ಮಣಿಪಾಲ: ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಅವರು ಶನಿವಾರ ಪೆರಂಪಳ್ಳಿ ಫಾತಿಮಾ ಮಾತೆ ಚರ್ಚಿಗೆ ಸೌಹಾರ್ದ ಭೇಟಿ ನೀಡಿ ಚರ್ಚಿನ ಧರ್ಮಗುರುಗಳೊಂದಿಗೆ ಮಾಹಿತಿ ಪಡೆದರು.
ಚರ್ಚಿನ ಇತಿಹಾಸ, ಕ್ರೈಸ್ತ ಸಮುದಾಯದ ವಿವರ ಹಾಗೂ ಚರ್ಚ್ ಕಟ್ಟಡದ ಐತಿಹಾಸಿಕ ವಿನ್ಯಾಸದ ಕುರಿತು ಮಾಹಿತಿ ಪಡೆದ ವರಿಷ್ಠಾಧಿಕಾರಿಗಳು ಕ್ರೈಸ್ತ ಸಮುದಾಯಕ್ಕೆ ಅಗತ್ಯವಿರುವ ಎಲ್ಲಾ ಕಾನೂನಾತ್ಮಕ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಈ ವೇಳೆ ಚರ್ಚಿನ ಪ್ರಧಾನ ಧರ್ಮಗುರು ವಂ|ವಿಶಾಲ್ ಲೋಬೊ, ಮಣಿಪಾಲ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಮಹೇಶ್ ಪ್ರಸಾದ್ ಉಪಸ್ಥಿತರಿದ್ದರು.