ಉಡುಪಿಕಾಪುಕಾರ್ಕಳ

ಕೇಂದ್ರದ ಬಿಜೆಪಿ ಸರ್ಕಾರದಲ್ಲಿ ದೇಶದ ಭದ್ರತೆ ಅಪಾಯದಲ್ಲಿ ಪ್ರಸಾದ್ ರಾಜ್ ಕಾಂಚನ್

ಉಡುಪಿ: ಇತ್ತೀಚಿನ ದಿನದಲ್ಲಿ ಬಾಂಗ್ಲಾದೇಶದ ನಾಗರಿಕರು ಕರಾವಳಿ ಜಿಲ್ಲೆಗಳಲ್ಲಿ ವಾಸವಿರುವುದನ್ನು ಕಂಡು ಕಾಂಗ್ರೆಸ್ ಮುಖಂಡರಾದ ಪ್ರಸಾದ್ ರಾಜ್ ಕಾಂಚನ್ ಕೇಂದ್ರ ಸರ್ಕಾರದ ಆಡಳಿತದ ಬಗ್ಗೆ ತೀವ್ರ ಖಂಡಿಸಿದ್ದಾರೆ .ಕಳೆದ 11 ವರ್ಷಗಳಿಂದ ಆಡಳಿತ ಮಾಡುತ್ತಿರುವ ಬಿಜೆಪಿ ಸರಕಾರ, ಅದರ ಗೃಹ ಇಲಾಖೆಯ ಆಡಳಿತ ಕ್ರಮದ ಬಗ್ಗೆ, ದೇಶದ ಜನರ ಹಿತದೃಷ್ಟಿ ಮತ್ತು ಭದ್ರತೆಯ ಬಗ್ಗೆ ತೀವ್ರ ನಿರಾಸೆಯನ್ನು ವ್ಯಕ್ತಪಡಿಸಿದ್ದಾರೆ.ಕಾಂಗ್ರೆಸ್ ಆಡಳಿತ ಇರುವ ಸಮಯದಲ್ಲಿ ಬಿಜೆಪಿ ಸರಕಾರವು ನೆರೆದೇಶದ ಜನರು ಭಾರತಕ್ಕೆ ನುಸುಳಿಕೊಂಡು ಬಂದು ಇಲ್ಲಿ ಜೀವನ ಮಾಡಲು ಕಾಂಗ್ರೆಸ್ ಸರಕಾರ ಅವಕಾಶ ಕೊಡುತ್ತಿದ್ದಾರೆಂದು ಸುಳ್ಳು ಆರೋಪ ಮಾಡಿ ಜನರ ದಿಕ್ಕನ್ನು ತಪ್ಪಿಸಿ ಅಧಿಕಾರಕ್ಕೆ ಬಂದಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ನೆರೆ ರಾಷ್ಟ್ರ ಬಾಂಗ್ಲಾದೇಶದ ಪ್ರಜೆಗಳು ಭಾರತಕ್ಕೆ ಬಂದು ಅದೂ ಕರಾವಳಿ ಜಿಲ್ಲೆಗಳಲ್ಲಿ ವಾಸಿಸುವಂತೆ ಪ್ರೇರಣೆಯನ್ನು ಬಿಜೆಪಿ ಕೊಡುತ್ತಿದೆ ಎಂದು ಆರೋಪಿಸಿದ್ದಾರೆ.ಇನ್ನಾದರೂ ಬಿಜೆಪಿ ಆಡಳಿತ ಪಕ್ಷದ ನಾಯಕರು ಬೇರೆ ಪಕ್ಷದj ನಾಯಕರಿಗೆ ವ್ಯಂಗ್ಯ ಮಾಡುವುದನ್ನು ಬಿಟ್ಟು ಆಡಳಿತ ಪಕ್ಷವಾದ ತನ್ನ ಪಕ್ಷದ ಸಚಿವರಿಗೆ ಬುದ್ಧಿ ಹೇಳುವಂತೆ ಪತ್ರಿಕೆಗೆ ತಿಳಿಸಿದ್ದಾರೆ.

Related posts

ಮಗುವಿನ ಮೇಲೆ ದೌರ್ಜನ್ಯ ಎಸಗಿದ ಅರೋಪಿಯಿಂದ ಪೊಲೀಸರ ಮೇಲೆ ಅಟ್ಯಾಕ್

Udupilive News

ನಿರ್ಭಿತವಾದ ಪತ್ರಿಕೋದ್ಯಮ ಇಂದಿನ ಅತೀ ಅಗತ್ಯ: ಡಾ.ವಿದ್ಯಾ ಕುಮಾರಿ

Udupilive News

ಸೆಪ್ಟಂಬರ್ 14 ರಂದು ಕೇರಳ ಸಮಾಜಂ (ರಿ)ಉಡುಪಿವತಿಯಿಂದ ಒಣಂ ಸಂಭ್ರಮಾಚರಣೆ

Udupilive News

Leave a Comment