ಕೊಲ್ಲೂರು:ಶ್ರೀ ಕ್ಷೇತ್ರ ಕೊಲ್ಲೂರು ಮೂಕಾಂಬಿಕಾ ಕ್ಷೇತ್ರದಲ್ಲಿ ದೇವರ ದರ್ಶನಕ್ಕೆ ಬಂದಿದ್ದ ಕೇರಳ ಮೂಲದ ಭಕ್ತರೋರ್ವರ ಬ್ಯಾಗಿನಲ್ಲಿಟ್ಟಿದ್ದ ಚಿನ್ನ ಕಳವು ನಡೆದಿರುವ ಬಗ್ಗೆ ಕೊಲ್ಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಕ್ಟೋಬರ್ ಹದಿನೆಂಟರಂದು ಸಾಯಿ ಪ್ರಸನ್ನ ಎನ್ನುವವರು ಕ್ಷೇತ್ರಕ್ಕೆ ಅಗಮಿಸಿದ್ದು,ದರುಶನಕ್ಕೆ ಹೋಗುವ ಮುನ್ನ ತನ್ನ ಚಿನ್ನವನ್ನು ಸಣ್ಣ ಪರ್ಸಿನಲ್ಲಿಟ್ಟು,ಅದನ್ನು ಕಂದು ಬಣ್ಣದ ರೆಗ್ಸಿನ್ ಬ್ಯಾಗಿನಲ್ಲಿ ಇಟ್ಟು ಸೇವಾ ಚೀಟಿ ಕೌಂಟರ್ ಬಳಿ ಇಡಲಾಗಿತ್ತು.
ದೇವರವ ದರುಶನ ಹಾಗೂ ನೃತ್ಯಕಾರ್ಯಕ್ರಮ ಮುಗಿಸಿ ಸೇವಾ ಚೀಟಿ ಕೌಂಟರ್ ಬಳಿ ಬಂದು ಬ್ಯಾಗ್ ಪರಿಶೀಲಿಸಿದಾಗ ಚಿನ್ನದ ಪರ್ಸ್ ಕಳವು ಅಗಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಕೊಲ್ಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಲ್ಲೂರು: ಪಿರ್ಯಾದಿದಾರರಾದ ಸಾಯಿಪ್ರಸನ್ನ(52), ಕೇರಳ ರಾಜ್ಯ ಇವರು ದಿನಾಂಕ 18/10/2024 ರಂದು ಸಂಜೆ 5:30 ಗಂಟೆಗೆ, ಕೊಲ್ಲೂರು ಗ್ರಾಮದ ಕೊಲ್ಲೂರಿನ ದೇವಿಕೃಪಾ ಲಾಡ್ಜ್‌ನಿಂದ ಸಂಬಂಧಿಯಾದ ನಿಕೇತ್‌ರವರ ಮಗಳ ಡಾನ್ಸ್ ಕಾರ್ಯಕ್ರಮ ನೋಡಲು ಹಾಗೂ ಮೂಕಾಂಬಿಕಾ ದೇವರ ದರ್ಶನ ಪಡೆಯಲು, ತಾನು ತಂದಿದ್ದ ಚಿನ್ನದ ಆಭರಣವನ್ನು ಒಂದು ಚಿಕ್ಕ ಪರ್ಸ್‌ನಲ್ಲಿ ಹಾಕಿ ಪರ್ಸ್‌ನ್ನು ತನ್ನ ಕಂದು ಬಣ್ಣದ ರೆಕ್ಸಿನ್ ಬ್ಯಾಗ್‌ನಲ್ಲಿ ಇಟ್ಟುಕೊಂಡು ಹೋಗಿ, ಸಂಜೆ 6:00 ಗಂಟೆಯಿಂದ 7:00 ಗಂಟೆಯ ತನಕ ಸ್ವರ್ಣಮುಖಿ ಮಂಟಪದಲ್ಲಿ ಕಾರ್ಯಕ್ರಮ ನೋಡಿ, ಅಲ್ಲಿಂದ ಮೂಕಾಂಬಿಕಾ ದೇವಸ್ಥಾನಕ್ಕೆ ಹೋಗಿ ಕ್ಯೂ ನಲ್ಲಿ ನಿಂತು ದೇವರ ದರ್ಶನ ಮಾಡಿ, ಸಂಜೆ 7:35 ಗಂಟೆಗೆ ದೇವಸ್ಥಾನದ ಸೇವಾಚೀಟಿ ಕೌಂಟರ್‌ನಲ್ಲಿ ಬ್ಯಾಗ್ ಚೆಕ್ ಮಾಡಿ ನೋಡಲಾಗಿ, ಯಾರೋ ಕಳ್ಳರು ಪಿರ್ಯಾದಿದಾರರ ರೆಕ್ಸಿನ್ ಬ್ಯಾಗ್‌ನ ಜಿಪ್‌ತೆಗೆದು ಚಿನ್ನದ ಒಡವೆಯಿರುವ ಪರ್ಸ್‌ನ್ನು ಕಳವು ಮಾಡಿರುವುದು ತಿಳಿದು ಬಂದಿರುತ್ತದೆ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 61/2024 ಕಲಂ: 302 (2) ) BNS ರಂತೆ ಪ್ರಕರಣ ದಾಖಲಾಗಿರುತ್ತದೆ