ಉಡುಪಿ:ಪೆರ್ಡೂರು ಸಮೀಪದ ಅಡಪಾಡಿ ಮಡಿ ಸಾಲು ನದಿಯಲ್ಲಿ ಮರಳುಗಾರಿಕೆ ನಿಷೇಧದ ಮದ್ಯೆಯೂ ಅಕ್ರಮ ಮರಳುಗಾರಿಕೆ ಎಗ್ಗಿಲ್ಲದೇ ನಡೆಯುತ್ತಿದೆ.
ಈ ಬಗ್ಗೆ ಸ್ಥಳೀಯರು ಗ್ರಾಮ ಪಂಚಾಯತ್ ,ಗಣಿ ಇಲಾಖೆಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನುವ ಆರೋಪಗಳು ಕೇಳಿ ಬಂದಿದೆ.
ಗ್ರಾಮ ಪಂಚಯತ್ ಹಾಗೂ ಗಣಿ ಇಲಾಖೆ ಈ ಹಿಂದೆ ಮರಳು ತೆಗೆಯಲು ಅನುಮತಿ ನೀಡಿತ್ತು.ಇದೀಗ ಮರಳುಗಾರಿಕೆ ನಿಷೇಧ ಇದೆ ಅದರೆ ಅಕ್ರಮವಾಗಿ ಮಳೆಗಾಲದಲ್ಲೂ ಎಗ್ಗಿಲ್ಲದೇ ಮರಳು ಸಾಗಾಟ ಮಾಡುತ್ತಿದ್ದು ,ಇಲಾಖೆ ಮೌನವಾಗಿದೆ
ಸ್ಥಳಿಯ ಪೊಲೀಸ್ ಅಧಿಕಾರಿಗಳು ಆಕ್ರಮ ಮರಳುಗಾರಿಕೆ ನಿಲ್ಲಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.