ಉಡುಪಿ ಜಿಲ್ಲೆಯಲ್ಲಿ ರಾತ್ರಿ ಇಡೀ ಸುರಿದ ಭಾರಿ ಗಾಳಿ ಮಳೆಗೆ ಕುಂದಾಪುರ ತಾಲೂಕಿನ ಕವ್ರಾಡಿ ಗ್ರಾಮದ ಮನೆ ಯೊಂದರ ಮೇಲೆ ಮರವೊಂದು ಬಿದ್ದು ಭಾರೀ ಹಾನಿ ಸಂಭವಿಸಿದೆ.
ರಾತ್ರಿ ಎಡೆಬಿಡದೆ ಸುರಿದ ಬಾರಿ ಮಳೆ ಗಾಳಿಗೆ ವಾಲ್ತೂರು ರೋಹಿಣಿ ಶೆಟ್ಟಿ ಮನೆ ಮೇಲೆ ಮರ ಬಿದ್ದಿದ್ದು ಮನೆ ಹಂಚು ಗೋಡೆಗಳಿಗೆ ಹಾನಿ ಉಂಟಾಗಿದೆ.ಸ್ಥಳಕ್ಕೆ ಗ್ರಾಮ ಪಂಚಾಯಿತಿ ಸದಸ್ಯ ಪ್ರಕಾಶ್ ಶೆಟ್ಟಿ ಭೇಟಿ ನೀಡಿ ಪರಿಶೀಲನೆ ನಡೆಸಿ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.