ಕಾರ್ಕಳ:ಮನೆಯ ಬಾಗಿಲ ಬಳಿ ಇರಿಸಿದ್ದ ಕೀಯನ್ನು ಬಳಸಿ, ಕಳ್ಳತನ ಮಾಡಿದ್ದ ಆರೋಪಿಯನ್ನು ಕಾರ್ಕಳ ಪೊಲೀಸರು ಬಂಧಿಸಿದ್ದಾರೆ.ಕಾರ್ಕಳ ತಾಲೂಕಿನ ಮುಡಾರು ಗ್ರಾಮದ ಗುರ್ಗಾಲ್ ಗುಡ್ಡೆಯಲ್ಲಿರುವ ಮನೆಯಲ್ಲಿ ಕೀಯನ್ನು ಹೊರಗಡೆ ಡಬ್ಬಿಯಲ್ಲಿ ಇರಿಸಿಲಾಗಿತ್ತು. ಈ ಕೀ ಬಳಸಿ ಬಾಗಿಲು ತೆರೆದು, ಮನೆಯ ಒಳಗಡೆ ಪ್ರವೇಶಿಸಿದ್ದ ಕಳ್ಳ ಮನೆಯ ಬೆಡ್ ರೂಮ್‌ನಲ್ಲಿದ್ದ ಗೋದ್ರೇಜ್ ಲಾಕರ್ ನ್ನು ಅಲ್ಲೇ ಇರಿಸಿದ್ದ ಕೀ ಸಹಾಯದಿಂದ ತೆರೆದು ಲಾಕರ್ ನಲ್ಲಿರಿಸಿದ್ದ ಚಿನ್ನಾಭರಣಗಳ ಪೈಕಿ ಸುಮಾರು 33 ಪವನ್ ತೂಕದ 10,05,000/- ಅಂದಾಜು ಮೌಲ್ಯದ ವಿವಿಧ ರೀತಿಯ ಚಿನ್ನಾಭರಣಗಳನ್ನು ಕದ್ದಿದ್ದ.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಕಾರ್ಕಳ ಗ್ರಾಮಾಂತರ ಪೊಲೀಸರು, ಆರೋಪಿಯನ್ನು ಶೀಘ್ರ ಪತ್ತೆ ಮಾಡಿದ್ದಾರೆ. ಆರೋಪಿಯನ್ನು ಮಾಳ ಗ್ರಾಮದ ಸಂತೋಷ್.ಟಿ ಎಂದು ಗುರುತಿಸಲಾಗಿದೆ. ಆರೋಪಿ ಯನ್ನು ವಶಕ್ಕೆ ಪಡೆದು, ಆಪಾದಿತನಿಂದ ಕಳವು ಮಾಡಿದ 33 ಪವನ್ ತೂಕದ 10,05,000 ಮೌಲ್ಯದ ಚಿನ್ನಾಭರಣ ಮತ್ತು ಕೃತ್ಯಕ್ಕೆ ಬಳಸಿದ್ದ ಬೈಕ್ ವಶಪಡಿಸಿಕೊಳ್ಳಲಾಗಿದೆ.