ಉಡುಪಿರಾಜ್ಯ

ಗೃಹಲಕ್ಷ್ನಿ ಹಣದಿಂದ ಕವಾಟು ಖರೀದಿಸಿ ಫೋಟೊ ಹಂಚಿಕೊಂಡ ಮಹಿಳೆ

ಉಡುಪಿ: ಗೃಹಲಕ್ಷ್ಮಿ ಹಣದಿಂದ ಕೂಲಿ ಕಾರ್ಮಿಕ ಮಹಿಳೆಯೊಬ್ಬರು ಕವಾಟು ಖರೀದಿಸಿದಿಸಿದ್ದಾರೆ. ಉಡುಪಿಯ ಪರ್ಕಳ ದಲ್ಲಿ ಮಹಿಳೆ ತಾನು ಹೊಸದಾಗಿ ಖರೀದಿಸಿದ ಕವಾಟಿನ ಜೊತೆ ಫೋಟೋ ತೆಗೆಸಿಕೊಂಡಿದ್ದಾಳೆ. ಪರ್ಕಳದ ಕ್ಯಾಂಟೀನ್ ವೊಂದರಲ್ಲಿ ಸ್ವಚ್ಛತಾ ಸಿಬ್ಬಂದಿಯಾಗಿ ಈಕೆ ಕೆಲಸ ಮಾಡುತ್ತಾರೆ. ಹಾವೇರಿ ಮೂಲದ ಕೆಲಸದಾಳು ಕುಸುಮ ಮಾಡಿವಾಲ್ತಿ ಕವಾಟು ಖರಿಧಿಸಿದ ಗ್ರಹಲಕ್ಷ್ಮಿ. ಈಕೆಯ ರೇಶನ್ ಕಾರ್ಡು ನಲ್ಲಿ ಅಲ್ಪ ಸ್ವಲ್ಪ ದೋಷವಿತ್ತು. ರೇಶನ್ ಕಾರ್ಡು ತಿದ್ದುಪಡೆ ಮಾಡಿ, ನಂತರ ಗೃಹಲಕ್ಷ್ಮಿಗೆ ಅರ್ಜಿ ಹಾಕಲು ಹೋಟೆಲ್ ಮಾಲಕರು ನೆರವಾಗಿದ್ದರು .

ಕೊನೆಗೆ ಬಂದ ಹಣವನ್ನು ಕೂಡಿಟ್ಟು , ಕಾವಾಟು ಖರಿಧಿ ಮಾಡಿದ ಈಕೆ ಸಂತಸ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸ್ಥಳೀಯರು ಈ ಫೋಟೋ ಹಂಚಿಕೊಂಡಿದ್ದಾರೆ .ಇನ್ನು ನಾಲ್ಕು ಕಂತಿನ ಹಣ ಬ್ಯಾಂಕ್ ನಲ್ಲಿ ಠೇವಣಿ ಇರಿಸಿದ್ದಾರೆ. ನಮ್ಮಂತಹ ಕೂಲಿ ಕಾರ್ಮಿಕರಿಗೆ ಗೃಹ ಲಕ್ಷ್ಮಿ ಹಣ ಆಧಾರವಾಗಿದೆ. ರೇಷನ್ ಕಾರ್ಡ್ ತಿದ್ದು ಪಡಿಗೆ ಮತ್ತು ಅರ್ಜಿ ಸಲ್ಲಿಸಲು ಸಹಕರಿಸಿದವರಿಗೆ ಕುಸುಮಾ ಥ್ಯಾಂಕ್ಸ್ ಹೇಳಿದ್ದಾರೆ.

Related posts

ಮಂಗಳೂರು ಪೊಲೀಸ್ ಇತಿಹಾಸದಲ್ಲೇ ಭರ್ಜರಿ ಬೇಟೆ – 6 ಕೋಟಿ ಮೌಲ್ಯದ ಮಾದಕ ವಸ್ತು ಸೀಜ್‌

Udupilive News

ಮುಳ್ಳುಗುಡ್ಡೆ ಕೊರಗಜ್ಜನ ನೇಮೋತ್ಸವದಲ್ಲಿ ಭಾಗಿಯಾದ ನಟೊ ರಚಿತಾರಾಮ್

Udupilive News

ನ.9ರಂದು ಉಡುಪಿಯಲ್ಲಿ “ನನ್ನ ನಾಡು ನನ್ನ ಹಾಡು” ಜಿಲ್ಲಾಮಟ್ಟದ ಕನ್ನಡ ಹಾಡುಗಳ ಸ್ಪರ್ಧೆ

Udupilive News

Leave a Comment