ಉಡುಪಿ

ಸಾಯಲು ಹೊರಟ ಯುವಕನಿಗೆ ಹೊಸಬದುಕು ನೀಡಿದ ಹೊಸಬದುಕು ಆಶ್ರಮ

ಬೈಂದೂರಿನಲ್ಲಿ ಚಲಿಸುತ್ತಿರುವ ರೈಲಿನಿಂದ ಆಯತಪ್ಪಿ ಬಿದ್ದು ತಲೆಗೆ ಬಲವಾದ ಪೆಟ್ಟು ಬಿದ್ದು ಗಾಯವಾಗಿ ಅಸಹಾಯಕ ಸ್ಥಿತಿಯಲ್ಲಿ ಇದ್ದ ಯುವಕನನ್ನು ಗಂಗೊಳ್ಳಿ ಪೊಲೀಸ್ ಠಾಣೆಯ ಎಸ್.ಐ. ಹರೀಶ್ ಆರ್ ಅವರು ರಕ್ಷಣೆ ಮಾಡಿದ್ದಾರೆ.ಹೊಸ ಬದುಕು ಅಶ್ರಮಕ್ಕೆ ದಾಖಲಿಸಿದ್ದರು.ಆತನ ಬಳಿಯಿದ್ದ ಅಧಾರ್ ಕಾರ್ಡ್ ನಿಂದ ಆತನ ಹೆಸರು ರಂಜಿತ್, ಬೋಪಾಲ್ ರಾಜ್ಯದವ ಎಂದು ತಿಳಿದು ಬಂದಿದೆಪೊಲೀಸರು ಆತನ ಊರು ಕಲೆಹಾಕಿ ಕೂಡಲೇ ಮನೆಯವರನ್ನು ಸಂಪರ್ಕಿಸಿ ಮಾಹಿತಿ ನೀಡಿದ್ದಾರೆ.ಕುಟುಂಬಸ್ಥರು ಹೊಸಬದುಕು ಆಶ್ರಮಕ್ಕೆ ಬಂದು ಅದೇ ದಿನ ಯುವಕನನ್ನು ಮರಳಿ ಮನೆಗೆ ಕರೆದುಕೊಂಡು ಹೋಗಿದ್ದಾರೆ, ಯುವಕನ ಬಳಿ ಇದ್ದ ಆಧಾರ್ ಕಾರ್ಡ್ ಇನ್ನಿತರ ಕಾರ್ಡ್ ಹಾಗೂ ಆತನ ಬಳಿ ಇದ್ದ ನಗದನ್ನು ಕುಟುಂಬಸ್ಥರಿಗೆ ಒಪ್ಪಿಸಲಾಯಿತು.ಈ ಸಂಧರ್ಭದಲ್ಲಿ ಹೊಸಬದುಕು ಆಶ್ರಮದ ವ್ಯವಸ್ಥಾಪಕರಾದ ನಿತ್ಯಾನಂದ ಒಳಕಾಡು, ವಿನಯಚಂದ್ರ, ರಾಜಶ್ರೀ ಅವರ ಮೊದಲ ಪ್ರಯತ್ನಕ್ಕೆ ಸಾರ್ವಜನಿಕರಿಂದ ಶ್ಲಾಘನೀಯ ವ್ಯಕ್ತವಾಗಿದೆ.

Related posts

ಉಡುಪಿ: ಪ್ರಾಚ್ಯ ವಿದ್ಯಾ ಸಮ್ಮೇಳನ ಉದ್ಘಾಟನೆಗೆ ಉಡುಪಿಗೆ ಆಗಮಿಸಿದ ಬಾಬಾ ರಾಮದೇವ್

Udupilive News

ಮಣಿಪಾಲ: ಕಾನೂನು ಉಲ್ಲಂಘನೆ ಡೀ-ಟೀ(ಭವಾನಿ) ಹಾಗೂ ಸೆವೆಂತ್ ಹೆವೆನ್ ಬಾರ್ ಆ್ಯಂಡ್ ರೆಸ್ಟೋರೆಂಟ್ ಪರವಾನಿಗೆ ರದ್ದು.

Udupilive News

ಬಿಜೆಪಿ ಎಸ್.ಟಿ. ಮೋರ್ಚಾ ವತಿಯಿಂದ ಪಡುಕರೆ ಕಾರುಣ್ಯ ವಿಶೇಷ ಶಾಲೆಗೆ ಕೊಡುಗೆ

Udupilive News

Leave a Comment