀಕರಿಸದೇ ಬೇಜಾವಬ್ದಾರಿ ವರ್ತನೆ ತೊರಿಸಿದ್ದಾರೆ ಎನ್ನಲಾಗಿದೆ.

ನಗರ ಸಭೆ ಅಧ್ಯಕ್ಷ ಗೊಂದಲ ಹೇಳಿಕೆ ಗಳನ್ನು ನೀಡುತ್ತಿರುವುದು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ.ರಾಷ್ಟೀಯ ಹೆದ್ದಾರಿ ಇಂಜಿನಿಯರ್ ಯಾವುದಕ್ಕೂ ಪ್ರತಿಕ್ರಿಯೆ ನೀಡದೆ ತನ್ನ ಹಳೇ ಚಾಳಿ ಮುಂದುವರೆಸಿದ್ದು, ಯಾವುದೇ ಅಧಿಕಾರಿಗಳು ಸಾರ್ವಜನಿಕರ ದೂರಿಗೆ ಪ್ರತಿಕ್ರಿಯೆ ನೀಡಿಲ್ಲ.

ಈ ಡಿವೈಡರ್ ಅಗಲೀಕರಣಕ್ಕೆ ಇಪ್ಪತೈದು ಲಕ್ಷಕ್ಕೂ ಮಿಕ್ಕಿ ಕಪ್ಪಾ ಹಣ ಸಂದಾಯವಾಗಿದೆ ಎನ್ನುವ ಆರೋಪಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಬನ್ನಂಜೆಯ ಬಟ್ಟೆ ಅಂಗಡಿಯಿಂದ ಸಾರ್ವಜನಿಕರು ಭಾರೀ ತೊಂದರೆ ಅನುಭವಿಸುತ್ತಿದ್ದಾರೆ.ಬಟ್ಟೆ ಅಂಗಡಿ ಮಾಲೀಕ ನಗರಸಭೆ ಹಾಗೂ ಹೆದ್ದಾರಿ ನಿಯಮಗಳ ಪ್ರಕಾರ ಭೂಮಿ ಬಿಟ್ಟು ಕೊಡಬೇಕಾಗಿತ್ತು.ಅದರೆ ಅದನ್ನ ಹೆದ್ದಾರಿ ಇಲಾಖೆ ಅಗಲಿ…ನಗರಸಭೆ ಅಗಲೀ ಭೂಮಿಯನ್ನು ಪಡೆಯದೇ…ಬಿಟ್ಟಿರುವ ಪರಿಣಾಮ ಟ್ರಾಫಿಕ್ ಸಮಸ್ಯೆ ಎದುರಾಗಿದೆ.

ಈ ಹಿಂದೆ ಇದ್ದ ಎಸ್ ಪಿ ಅರುಣ್ ಕುಮರ್ ಡಿವೈಡರ್ ಬಳಿ ಬ್ಯಾರೀಕೆಟ್ ಗಳನ್ನ ಅಳವಡಿಸಿ ವಾಹನ ಸಂಚಾರಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಿದ್ದರು.ಅವರ ವರ್ಗಾವಣೆಯಾಗುತ್ತಿದ್ದಂತೆ,ಬ್ಯಾರೀಕೆಟ್ ಗಳನ್ನ ಕಿತ್ತು ಬೀಸಾಡಿ ರಾಂಗ್ ಸೈಡಿನಿಂದ ವಾಹನಗಳನ್ನು ಬರುವಂತೆ ಮಾಡಲಾಗಿದೆ‌
ಇದರಿಂದ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳಿಗೆ ಭಾರೀ ಸಮಸ್ಯೆ ಎದುರಾಗಿದೆ.

ಈ ಅಕ್ರಮದಲ್ಲಿ ಮಾಜಿ ಕಾಂಗ್ರೆಸ್ ಸಚಿವರೊಬ್ರ ಕೈವಾಡ ಇರುವ ಬಗ್ಹೆ ಅರೋಪಗಳು ಕೇಳಿ ಬಂದಿದೆ. ಸಚಿವರ ಅಪ್ತನೊಬ್ಬ ಕುಕ್ಕೆ ಹಳ್ಳಿ ಮೂಲದ ಬ್ರೋಕರ್ ಈ ಕೆಲಸದ ಹಿಂದೆ ಇರುವುದಾಗಿ ಸುದ್ದಿ ಹರಡುತ್ತಿದೆ.ನಗರಸಭೆ ಅಧಿಕಾರಿಗಳಿಗೆ ಲಂಚದ ವ್ಯವಸ್ಥೆ ಈತನೇ ಮಾಡಿದ್ದಾನೆ ಎನ್ನ ಲಾಗಿದೆ.ಅಷ್ಟೇ ಅಲ್ಲ ಅಂಗಡಿ ಉದ್ಘಾಟನೆಗೆ ಬಂದಿದ್ದ ಮಂಗಳೂರಿನ ಉನ್ನತ ಹುದ್ದೆಯಲ್ಲಿರುವ ಮುಖಂಡರು ಕೂಡ ಕೈ ಜೋಡಿಸಿದ್ದಾರೆ ಎನ್ನುವ ವದಂತಿ ಇದೆ.

ಮಾನ್ಯ ಜಿಲ್ಲಾಧಿಕಾರಿಗಳು ತಕ್ಷಣ ಈ ಬಗ್ಗೆ ಕ್ರಮ ಕೈಗೊಳ್ಳಬೇಕು.ಹೆದ್ದಾರಿ ಡಿವೈಡರ್ ನ್ನು ಈ ಹಿಂದೆ ಇದ್ದ ಹಾಗೇ…ನಿರ್ಮಿಸಬೇಕು.ಬಟ್ಟೆ ಮಾಲೀಕ ಹೆದ್ದಾರಿಗೆ ಬಿಟ್ಟು ಕೊಟ್ಟ ಭೂಮಿ ಪಡೆದು ರಸ್ತೆ ಅಗಲೀಕರಣಗೊಳಿಸಿ ಸೂಕ್ತ ಸಂಚಾರ ಕ್ಕೆ ಅನುವು ಮಾಡಿಕೊಡುವಂತೆ ಸಾರ್ವಜನಿಕರು ಅಗ್ರಹಿಸಿದ್ದಾರೆ.

Related posts

ಕೆಲಸವಿಲ್ಲದೇ ಕಂಗಲಾಗಬೇಡಿ ,ಕೈ ತುಂಬಾ ಸಂಬಳ ಕೊಡುವ ಕೆಲಸಗಳು ಇಲ್ಲಿದೆ.

Udupilive News

ಉಡುಪಿ: ಕಾರಿನ ಬ್ರೇಕ್ ಫೇಲ್ ಆಗಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ – ಸವಾರ ಸ್ಥಳದಲ್ಲೇ ಮೃತ್ಯು

Udupilive News

ಉಡುಪಿ: ಕಳವಾಗಿದ್ದ 30ಕ್ಕೂ ಅಧಿಕ ಮೊಬೈಲ್ ಫೋನ್‌ ವಾರಸುದಾರರಿಗೆ ಹಸ್ತಾಂತರ

Udupilive News

Leave a Comment