Blogಉಡುಪಿ

ಗ್ಯಾರೇಜಿನಲ್ಲಿಟ್ಟಿದ್ದ ಕಾರು ಕಳವು!

ಉಡುಪಿ: HOT TRACK AUTO EXPERTS ಗ್ಯಾರೇಜಿನಲ್ಲಿ ದುರಸ್ತಿಗಾಗಿ ಇಟ್ಟಿದ್ದ ಕಾರು ಕಳವು ಮಾಡಲಾಗಿದೆ.

ದೂರುದಾರ ಆರೀಫ್ ಸಾಹೇಬ್(42) ಕೊಡವೂರು,ಮಲ್ಪೆ, ಇವರು ಉಡುಪಿ ತಾಲ್ಲೂಕು ಕುತ್ಪಾಡಿ ಗ್ರಾಮದ ಬಲೈಪಾದೆಯಲ್ಲಿರುವ HOT TRACK AUTO EXPERTS ಎಂಬ ಗ್ಯಾರೇಜನ್ನು ನಡೆಸಿಕೊಂಡಿದ್ದಾರೆ. ದಿನಾಂಕ:23/11/2024 ರಂದು ಮಧ್ಯಾಹ್ನ 12 ಗಂಟೆಗೆ ಮೊಹಮ್ಮದ್ ಅಶ್ರಫ್ ಎಂಬುವವರ ಕೆಲಸದ ಹುಡುಗ ಮೊಹಮ್ಮದ್ ಅಶ್ರಫ್ ಎಂಬವರಿಗೆ ಸಂಬಂಧಿಸಿದ KA25MC6300 TOYOTA ETIOS LIVA ಕೆಂಪು ಬಣ್ಣದ ಕಾರನ್ನು ಪೇಂಟಿಂಗ್ ಮತ್ತು ಪೊಲೀಶ್ ಮಾಡಲು ಗ್ಯಾರೇಜ್ ತಂದು ಇಟ್ಟಿದ್ದರು. ರಾತ್ರಿ 11 ಗಂಟೆಯವರೆಗೆ ಗ್ಯಾರೇಜ್ ನಲ್ಲಿ ಕೆಲಸ ಮಾಡಿ‌ಹೋಗಿದ್ದರು.

24 ರಂದು ಬೆಳಿಗ್ಗೆ 7 ಗಂಟೆಗೆ ಗ್ಯಾರೇಜಿನ ಸ್ಥಳದ ಮಾಲಕರಾದ ಸುನೀಲ್ ರವರು ಕರೆ ಮಾಡಿ ಯಾರೋ ಗ್ಯಾರೇಜಿನ ಕೋಣೆಯನ್ನು ತೆರೆದಿರುವುದಾಗಿ ತಿಳಿಸಿದಾಗ ಗ್ಯಾರೇಜಿಗೆ ಬಂದು ನೋಡಿದಾಗ ಗ್ಯಾರೇಜಿನ ಶೆಟರಿನ ಬಾಗಿಲಿಗೆ ಅಳವಡಿಸಿದ ಬೀಗವನ್ನು ಯಾವುದೋ ರಾಡ್ ನಿಂದ ಮೇಟಿ ಬೀಗವನ್ನು ತೆಗೆದು ಗ್ಯಾರೆಜಿನ ಒಳಗೆ ಪ್ರವೇಶಿಸಿ ಕಂಡುಬಂದಿದೆ. ಹೊರಗಡೆ ನಿಲ್ಲಿಸಿದ್ದ KA25MC6300 ಕಾರು ಇಟ್ಟ ಸ್ಥಳದಲ್ಲಿ ಇಲ್ಲದೇ ಇದ್ದು, ಗ್ಯಾರೇಜಿನ ಸಿಸಿಟಿವಿಯನ್ನು ಪರಿಶೀಲಿಸಿದಾಗ ದಿನಾಂಕ:24/11/2024 ರಂದು ಬೆಳಿಗ್ಗೆ 4:35 ಗಂಟೆಯಿಂದ 5:10 ಗಂಟೆಯ ಮಧ್ಯಾವಧಿಯಲ್ಲಿ ಕಳ್ಳರು ಗ್ಯಾರೇಜಿನ ಶಟರಿಗೆ ಅಳವಡಿಸಿದ ಬೀಗವನ್ನು ಯಾವುದೋ ಆಯುಧದಿಂದ ಮೀಟಿ ಬೀಗವನ್ನು ಒಡೆದು ಗ್ಯಾರೇಜಿನ ಒಳಗೆ ಇಟ್ಟಿದ್ದ ಕಾರಿನ ಕೀಯನ್ನು ತೆಗೆದು ಹೊರಗಡೆ ನಿಲ್ಲಿಸಿದ್ದ ಕಾರನ್ನು ಕಳವು ಮಾಡಿಕೊಂಡು ಹೋಗಿದ್ದಾರೆ. ಕಳುವಾದ ಕಾರಿನ ಅಂದಾಜು ಮೌಲ್ಯ 4,80,000/- ರೂಪಾಯಿಗಳು.

ಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ: 200/2024 ಕಲಂ:331(4) 305 303(2) ಬಿಎನ್ಎಸ್ ರಂತೆ ಪ್ರಕರಣ ದಾಖಲಿಸಲಾಗಿದೆ

Related posts

ಶ್ರೀರಾಮಸೇನೆಯ ಜಿಲ್ಲಾಧ್ಯಕ್ಷರಾಗಿ ಸುಧರ್ಶನ್ ಪೂಜಾರಿ

Udupilive News

Udupilive News

ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ 2024ನೇ ಸಾಲಿನ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

Udupilive News

Leave a Comment