ಉಡುಪಿ

ಶಾಂತಿ ಸೌಹರ್ದೆತೆ ತವರೂರಲ್ಲಿ ಬೆಂಕಿ ಹಚ್ಚೋ ಕೆಲಸ ಮಾಡದಿರಿ.ಶರಣ್ ಪಂಪ್ ವೆಲ್ ವಿರುದ್ದ ಕಿಡಿ ಕಾರಿದ ಪ್ರಸಾದ್ ರಾಜ್ ಕಾಂಚನ್.

ಉಡುಪಿ: ಬ್ರಹ್ಮಾವರದ ಕುಂಜಾಲುವಿನಲ್ಲಿ ನಡೆದಿರುವ ದನದ ರುಂಡ ಪತ್ತೆಯಾದ ಪ್ರಕರಣಕ್ಕೆ ಸಂಭಂಧಿಸಿ ಹಿಂದೂ ಸಂಘಟನೆ ಮುಖಂಡ ಶರಣ್ ಪಂಪ್ ವೆಲ್ ನೀಡಿರುವ ಹೇಳಿಕೆಗಳಿಗೆ ಉಡುಪಿ ಕಾಂಗ್ರೆಸ್ ಮುಖಂಡ ಪ್ರಸಾದ್ ರಾಜ್ ಕಾಂಚನ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಕರಣಕ್ಕೆ ಸಂಭಂಧಿಸಿದಂತೆ ಉಡುಪಿ ಎಸ್ ಪಿ ನೇತೃತ್ವದ ಪೊಲೀಸರ ತಂಡ ಅರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.ಅದರೆ ಸಮಾಜದಲ್ಲಿ ಆಶಾಂತಿಯನ್ನೇ ಬಯಸುವ ಕಿಡಿಗೇಡಿಗಳು ಮತ್ತೆ ಮತ್ತೆ ಅದೇ ವಿಚಾರದಲ್ಲಿ ಕೋಮು ಸೌಹರ್ದ ಕೆಡಿಸುವ ಕಾರ್ಯಕ್ಕೆ ಕೈ ಹಾಕಿರುವುದು ಶೋಚನೀಯ.

ಈ ಪ್ರಕರಣದಲ್ಲಿ ಹಲವು ಮಂದಿ ಬಂಧಿತರಾಗಿದ್ದರೂ ಕೂಡ ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ ವೆಲ್ ಜಿಲ್ಲೆಯಲ್ಲಿ ಆಶಾಂತಿ ಸೃಷ್ಟಿ ಮಾಡುವ ದೃಷ್ಟಿಯಲ್ಲಿ ಉಡುಪಿಗೆ ಅಗಮಿಸಿ ಅನಗತ್ಯ ಗೊಂದಲ ಹಾಗೂ ಕೋಮು ದ್ವೇಷಿ ಹೇಳಿಕೆಗಳನ್ನು ನೀಡುತ್ತಿರುವುದು ಖಂಡನೀಯ ಎಂದು ಹೇಳಿದ್ದಾರೆ.

ಉಡುಪಿ ಜಿಲ್ಲೆ ಸುರಕ್ಷಿತ ಹಾಗೂ ಪ್ರಜ್ಞಾವಂತರ ಜಿಲ್ಲೆ.ಇಲ್ಲಿನ ಜನ ಶಾಂತಿ ನೆಮ್ಮದಿಯನ್ನು ಬಯಸುತ್ತಾರೆ.ಅದರೆ ದಕ್ಷಿಣ ಕನ್ನಡದಲ್ಲಿ ಕೋಮು ದ್ವೇಷಗಳನ್ನು ಹರಡಿಸಿ ಶಾಂತಿ ಕದಡಿಸಿದ ಶರಣ್ ಪಂಪ್ ವೆಲ್ ಈಗ ಉಡುಪಿ ಜಿಲ್ಲೆಯಲ್ಲಿ ಕೋಮು ಸೌಹರ್ದ ಕೆಡಿಸಲು ತೊಡಗೊಸಿದ್ದು ಇದಕ್ಕೆ ಉಡುಪಿ ಜಿಲ್ಲೆ ಜನ ಬೆಂಬಲಿಸುವಿದಿಲ್ಲ ಎಂದಿದ್ದಾರೆ.

ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ಕೋಮು ದ್ವೇಶ ಹರಡಿಸಿ ದಾಂಧಲೆ ಹಬ್ಬಿಸುವವರ ವಿರುದ್ದ ಕೋಮು ಹಿಂಸೆ ನಿಗ್ರಹ ದಳ ರಚನೆ ಮಾಡಿದೆ.ಈ ಕಾನೂನಿನ ಅಡಿಯಲಿಯಲ್ಲಿ ಉಡುಪಿ ಜಿಲ್ಲಾ ಪೊಲೀಸರು ಶರಣ್ ಪಂಪ್ ವೆಲ್ ಮೇಲೆ ಕಠಿಣ ಕಾನೂನು ಕ್ರಮ ಕೈಗೊಂಡು ,ಜಿಲ್ಲೆಯಲ್ಲಿ ಶಾಂತಿ‌ ಸೌರ್ಹದತೆಗೆ ಧಕ್ಕೆಯಾಗದಂತೆ ನೋಡಿಕೊಳ್ಳಲಿ ಎಂದು ಆಗ್ರಹಿಸಿದರು.

Related posts

ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ಕನ್ನಡ ಭಾಷೆ ಗೊತ್ತಿರುವ ಅಧಿಕಾರಿಗಳನ್ನು ನೇಮಿಸಿ: ಬ್ಯಾಂಕ್ಗಳಿಗೆ ಕೋಟ ಸಲಹೆ

Udupilive News

ಅ.9ರಂದು ಉಡುಪಿಯ ಗೀತಾಂಜಲಿ ಸಿಲ್ಕ್ಸ್’ನಲ್ಲಿ ನವೀಕೃತ ಪುರುಷರ ವಿಭಾಗದ ಉದ್ಘಾಟನೆ ಸ್ವದೇಶಿ-ವಿದೇಶಿಯ ಎಲ್ಲ ಪ್ರಮುಖ ಬ್ರಾಂಡ್ ಗಳು ಲಭ್ಯ

Udupilive News

ಬೈಂದೂರು: ಸ್ಕೂಟಿಗೆ ಮಣ್ಣು ತುಂಬಿದ ಲಾರಿ ಡಿಕ್ಕಿ ಹೊಡೆದು ಪಲ್ಟಿ- ಮಣ್ಣಿನಡಿಯಲ್ಲಿ ಸಿಲುಕಿದ ಮಹಿಳೆಯ ರಕ್ಷಣೆ

Udupilive News

Leave a Comment