ಉಡುಪಿ

ಭಯೋತ್ಪಾದಕರ ವಿರುದ್ಧದ ಕ್ರಮಗಳಿಗೆ ಬೆಂಬಲ: ಆಪರೇಷನ್ ಸಿಂಧೂರ್ ಬಗ್ಗೆ ಸಿಪಿಐ(ಎಂ)

ಉಡುಪಿ: ಪಾಕಿಸ್ತಾನ-ಆಕ್ರಮಿತ ಕಾಶ್ಮೀರ ಮತ್ತು ಪಾಕಿಸ್ತಾನದಲ್ಲಿನ ಭಯೋತ್ಪಾದಕ ಶಿಬಿರಗಳು ಮತ್ತು ಮೂಲಸೌಕರ್ಯಗಳನ್ನು ನಾಶಮಾಡುವ ಉದ್ದೇಶದಿಂದ ಭಾರತೀಯ ಸಶಸ್ತ್ರ ಪಡೆಗಳು ಆಪರೇಷನ್ ಸಿಂಧೂರ್ ಅನ್ನು ನಡೆಸಿವೆ. ಈ ಪ್ರಹಾರಗಳನ್ನು ನಿದಿಷ್ಟ ಗುರಿಗಳ ಮೇಲೆ, ಅಳೆದು-ಸುರಿದು ಮತ್ತು ಮುಂದೆಳೆದುಕೊಂಡು ಹೋಗದ ರೀತಿಯಲ್ಲಿ ಮಾಡಲಾಗಿದೆ ಹಾಗೂ ಒಂಬತ್ತು ಸ್ಥಳಗಳಲ್ಲಿ ಯಶಸ್ವಿಯಾಗಿ ಇದನ್ನು ನಡೆಸಲಾಯಿತು ಎಂದು ಸಶಸ್ತ್ರ ಪಡೆಗಳು ಹೇಳಿವೆ.

ಒಕ್ಕೂಟ ಸರ್ಕಾರ ಕರೆದ ಸರ್ವಪಕ್ಷ ಸಭೆಯಲ್ಲಿ, ಭಯೋತ್ಪಾದಕರು ಮತ್ತು ಅವರ ನಿರ್ವಾಹಕರ ವಿರುದ್ಧ ಗುರಿಯಿಟ್ಟು ಒಕ್ಕೂಟ ಸರ್ಕಾರ ತೆಗೆದುಕೊಳ್ಳುವ ಕ್ರಮಗಳಿಗೆ ಎಲ್ಲಾ ರಾಜಕೀಯ ಪಕ್ಷಗಳು ಬೆಂಬಲ ನೀಡಿದ್ದವು ಎಂಬುದನ್ನು ಈ ಸಂದರ್ಭದಲ್ಲಿ ಸಿಪಿಐ(ಎಂ) ಪೊಲಿಟ್‍ಬ್ಯುರೊ ಹೇಳಿದೆ

ಈ ಕ್ರಮಗಳ ಜೊತೆಗೆ, ಪಹಲ್ಗಾಮ್‌ನಲ್ಲಿ ಮುಗ್ಧ ಜನರ ಹತ್ಯಾಕಾಂಡಕ್ಕೆ ಕಾರಣರಾದವರನ್ನು ಹಸ್ತಾಂತರಿಸಲು ಮತ್ತು ತನ್ನ ಪ್ರದೇಶದಿಂದ ಯಾವುದೇ ಭಯೋತ್ಪಾದಕ ಶಿಬಿರಗಳು ಕಾರ್ಯನಿರ್ವಹಿಸದಂತೆ ನೋಡಿಕೊಳ್ಳಲು ಪಾಕಿಸ್ತಾನದ ಮೇಲೆ ಒತ್ತಡ ಹೇರುವುದನ್ನು ಮುಂದುವರಿಸಬೇಕು. ಜನರ ಐಕ್ಯತೆ ಮತ್ತು ದೇಶದ ಸಮಗ್ರತೆಯನ್ನು ರಕ್ಷಿಸಲಾಗುತ್ತಿದೆ ಎಂಬುದನ್ನು ಭಾರತ ಸರ್ಕಾರ ಖಚಿತಗೊಳಿಸಿಕೊಳ್ಳಬೇಕು ಎಂದು ಸಿಪಿಐ(ಎಂ) ಹೇಳಿದೆ.

Related posts

ಪಿಸ್ತೂಲಿನಿಂದ ಶೂಟ್ ಮಾಡಿ ಸಾಯಿಸುವುದಾಗಿ ಬೆದರಿಕೆ ಹಾಕಿ ಹಲ್ಲೆ.ಪ್ರಕರಣ ದಾಖಲು

Udupilive News

*ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕಿನಿಂದ ನಡೆದ ವಂಚನೆ ಆರೋಪದ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಯಲಿ – ರಮೇಶ್ ಕಾಂಚನ್*

Udupilive News

ಪ್ರತಿಷ್ಟಿತ ಭಾರತ್ ಬ್ಯಾಂಕಿಗೆ ಬೆಸ್ಟ್ ಹೆಚ್ ಅರ್ ಮ್ಯಾನೇಜ್ಮೆಂಟ್ ಅವಾರ್ಡ್

Udupilive News

Leave a Comment