ಉಡುಪಿ: ಕೆನಾರಾ ಬ್ಯಾಂಕ್ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ ಇದೇ 25ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 2ಗಂಟೆಯವರೆಗೆ ಉಡುಪಿ ಕೋರ್ಟ್ ರಸ್ತೆಯ ಕೆನರಾ ಬ್ಯಾಂಕ್ ನ ಹಿಂಭಾಗದ ರಿಟೇಲ್ ಅಸೆಟ್ ಹಬ್ ನಲ್ಲಿ “ಕೆನರಾ ರಿಟೈಲ್ ಮೇಳ-2024” ಅನ್ನು ಹಮ್ಮಿಕೊಳ್ಳಲಾಗಿದೆ ಎಂದು ಬ್ಯಾಂಕ್ ನ ಉಡುಪಿ ಪ್ರಾದೇಶಿಕ ವಲಯದ ಮ್ಯಾನೇಜರ್ ಕೌಶಿಕ್ ರೆಡ್ಡಿ ತಿಳಿಸಿದರು.ಉಡುಪಿಯಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಮೇಳದಲ್ಲಿ ಹೂಂಡೈ, ಹೊಂಡಾ, ಟೊಯೋಟಾ, ನೆಕ್ಸಾ ಮೊದಲಾದ ಪ್ರತಿಷ್ಠಿತ ಕಂಪೆನಿಗಳು ಭಾಗವಹಿಸಲಿವೆ. ಅಲ್ಲದೆ, ಕಲ್ಕೂರಾ, ಸಾಯಿರಾಧ, ಅರ್ಚನಾ ಪ್ರೊಜೆಕ್ಟ್ ನಂತಹ ಪ್ರತಿಷ್ಠಿತ ಬಿಲ್ಡರ್ಸ್ ಕಂಪೆನಿಗಳು ಪಾಲ್ಗೊಳ್ಳಲಿವೆ. ಮೇಳಕ್ಕೆ ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ. ಯಾವುದೇ ಪೂರ್ವಪಾವತಿ ಪೆನಾಲ್ಟಿ ಇಲ್ಲ. ಸ್ಥಳದಲ್ಲೇ ಸಾಲದ ಮಂಜೂರಾತಿಗಾಗಿ ಪ್ಯಾನ್, ಆಧಾರ್ ಮತ್ತು ಮೂರು ವರ್ಷದ ಐಟಿ ರಿಟರ್ನ್, ಫಾರ್ಮ್ 16 ಹಾಗೂ ಆರು ತಿಂಗಳ ವೇತನ ಚೀಟಿ ತರಬೇಕು ಎಂದರು.ಅಕ್ಟೋಬರ್ ನಿಂದ ಡಿಸೆಂಬರ್ ವರೆಗೆ ಕೆನರಾ ಬ್ಯಾಂಕ್ ಬ್ರಾಂಚ್ ಗಳಲ್ಲಿ ಯಾವುದೇ ವಾಹನ ಹಾಗೂ ಗೃಹ ಸಾಲಕ್ಕೆ ಪ್ರೊಸೆಸಿಂಗ್ ಹಾಗೂ ದಾಖಲಾತಿ ಶುಲ್ಕ ಇರುವುದಿಲ್ಲ. ಇದರ ಸದುಪಯೋಗವನ್ನು ಗ್ರಾಹಕರು ಪಡೆದುಕೊಳ್ಳಬೇಕು ಎಂದು ಅವರು ವಿನಂತಿಸಿದರು.
ಸುದ್ದಿಗೋಷ್ಠಿಯಲ್ಲಿ ಸಿನಿಯರ್ ಮ್ಯಾನೇಜರ್ ಸೂರಜ್, ಮಾರ್ಕೆಟಿಂಗ್ ಹೆಡ್ ಅಂಕುಶ್ ಇದ್ದರು.