ಉಡುಪಿಯಲ್ಲಿ ಬಾಂಗ್ಲಾ ವಲಸಿಗರ ವಿಚಾರವಾಗಿ ಶಾಸಕ ಯಶ್ ಪಾಲ್ ಸುವರ್ಣ ಕಾಂಗ್ರೆಸ್ ವಿರುದ್ದ ಹಾಯ್ದಿದ್ದಾರೆ.ಕಾಂಗ್ರೆಸ್ ನವರು ಮತ ಬ್ಯಾಂಕ್ ಓಲೈಕೆಗೆ ಬಾಂಗ್ಲಾದ ನುಸುಳು ಕೊರರಿಗೆ ಆಧಾರ್ ಕಾರ್ಡ್ ಸಿಗುವಂತೆ ಮಾಡಿದ್ದಾರೆ,ಇದು ವೋಟ್ ಬ್ಯಾಂಕಿಗಾಗಿ ನಡೆಯುತ್ತಿರುವ ರಾಜಕೀಯ, ದೇಶದ್ರೋಹಿ ಕೆಲಸ ಎಂದರು ತಪ್ಪಾಗುವುದಿಲ್ಲ ಎಂದಿದ್ದಾರೆ.ಅಕ್ರಮ ವಲಸಿಗರಿಗೆ ಅವಕಾಶ ಕೊಡುವ ಮೂಲಕ ಕರಾವಳಿಯ ನೆಮ್ಮದಿ ಹಾಳಾಗಿದೆ,
ಈ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಹೋಂ ಸೆಕ್ರೆಟರಿಗೆ ಪತ್ರ ಬರೆದಿದ್ದೇನೆ,ಈ ಬಗ್ಗೆ ಸೂಕ್ತ ತನಿಖೆ ಆಗಬೇಕೆಂದು ಒತ್ತಾಯಿಸಿದ್ದೇನೆವಲಸೆ ಕಾರ್ಮಿಕರ ಮಾಹಿತಿ ಪಡೆಯುವಂತೆ ನಗರಸಭೆಗೆ ಸೂಚಿಸಿದ್ದೇನೆ,ಬಾಂಗ್ಲಾ ಮೂಲದ ವಲಸೆ ಕಾರ್ಮಿಕರಿದ್ದಲ್ಲಿ ಜಿಲ್ಲೆಗೆ ಅಪಾಯ,ನಗರ ಸಭೆ ಅಧ್ಯಕ್ಷರ ನೇತೃತ್ವದಲ್ಲಿ ಸಕ್ರಿಯ ಕಾರ್ಯಾಚರಣೆ ನಡೆಸಲಾಗುವುದು
ಪ್ರತಿ ವಾರ್ಡ್ನಲ್ಲಿ ವಲಸೆ ಕಾರ್ಮಿಕರ ಮೇಲೆ ನಿಗಾ ಇರಿಸಲಾಗುವುದು, ಬಾಂಗ್ಲಾ ಮೂಲದವರಿದ್ದರೆ ಪತ್ತೆ ಹಚ್ಚಲಾಗುವುದುಉಡುಪಿಯಲ್ಲಿ ಬಹಳಷ್ಟು ಕಟ್ಟಡ ಕಾರ್ಮಿಕರಿದ್ದಾರೆ
ಮೀನುಗಾರಿಕಾ ಚಟುವಟಿಯಲ್ಲೂ ಅನೇಕ ಮಂದಿ ಹೊರಗಿನವರು ತೊಡಗಿಸಿಕೊಂಡಿದ್ದಾರೆ.ಬಾಂಗ್ಲಾ ಮೂಲದವರಿಗೆ ಅವಕಾಶ ಕೊಡುವುದಿಲ್ಲ ಎಂದು ಎಲ್ಲರೂ ನಿರ್ಧರಿಸಬೇಕು,ವೆಸ್ಟ್ ಬೆಂಗಾಲ್ ನಲ್ಲಿ ಯಾವ ರೀತಿ ಪರಿಸ್ಥಿತಿ ನಿರ್ಮಾಣವಾಗಿದೆ ನೋಡಿದ್ದೇವೆ
ಮಮತಾ ಬ್ಯಾನರ್ಜಿ ತನ್ನ ಕುರ್ಚಿ ಗಾಗಿ ಈ ರೀತಿ ಮಾಡಿದ್ದಾರೆ,ಪರಿಣಾಮ ಇಡೀ ದೇಶಕ್ಕೆ ಸಮಸ್ಯೆಯಾಗಿದೆ
ಉಡುಪಿಯ ಜನ ಅಂತಹ ತಪ್ಪು ಮಾಡುವುದಿಲ್ಲ ಎಂದಿದ್ದಾರೆ.