ಉಡುಪಿಕಾರ್ಕಳ

ಮುದ್ರಾಡಿ ಧರ್ಮಯೋಗಿ ಮೋಹನ್‌ ಸ್ವಾಮೀಜಿಯವರ ೪ನೇ ಆರಾಧನಾ ಮಹೋತ್ಸವ. ಶ್ರೀ ವಿನಯ್‌ ಗುರೂಜಿ ಅವರಿಗೆ ಧರ್ಮಯೋಗಿ ಸಮ್ಮಾನ

ಮುದ್ರಾಡಿ : ಶ್ರೀ ಕ್ಷೇತ್ರ ಮುದ್ರಾಡಿ ಅಭಯಹಸ್ತೆ ಶ್ರೀ ಆದಿಶಕ್ತಿ ಮತ್ತು ನಂದಿಕೇಶ್ವರ ದೇವಸ್ಥಾನದಲ್ಲಿ ಜುಲೈ ೮ರಂದು ಧರ್ಮಯೋಗಿ ಮೋಹನ ಸ್ವಾಮೀಜಿಯವರ ೪ನೇ ವರ್ಷದ ಆರಾಧನಾ ಮಹೋತ್ಸವ ನಡೆಯಲಿದೆ. ಚಿಕ್ಕಮಗಳೂರಿನ ಕೆ.ಎಸ್.ನಿತ್ಯಾನಂದ ಸ್ವಾಮೀಜಿ ಮಾರ್ಗದರ್ಶನದಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನಗಳು ನಡೆಯಲಿದೆ. ಭಜನಾ ಕಾರ್ಯಕ್ರಮ, ಪಟ್ಲ ಸತೀಶ ಶೆಟ್ಟಿ ಬಳಗದವರಿಂದ ಯಕ್ಷಗಾನ ತಾಳಮದ್ದಳೆ ಅಂಗದ ಸಂಧಾನ ನಡೆಯಲಿದೆ. ಕಲಾವಿದರಾದ ಉಜಿರೆ ಅಶೋಕ ಭಟ್‌ ಮತ್ತು ಗಣೇಶ ಶೆಟ್ಟಿ ಕನ್ನಡಿಕಟ್ಟೆ ಭಾಗವಹಿಸುವರು.
……
ಶ್ರೀ ವಿನಯ್‌ ಗುರೂಜಿ ಅವರಿಗೆ ಧರ್ಮಯೋಗಿ ಸಮ್ಮಾನ ಪ್ರದಾನ :
ಹೆಬ್ರಿ : ಮುದ್ರಾಡಿ ಧರ್ಮಯೋಗಿ ಮೋಹನ್‌ ಸ್ವಾಮೀಜಿಯವರ ೪ನೇ ಆರಾಧನಾ ಮಹೋತ್ಸವದಲ್ಲಿ ಮೋಹನ್‌ ಸ್ವಾಮೀಜಿಯವರ ಸಂಸ್ಮರಣೆಗಾಗಿ ನೀಡುವ ಧರ್ಮಯೋಗಿ ಸಮ್ಮಾನ ಗೌರವವನ್ನು ಶ್ರೀ ವಿನಯ್‌ ಗುರೂಜಿ ಅವರಿಗೆ ಪ್ರದಾನ ಮಾಡಲಾಗುತ್ತದೆ. ಬಜಗೋಳಿ ರವೀಂದ್ರ ಶೆಟ್ಟಿ ಅಧ್ಯಕ್ಷತೆ ವಹಿಸುವರು. ಶ್ರೀ ಕ್ಷೇತ್ರ ಮುದ್ರಾಡಿಯ ಕಮಲ ಎಂಪಿ, ಮುಖಂಡ ಮುದ್ರಾಡಿ ಮಂಜುನಾಥ ಪೂಜಾರಿ, ರಂಗ ನಿರ್ದೇಶಕ ಜಗದೀಶ ಜಾಲ ಉಪಸ್ಥಿತರಿರುವರು ಎಂದು ಶ್ರೀ ಕ್ಷೇತ್ರ ಮುದ್ರಾಡಿಯ ಧರ್ಮಾದಿಕಾರಿ ವಿಜಯಕೀರ್ತಿ ಸುಕುಮಾರ ಮೋಹನ್‌ ತಿಳಿಸಿದ್ದಾರೆ.

Related posts

ಸ್ವಾತಂತ್ರ್ಯೋತ್ಸವ – ಸ್ವಚ್ಛ ಹಾಗೂ ವ್ಯಸನ ಮುಕ್ತ ಗ್ರಾಮ ನಿರ್ಮಾಣಕ್ಕೆ ಗಂಟಿಹೊಳೆ ಕರೆ

Udupilive News

ಇಂದ್ರಾಳಿ ಬ್ರಿಡ್ಜ್ ಅವ್ಯವಸ್ಥೆ ವಿರುದ್ದ ಪ್ರತಿಭಟನೆಗೆ ಸಿದ್ದತೆ.ಬ್ರಿಡ್ಜ್ ಬಳಿ ದೌಡಾಯಿಸಿದ ಸಂಸದ,ಶಾಸಕರು.ಜನವರಿ ಹದಿನೈದರೊಳಗೆ ಪೂರ್ಣಗೊಳಿಸುವುದಾಗಿ ಮತ್ತೊಂದು ಭರವಸೆ ನೀಡಿದ ಕೋಟ

Udupilive News

ಶಾಸಕರೇ ಪುಂಡಾಟಿಕೆ ನಿಲ್ಲಿಸಿ ಜನರ ಸಮಸ್ಯೆಗಳ ಬಗ್ಗೆ ಗಮನ ಹರಿಸಿ -ರಮೇಶ್ ಕಾಂಚನ್

Udupilive News

Leave a Comment